ಭಾರತದಲ್ಲಿ ಹೈಸ್ಪೀಡ್ ಇಂಟರ್‌ನೆಟ್ ಸೇವೆಗೆ ಸ್ಟಾರ್‌ಲಿಂಕ್ ಸಜ್ಜು

ನವದೆಹಲಿ: ಭಾರತದ ಉಪಗ್ರಹ ಆಧಾರಿತ ಇಂಟರ್‌ನೆಟ್ ಸೇವಾ ಮಾರುಕಟ್ಟೆಯಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಎಲಾನ್ ಮಸ್ಕ್ ಒಡೆತನದ ಸ್ಟಾರ್‌ಲಿಂಕ್ ನಡುವಿನ ವಾಕ್ಸಮರ ತೀವ್ರಗೊಂಡಿರುವ ಬೆನ್ನಲ್ಲೇ, ದೇಶದಲ್ಲಿ ಹೈಸ್ಪೀಡ್ ಇಂಟರ್‌ನೆಟ್ ಸೇವೆ ಒದಗಿಸಲು ಸಂಪೂರ್ಣ ಸಿದ್ಧತೆ ನಡೆಸಿರುವುದಾಗಿ ಸ್ಟಾರ್‌ಲಿಂಕ್ ಘೋಷಿಸಿದೆ.

ಭಾರತದಲ್ಲಿ ಕಳೆದ ಐದು ವರ್ಷಗಳಿಗೂ ಹೆಚ್ಚು ಕಾಲ ನಿಯಂತ್ರಣ ಸಂಸ್ಥೆಗಳು, ಉದ್ಯಮ ಪ್ರತಿನಿಧಿಗಳು ಹಾಗೂ ಟೆಲಿಕಾಂ ಆಪರೇಟರ್‌ಗಳೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸಲಾಗಿದೆ. ಭಾರತೀಯ ಬಳಕೆದಾರರ ಇಂಟರ್‌ನೆಟ್ ದತ್ತಾಂಶವನ್ನು ಸುರಕ್ಷಿತವಾಗಿ ನಿರ್ವಹಿಸಲು ದೇಶದೊಳಗೇ ವಿಶೇಷ ಮೂಲಸೌಕರ್ಯಗಳನ್ನು ನಿರ್ಮಿಸಲಾಗಿದ್ದು, ಅವುಗಳಿಗೆ ಸರ್ಕಾರದ ಅಗತ್ಯ ಅನುಮೋದನೆಗಳು ದೊರೆತಿವೆ ಎಂದು ಕಂಪನಿ ತಿಳಿಸಿದೆ.

ಭಾರತೀಯ ಇಂಟರ್‌ನೆಟ್ ಟ್ರಾಫಿಕ್ ಅನ್ನು ದೇಶದೊಳಗೇ ಸುರಕ್ಷಿತವಾಗಿ ನಿರ್ವಹಿಸಲು ವಿಶೇಷ ವ್ಯವಸ್ಥೆಗಳು, ಗೇಟ್‌ವೇಗಳು ಹಾಗೂ ಇತರ ಮೂಲಸೌಕರ್ಯಗಳ ಜಾಲವನ್ನು ನಿರ್ಮಿಸಲಾಗಿದೆ. ಈ ವ್ಯವಸ್ಥೆಗಳಿಗೆ ಸಂಬಂಧಿಸಿದ ಅಗತ್ಯ ಸರ್ಕಾರಿ ಅನುಮೋದನೆಗಳು ದೊರೆತಿವೆ. ಭಾರತವನ್ನು ವೇಗದ ಇಂಟರ್‌ನೆಟ್ ಸಂಪರ್ಕದೊಂದಿಗೆ ಜೋಡಿಸಲು ಸಿದ್ಧವಾಗಿದ್ದೇವೆ ಎಂದು ಸ್ಟಾರ್‌ಲಿಂಕ್ ಹೇಳಿದೆ.

More articles

Latest article

Most read