ನಮ್ಮ ಮೆಟ್ರೋ ‘ಗುಲಾಬಿ ಮಾರ್ಗ’ಕ್ಕೆ ನ.13ರಂದು ಪ್ರಧಾನಿ ನರೇಂದ್ರ ಮೋದಿ ಚಾಲನೆ

ಬೆಂಗಳೂರು, ನ.03 : ನಮ್ಮ ಮೆಟ್ರೋ ‘ಗುಲಾಬಿ ಮಾರ್ಗ’ಕ್ಕೆ ನ.13ರಂದು ಪ್ರಧಾನಿ ನರೇಂದ್ರ ಮೋದಿ  ಚಾಲನೆ ನೀಡಲಿದ್ದಾರೆ.

ಇದೇ ನ.15ರಂದು ಗುಲಾಬಿ ಮಾರ್ಗಕ್ಕೆ ಚಾಲನೆ ನೀಡಲಾಗುತ್ತದೆ ಎಂದು ಹೇಳಲಾಗಿತ್ತು. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರು ನ.13ರಂದು ರಾಜ್ಯಕ್ಕೆ ಭೇಟಿ ನೀಡಲಿದ್ದು, ಈ ವೇಳೆ ನಮ್ಮ ಮೆಟ್ರೋ ಗುಲಾಬಿ ಮಾರ್ಗಕ್ಕೆ ಚಾಲನೆ ನೀಡಲಿದ್ದಾರೆ ಎಂದು ಸಂಸದ ತೇಜಸ್ವಿ ಸೂರ್ಯ ಖಚಿತಪಡಿಸಿದ್ದಾರೆ.

ಗುಲಾಬಿ ಮಾರ್ಗದ ಮೊದಲ ಹಂತದಲ್ಲಿ ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗಿನ 6 ನಿಲ್ದಾಣಗಳು ಕಾರ್ಯಾರಂಭ ಮಾಡಲಿದ್ದು, ಬನ್ನೇರುಘಟ್ಟ ರಸ್ತೆ, ಜಯದೇವ ಆಸ್ಪತ್ರೆ ಜಂಕ್ಷನ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಸಂಚಾರ ದಟ್ಟಣೆಗೆ ದೊಡ್ಡ ಮಟ್ಟದ ಪರಿಹಾರ ಸಿಗಲಿದೆ ಎಂದು ನಿರೀಕ್ಷಿಸಲಾಗುತ್ತಿದೆ.

ಪ್ರಧಾನಿ ಕಾರ್ಯಕ್ರಮವನ್ನು ಬನ್ನೇರುಘಟ್ಟ ರಸ್ತೆಯ ಪ್ರಮುಖ ಸ್ಥಳವೊಂದರಲ್ಲಿ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತದೆ. ಅಂದು ಪ್ರಧಾನಿ ನಮ್ಮ ಮೆಟ್ರೋ ಗುಲಾಬಿ ಮಾರ್ಗಕ್ಕೆ ಚಾಲನೆ ನೀಡಿದ ಬಳಿಮ ಮೈಸೂರಿಗೆ ತೆರಳಲಿದ್ದಾರೆ.

ಪಿಂಕ್ ಲೈನ್ ಮಾರ್ಗದ ವಿಶೇಷತೆ?

* ಕಾಳೇನ ಅಗ್ರಹಾರದಿಂದ (ಬನ್ನೇರುಘಟ್ಟ ರಸ್ತೆ) ನಾಗವಾರದವರೆಗೆ.

* ಸುಮಾರು 21.3 ಕಿಲೋಮೀಟರ್ ಉದ್ದದ ಮಾರ್ಗ. ಇದರಲ್ಲಿ ಮೇಲ್ಸೇತುವೆ ಹಾಗೂ ಸುರಂಗ ಮಾರ್ಗ ಎರಡೂ ಸೇರಿವೆ.

* ಮೊದಲ ಹಂತದಲ್ಲಿ ಕಾಳೇನ ಅಗ್ರಹಾರದಿಂದ ತಾವರೆಕೆರೆ ನಿಲ್ದಾಣಗಳವರೆಗೆ ಉದ್ಘಾಟನೆ

* ಈ ಮಾರ್ಗದಲ್ಲಿ ಕಾಳೇನ ಅಗ್ರಹಾರ, ಹುಳಿಮಾವು, ಐಐಎಂಬಿ, ಜೆ.ಪಿ. ನಗರ 4ನೇ ಹಂತ, ಜಯದೇವ ಆಸ್ಪತ್ರೆ (ಹಳದಿ ಮತ್ತು ಗುಲಾಬಿ ಮಾರ್ಗಗಳ ಪ್ರಮುಖ ಇಂಟರ್‌ಚೇಂಜ್ ನಿಲ್ದಾಣ) ತಾವರೆಕೆರೆ ನಿಲ್ದಾಣಗಳು ಸೇರಿವೆ. 

More articles

Latest article

Most read