ಯೆಮನ್‌ನಲ್ಲಿ ಸಿಲುಕಿದ್ದ 19 ಭಾರತೀಯ ನಾವಿಕರ ಸುರಕ್ಷಿತ ಸ್ಥಳಾಂತರ: ಭಾರತಕ್ಕೆ ವಾಪಸ್

ನವದೆಹಲಿ: ಯೆಮನ್‌ನ ಹೊಡೆದಾ ಮತ್ತು ಸನಾ ನಗರಗಳಲ್ಲಿ ಸುಮಾರು ಎರಡು ವಾರಗಳಿಂದ ಸಿಲುಕಿಕೊಂಡಿದ್ದ 19 ಭಾರತೀಯ ನಾವಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದ್ದು, ಅವರು ಭಾರತಕ್ಕೆ ಮರಳುತ್ತಿದ್ದಾರೆ ಎಂದು ಯೆಮನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಭಾನುವಾರ ತಿಳಿಸಿದೆ.

ಎಲ್ಲ ನಾವಿಕರು ಸುರಕ್ಷಿತವಾಗಿದ್ದು, ಉತ್ತಮ ಆರೋಗ್ಯದಲ್ಲಿದ್ದಾರೆ. ಭಾರತಕ್ಕೆ ವಾಪಸಾಗುತ್ತಿದ್ದಾರೆ ಎಂದು ರಾಯಭಾರ ಕಚೇರಿ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿದೆ. ಸ್ಥಳಾಂತರ ಕಾರ್ಯಕ್ಕೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದೆ.

ಇದಕ್ಕೂ ಕೆಲವು ದಿನಗಳ ಹಿಂದೆ ಯೆಮನ್ ಕರಾವಳಿಯಲ್ಲಿ ನಡೆದ ಘಟನೆಯೊಂದರಲ್ಲಿ ಭಾಗಿಯಾಗಿದ್ದ ಯಾಟ್‌ನಲ್ಲಿದ್ದ 14 ಭಾರತೀಯರು ಸುರಕ್ಷಿತವಾಗಿದ್ದಾರೆ ಎಂದು ಭಾರತ ದೃಢಪಡಿಸಿತ್ತು. ಆದರೆ ಇದೀಗ ಸ್ಥಳಾಂತರಗೊಂಡಿರುವ 19 ನಾವಿಕರ ಪೈಕಿ ಈ 14 ಮಂದಿ ಇದ್ದಾರೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಅಕ್ಟೋಬರ್ 23ರಂದು ಹೊಡೆದಾ ಸಮೀಪದ ಯಾಟ್‌ನಲ್ಲಿದ್ದ 14 ಭಾರತೀಯರು ಸುರಕ್ಷಿತವಾಗಿದ್ದಾರೆ ಎಂದು ಭಾರತೀಯ ರಾಯಭಾರ ಕಚೇರಿ ತಿಳಿಸಿತ್ತು. ಘಟನೆಯ ಹಿಂದಿನ ಪರಿಸ್ಥಿತಿಗಳ ಕುರಿತು ಮಾಹಿತಿ ಸಂಗ್ರಹಿಸಲು ಸಂಬಂಧಪಟ್ಟವರೊಂದಿಗೆ ಸಂಪರ್ಕದಲ್ಲಿರುವುದಾಗಿಯೂ ಹೇಳಿತ್ತು.

ಯೆಮನ್‌ನ ಹೌತಿ ಸಂಘಟನೆಯ ವಕ್ತಾರ ಯಾಹ್ಯಾ ಸರೀ, ಕೆಂಪು ಸಮುದ್ರದ ಯೆಮನ್ ಕರಾವಳಿಯ ಯುಖಾರ್ ದ್ವೀಪದ ಸಮೀಪ ಭಾರತೀಯ ಯಾಟ್ ಮೇಲೆ ಸೌದಿ ಪಡೆಗಳು ದಾಳಿ ನಡೆಸಿದ್ದವು ಎಂದು ಹೇಳಿದ್ದಾಗಿ ಕೆಲವು ಅರಬ್ ಮಾಧ್ಯಮಗಳು ವರದಿ ಮಾಡಿದ್ದವು. ಆ ಹಡಗಿನಲ್ಲಿ 14 ಭಾರತೀಯರಿದ್ದು, ಅವರನ್ನು ರಕ್ಷಿಸುವ ಕಾರ್ಯದಲ್ಲಿ ಹೌತಿ ಪಡೆಗಳು ಭಾಗಿಯಾಗಿದ್ದವು ಎಂದು ಅವರು ಹೇಳಿದ್ದರು.

ಸೌದಿ–ಹೌತಿ ಸಂಘರ್ಷದಿಂದ ಸಮುದ್ರ ಮಾರ್ಗಕ್ಕೆ ಆತಂಕ

ಸೌದಿ ಅರೇಬಿಯಾ ಮತ್ತು ಯೆಮನ್‌ನ ಹೌತಿ ಬಂಡುಕೋರರ ನಡುವಿನ ಉದ್ವಿಗ್ನತೆ ಮತ್ತೆ ಹೆಚ್ಚುತ್ತಿರುವ ಸಂದರ್ಭದಲ್ಲೇ ಈ ಬೆಳವಣಿಗೆ ನಡೆದಿದೆ. ಇತ್ತೀಚಿನ ದಿನಗಳಲ್ಲಿ ಹೌತಿಗಳು ಉಡಾಯಿಸಿದ ಕ್ಷಿಪಣಿ ಮತ್ತು ಡ್ರೋನ್‌ಗಳನ್ನು ಸೌದಿ ಪಡೆಗಳು ತಡೆದಿದ್ದು, ಇದಕ್ಕೆ ಪ್ರತಿಯಾಗಿ ಸೌದಿ ನೇತೃತ್ವದ ಮೈತ್ರಿಕೂಟ ಯೆಮನ್‌ನಲ್ಲಿ ವೈಮಾನಿಕ ದಾಳಿ ನಡೆಸಿದೆ ಎಂದು ವರದಿಯಾಗಿದೆ.

2022ರ ಕದನ ವಿರಾಮದ ಬಳಿಕ ತುಸು ಶಾಂತವಾಗಿದ್ದ ಪ್ರದೇಶದಲ್ಲಿ ಮತ್ತೆ ವ್ಯಾಪಕ ಸಂಘರ್ಷ ಆರಂಭವಾಗುವ ಆತಂಕ ಎದುರಾಗಿದೆ. ಈ ಬೆಳವಣಿಗೆಯಿಂದ ನಾಗರಿಕರು, ಇಂಧನ ಮೂಲಸೌಕರ್ಯಗಳ ಸುರಕ್ಷತೆ ಹಾಗೂ ಕೆಂಪು ಸಮುದ್ರ ಮತ್ತು ಬಾಬ್ ಅಲ್-ಮಂದಬ್ ಜಲಸಂಧಿಯಲ್ಲಿನ ಹಡಗು ಸಂಚಾರದ ಭದ್ರತೆ ಕುರಿತು ಕಳವಳ ಹೆಚ್ಚಾಗಿದೆ.

ಅಂತರರಾಷ್ಟ್ರೀಯ ಸಾಗಣೆ ದೃಷ್ಟಿಯಿಂದ ಅತ್ಯಂತ ಮಹತ್ವದ ಸಮುದ್ರ ಮಾರ್ಗವಾಗಿರುವ ಬಾಬ್ ಅಲ್-ಮಂದಬ್ ಜಲಸಂಧಿಯಲ್ಲಿ ಭದ್ರತಾ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವ ಸಾಧ್ಯತೆಯ ಬಗ್ಗೆಯೂ ಆತಂಕ ವ್ಯಕ್ತವಾಗಿದೆ.

More articles

Latest article

Most read