ಕರವೇ ಅಭಿಯಾನದ ವಿರುದ್ಧ ಅವಹೇಳನಕಾರಿ ಹೇಳಿಕೆ: ತೀವ್ರ ವಿರೋಧದ ಬಳಿಕ ಪೋಸ್ಟ್ ಅಳಿಸಿದ ಐಪಿಎಸ್ ಅಧಿಕಾರಿ

ಬೆಂಗಳೂರು, ನ.03 : ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗಾವಕಾಶ ಕಲ್ಪಿಸುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಆರಂಭಿಸಿರುವ ‘ಆಗ್ರಹ ಅಭಿಯಾನ’ದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ತಮಿಳುನಾಡು ಕೇಡರ್‌ನ ಐಪಿಎಸ್ ಅಧಿಕಾರಿ ಧನುಷ್ ಕುಮಾರ್ ಅವರು ತೀವ್ರ ವಿರೋಧದ ಹಿನ್ನೆಲೆಯಲ್ಲಿ ತಮ್ಮ ಪೋಸ್ಟ್ ಅನ್ನು ಅಳಿಸಿದ್ದಾರೆ.

ಕರವೇ ಸದಸ್ಯರು ಬೆಂಗಳೂರಿನ ವಿವಿಧ ಐಟಿ ಕಂಪನಿಗಳಿಗೆ ಭೇಟಿ ನೀಡಿ, ನೇಮಕಾತಿ ಪ್ರಕ್ರಿಯೆ ಮತ್ತು ಉದ್ಯೋಗಿಗಳ ವಿವರಗಳನ್ನು ಒದಗಿಸುವಂತೆ ಮನವಿ ಪತ್ರಗಳನ್ನು ಸಲ್ಲಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿದ್ದ ಧನುಷ್ ಕುಮಾರ್, “ಕೆಲಸವಿಲ್ಲದವರೆಲ್ಲರೂ ಇತರರು ಕೆಲಸ ಮಾಡುವುದನ್ನು ತಡೆಯುತ್ತಿದ್ದಾರೆ” ಎಂಬ ಅರ್ಥದ ಅವಹೇಳನಕಾರಿ ಹೇಳಿಕೆ ನೀಡಿದ್ದರು.

ಈ ಹೇಳಿಕೆಯ ಸ್ಕ್ರೀನ್‌ಶಾಟ್ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಕನ್ನಡಿಗರ ಉದ್ಯೋಗ ಹಕ್ಕುಗಳಿಗಾಗಿ ನಡೆಯುತ್ತಿರುವ ಅಭಿಯಾನವನ್ನು ತಪ್ಪಾಗಿ ಬಿಂಬಿಸಲಾಗುತ್ತಿದೆ ಎಂಬ ಆಕ್ಷೇಪ ವ್ಯಕ್ತವಾಗಿತ್ತು. ತೀವ್ರ ವಿರೋಧದ ಬಳಿಕ ಅಧಿಕಾರಿ ತಮ್ಮ ಪೋಸ್ಟ್ ಅಳಿಸಿದ್ದಾರೆ.

ಕರವೇ ರಾಜ್ಯ ಸಂಘಟನಾ ಕಾರ್ಯದರ್ಶಿಯೂ ಆಗಿರುವ ಐಟಿ ಉದ್ಯಮಿ ಅರುಣ್ ಜಾವಗಲ್ ಐಪಿಎಸ್ ಅಧಿಕಾರಿ ಧನುಷ್ ಕುಮಾರ್ ಅವರ ಪೋಸ್ಟ್ ಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರಿಗೆ ಟ್ಯಾಗ್ ಮಾಡಿ, ನಿಮ್ಮ ಸರ್ಕಾರದ ಉದ್ಯೋಗಿ ಕನ್ನಡಿಗರ ನ್ಯಾಯಯುತವಾದ ಅಭಿಯಾನಕ್ಕೆ ವಿರೋಧ ವ್ಯಕ್ತಪಡಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದರು.

ನೇಮಕಾತಿ ಮಾಹಿತಿ ಕೇಳುವುದು ಕೆಲಸಕ್ಕೆ ಅಡ್ಡಿಪಡಿಸಿದಂತೆಯೇ?

ಕರವೇಯ ‘ಆಗ್ರಹ ಅಭಿಯಾನ’ದ ಉದ್ದೇಶ ಐಟಿ ಮತ್ತು ಇತರ ಖಾಸಗಿ ಕಂಪನಿಗಳಲ್ಲಿ ಕನ್ನಡಿಗರಿಗೆ ಸಿಗುತ್ತಿರುವ ಉದ್ಯೋಗಾವಕಾಶಗಳ ಬಗ್ಗೆ ಮಾಹಿತಿ ಸಂಗ್ರಹಿಸುವುದು. ಕಂಪನಿಗಳ ಒಟ್ಟು ಉದ್ಯೋಗಿಗಳ ಸಂಖ್ಯೆ, ಅವರಲ್ಲಿ ಕನ್ನಡಿಗರ ಪ್ರಮಾಣ, ಕಳೆದ ಮೂರು ವರ್ಷಗಳಲ್ಲಿ ನಡೆದ ನೇಮಕಾತಿ, ನೇಮಕಾತಿಯ ಮಾನದಂಡಗಳು ಹಾಗೂ ಸ್ಥಳೀಯ ಅಭ್ಯರ್ಥಿಗಳಿಗೆ ನೀಡಲಾಗುತ್ತಿರುವ ಅವಕಾಶಗಳ ಕುರಿತು ಮಾಹಿತಿ ಕೇಳಲಾಗುತ್ತಿದೆ.

ಶಾಂತಿಯುತ ಅಭಿಯಾನಕ್ಕೆ ತಪ್ಪು ಚಿತ್ರಣ

ಕಂಪನಿಗಳಿಗೆ ಭೇಟಿ ನೀಡುವ ಸಂದರ್ಭದಲ್ಲಿ ಯಾವುದೇ ಘೋಷಣೆ ಕೂಗಬಾರದು, ಸಂಘರ್ಷಕ್ಕೆ ಇಳಿಯಬಾರದು ಮತ್ತು ಕೆಲಸಕ್ಕೆ ಅಡ್ಡಿಪಡಿಸಬಾರದು ಎಂದು ಕಾರ್ಯಕರ್ತರಿಗೆ ಸೂಚಿಸಲಾಗಿದೆ ಎಂದು ಕರವೇ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ತಿಳಿಸಿದ್ದಾರೆ.

ಅಭಿಯಾನದ ಮೂಲಕ ಸಂಗ್ರಹಿಸುವ ಮಾಹಿತಿ ಮತ್ತು ಉದ್ಯೋಗಾಕಾಂಕ್ಷಿಗಳ ದೂರುಗಳನ್ನು ಪರಿಶೀಲಿಸಿ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸುವ ಉದ್ದೇಶವಿದೆ. ನವೆಂಬರ್ ತಿಂಗಳಾದ್ಯಂತ ರಾಜ್ಯದ ವಿವಿಧ ಭಾಗಗಳಲ್ಲಿ ಅಭಿಯಾನ ಮುಂದುವರಿಯಲಿದೆ.

ನೇಮಕಾತಿಯಲ್ಲಿ ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಪ್ರಶ್ನಿಸುವುದು ಅಪರಾಧವಲ್ಲ. ಉದ್ಯೋಗಾವಕಾಶಗಳ ಬಗ್ಗೆ ಮಾಹಿತಿ ಕೇಳುವುದನ್ನು ಕೆಲಸಕ್ಕೆ ಅಡ್ಡಿಪಡಿಸುವಿಕೆ ಎಂದು ಬಿಂಬಿಸುವುದು ಸರಿಯಲ್ಲ ಎಂಬ ಆಕ್ಷೇಪ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.

ಕನ್ನಡಿಗರ ಉದ್ಯೋಗ ಹಕ್ಕುಗಳಿಗಾಗಿ ನಡೆಯುತ್ತಿರುವ ಶಾಂತಿಯುತ ಅಭಿಯಾನದ ಬಗ್ಗೆ ಜವಾಬ್ದಾರಿಯುತವಾಗಿ ಮಾತನಾಡಬೇಕಾದ ಅಧಿಕಾರಿಯೊಬ್ಬರು, ಈ ರೀತಿಯ ಅವಹೇಳನಕಾರಿ ಹೇಳಿಕೆ ನೀಡಿರುವುದು ಸಾರ್ವಜನಿಕ ಚರ್ಚೆಗೆ ಕಾರಣವಾಗಿದೆ.

More articles

Latest article

Most read