ಕ್ಯಾನ್ಸರ್ ಔಷಧಗಳ ಬೆಲೆಯಲ್ಲಿ ಭಾರಿ ಇಳಿಕೆ: 1,364 ಔಷಧಗಳ ಪರಿಷ್ಕೃತ ದರ ಜಾರಿ

ನವದೆಹಲಿ, ನ.9 : ಕ್ಯಾನ್ಸರ್ ಚಿಕಿತ್ಸೆಗೆ ಬಳಸುವ 137 ಔಷಧಗಳ ಗರಿಷ್ಠ ಚಿಲ್ಲರೆ ಮಾರಾಟ ಬೆಲೆ (ಎಂಆರ್‌ಪಿ) ಮೇಲೆ ವ್ಯಾಪಾರ ಮಾರ್ಜಿನ್ ಮಿತಿಯನ್ನು ರಾಷ್ಟ್ರೀಯ ಔಷಧ ಬೆಲೆ ನಿಯಂತ್ರಣ ಪ್ರಾಧಿಕಾರ (ಎನ್‌ಪಿಪಿಎ) ನಿಗದಿಪಡಿಸಿದೆ. ಇದರಿಂದ ಕ್ಯಾನ್ಸರ್ ಔಷಧಗಳ ಬೆಲೆಯಲ್ಲಿ ಗಣನೀಯ ಇಳಿಕೆಯಾಗಿದ್ದು, ಗ್ರಾಹಕರಿಗೆ ವಾರ್ಷಿಕ ಅಂದಾಜು 3,540.38 ಕೋಟಿ ರೂಪಾಯಿ ಉಳಿತಾಯವಾಗುವ ನಿರೀಕ್ಷೆಯಿದೆ.

ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯದ ಔಷಧ ಇಲಾಖೆ ಅಧೀನದಲ್ಲಿರುವ ಎನ್‌ಪಿಪಿಎ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಆರೋಗ್ಯ ಸೇವೆಗಳ ಮಹಾನಿರ್ದೇಶನಾಲಯ (ಡಿಜಿಹೆಚ್‌ಎಸ್) ರಚಿಸಿದ್ದ ತಜ್ಞರ ಸಮಿತಿಯ ಶಿಫಾರಸುಗಳ ಆಧಾರದ ಮೇಲೆ ಈ ನಿರ್ಧಾರ ಕೈಗೊಂಡಿದೆ. 2026ರ ಅಕ್ಟೋಬರ್ 17ರಂದು ಸಮಿತಿ ಶಿಫಾರಸುಗಳನ್ನು ನೀಡಿತ್ತು. ಪರಿಷ್ಕೃತ ದರಗಳು ಇಂದಿನಿಂದಲೇ ಜಾರಿಗೆ ಬಂದಿವೆ ಎಂದು ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

ನವೆಂಬರ್ 8ರ ವೇಳೆಗೆ 85 ಔಷಧ ತಯಾರಿಕಾ ಕಂಪನಿಗಳು 121 ಔಷಧಗಳಿಗೆ ಸಂಬಂಧಿಸಿದ 1,364 ಕ್ಯಾನ್ಸರ್ ಔಷಧಗಳ ಪರಿಷ್ಕೃತ ಬೆಲೆಗಳನ್ನು ಪ್ರಕಟಿಸಿವೆ. ಈ ಪೈಕಿ 679 ಬ್ರ್ಯಾಂಡ್‌ಗಳ ಔಷಧಗಳ ಬೆಲೆಯಲ್ಲಿ ಶೇ.50ಕ್ಕಿಂತ ಹೆಚ್ಚು ಇಳಿಕೆಯಾಗಿದೆ. ಗರಿಷ್ಠ ಬೆಲೆ ಇಳಿಕೆ ಶೇ.96.45ರಷ್ಟಿದೆ ಎಂದು ಪ್ರಕಟಣೆ ತಿಳಿಸಿದೆ.

ಔಷಧ ಖರೀದಿಸುವ ಗ್ರಾಹಕರು ಪ್ಯಾಕೆಟ್ ಮೇಲೆ ನಮೂದಿಸಿರುವ ಪರಿಷ್ಕೃತ ಎಂಆರ್‌ಪಿ ಪರಿಶೀಲಿಸಬಹುದು. ಅಲ್ಲದೆ, ‘ಫಾರ್ಮಾ ಸಹಿ ದಾಮ್’ ಮೊಬೈಲ್ ಆ್ಯಪ್ ಅಥವಾ ಎನ್‌ಪಿಪಿಎ ಅಧಿಕೃತ ವೆಬ್‌ಸೈಟ್ (nppa.gov.in) ಮೂಲಕ ಔಷಧಗಳ ಬೆಲೆಯನ್ನು ಖಚಿತಪಡಿಸಿಕೊಳ್ಳಬಹುದು.

ಯಾವುದೇ ಔಷಧ ಅಂಗಡಿ ಅಥವಾ ಆಸ್ಪತ್ರೆಯ ಔಷಧಾಲಯಗಳು ಪರಿಷ್ಕೃತ ಎಂಆರ್‌ಪಿಗಿಂತ ಹೆಚ್ಚಿನ ದರದಲ್ಲಿ ಔಷಧ ಮಾರಾಟ ಮಾಡುವಂತಿಲ್ಲ. ಹೆಚ್ಚಿನ ಬೆಲೆ ವಸೂಲಿ ಅಥವಾ ಬೆಲೆ ಸಂಬಂಧಿತ ದೂರುಗಳಿದ್ದಲ್ಲಿ ಗ್ರಾಹಕರು ‘ಫಾರ್ಮಾ ಜನ ಸಮಾಧಾನ್’ ಪೋರ್ಟಲ್ ಮೂಲಕ ದೂರು ದಾಖಲಿಸಬಹುದು. ಇಲ್ಲವೇ ಎನ್‌ಪಿಪಿಎ ಸಹಾಯವಾಣಿ 1800-111-255 ಸಂಪರ್ಕಿಸಬಹುದು.

ಕ್ಯಾನ್ಸರ್ ಚಿಕಿತ್ಸೆಗೆ ಅಗತ್ಯವಿರುವ ಔಷಧಗಳು ಜನಸಾಮಾನ್ಯರಿಗೆ ಕೈಗೆಟುಕುವ ದರದಲ್ಲಿ ಲಭ್ಯವಾಗುವಂತೆ ಮಾಡುವ ನಿಟ್ಟಿನಲ್ಲಿ ಈ ಕ್ರಮ ಮಹತ್ವದ್ದಾಗಿದೆ ಎಂದು ಸಚಿವಾಲಯ ಈ ಹಿಂದೆ ತಿಳಿಸಿತ್ತು.

2026ರ ಅಕ್ಟೋಬರ್ 17ರಂದು ಹೊರಡಿಸಲಾದ ಎಸ್‌ಒ 5690(ಇ) ಅಧಿಸೂಚನೆಯಡಿ ಜಾರಿಗೆ ಬಂದಿರುವ ನಿಯಮಗಳು ಮುಂದಿನ ಆದೇಶದವರೆಗೂ ಮುಂದುವರಿಯಲಿವೆ. ಈ ನಿಯಮಗಳ ಪ್ರಕಾರ, ಔಷಧ ತಯಾರಿಕಾ ಕಂಪನಿಗಳು 2013ರ ಔಷಧಗಳ (ಬೆಲೆ ನಿಯಂತ್ರಣ) ಆದೇಶದ ಪ್ಯಾರಾಗ್ರಾಫ್ 20(1)ರ ಅಡಿಯಲ್ಲಿ ವಾರ್ಷಿಕ ಬೆಲೆ ಪರಿಷ್ಕರಣೆಗೆ ಅವಕಾಶ ಹೊಂದಿವೆ. ಆದರೆ, ಔಷಧಗಳ ಮೇಲಿನ ವ್ಯಾಪಾರ ಮಾರ್ಜಿನ್ ಶೇ.30ರ ಮಿತಿಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗುತ್ತದೆ.

More articles

Latest article

Most read