ಅಮೆರಿಕದಲ್ಲಿ ಹಿಂದೂ ದೇವಾಲಯದ ಮೇಲೆ ಸಾಮೂಹಿಕ ಗುಂಡಿನ ದಾಳಿಗೆ ಸಂಚು: 19 ವರ್ಷದ ಯುವಕ ಬಂಧನ!

ವಾಷಿಂಗ್ಟನ್ : ಅಮೆರಿಕದ ಇಲಿನಾಯ್ಸ್ ರಾಜ್ಯದ ಅರೋರಾ ಪ್ರದೇಶದಲ್ಲಿರುವ ಹಿಂದೂ ದೇವಾಲಯವೊಂದರ ಮೇಲೆ ಸಾಮೂಹಿಕ ಗುಂಡಿನ ದಾಳಿ ನಡೆಸಲು ಸಂಚು ರೂಪಿಸಿದ್ದ ಆರೋಪದ ಮೇಲೆ 19 ವರ್ಷದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತನ ಬಳಿ ಭಾರತೀಯ ಮೂಲದವರ ವಿರುದ್ಧ ಹಿಂಸಾಚಾರವನ್ನು ಉಲ್ಲೇಖಿಸುವ ಹಾಗೂ ಶ್ವೇತವರ್ಣೀಯರ ಶ್ರೇಷ್ಠತಾವಾದವನ್ನು ಪ್ರತಿಪಾದಿಸುವ ಪ್ರಣಾಳಿಕೆ ಪತ್ತೆಯಾಗಿರುವುದು ಆತಂಕ ಮೂಡಿಸಿದೆ.

ಇಲಿನಾಯ್ಸ್‌ನ ಪ್ಯಾಲಟೈನ್ ನಿವಾಸಿ ಅಲೆಕ್ಸಾಂಡ್ರೋಸ್ ಪಪೊರಾಕಿಸ್ (19) ಬಂಧಿತ ಆರೋಪಿ. ಅಕ್ಟೋಬರ್ 11ರಂದು ಆತನನ್ನು ಪೊಲೀಸರು ಬಂಧಿಸಿದ್ದು, ಹಿಂದೂ ಧಾರ್ಮಿಕ ಸ್ಥಳವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲು ಯೋಜಿಸಿದ್ದನೇ ಎಂಬ ಕುರಿತು ತನಿಖೆ ಮುಂದುವರಿದಿದೆ.

ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಅಕ್ಟೋಬರ್ 11ರಂದು ಅರೋರಾ ಪ್ರದೇಶದ ಹಿಂದೂ ಧಾರ್ಮಿಕ ಸ್ಥಳವೊಂದರ ಮೇಲೆ ದಾಳಿ ನಡೆಸಲು ಆರೋಪಿ ಯೋಜಿಸಿದ್ದಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ. ಆದರೆ ದಾಳಿಗೆ ನಿಖರವಾಗಿ ಯಾವ ದೇವಾಲಯವನ್ನು ಗುರಿಯಾಗಿಸಿಕೊಳ್ಳಲಾಗಿತ್ತು ಎಂಬುದು ಇನ್ನೂ ದೃಢಪಟ್ಟಿಲ್ಲ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.

ನವರಾತ್ರಿ ಸೇರಿದಂತೆ ಹಿಂದೂ ಹಬ್ಬಗಳ ಆಚರಣೆಯ ಸಂದರ್ಭದಲ್ಲೇ ಈ ಸಂಚು ಬೆಳಕಿಗೆ ಬಂದಿರುವುದು ಗಮನಾರ್ಹವಾಗಿದೆ. ಇದಕ್ಕೂ ಎರಡು ವಾರಗಳ ಹಿಂದೆ ಓಹಿಯೋ ರಾಜ್ಯದ ರಿಚ್ಮಂಡ್ ಹೈಟ್ಸ್‌ನಲ್ಲಿರುವ ಶ್ರೀ ಸ್ವಾಮಿನಾರಾಯಣ ವಡ್ತಾಲ್ ಧಾಮ್ ಹಿಂದೂ ಮಂದಿರವನ್ನು ದುಷ್ಕರ್ಮಿಗಳು ವಿರೂಪಗೊಳಿಸಿದ ಘಟನೆ ನಡೆದಿತ್ತು.

ಯುವಕನ ಸಂದೇಶಗಳಿಂದ ಬಯಲಾಯಿತು ದಾಳಿಯ ಸಂಚು!

ಅಕ್ಟೋಬರ್ 11ರಂದು ಮೌಂಟ್ ಪ್ರಾಸ್ಪೆಕ್ಟ್ ಪೊಲೀಸ್ ಇಲಾಖೆಯು ಸಂಭಾವ್ಯ ಸಾಮೂಹಿಕ ಗುಂಡಿನ ದಾಳಿಯ ಕುರಿತು ಪ್ಯಾಲಟೈನ್ ಪೊಲೀಸರಿಗೆ ಮಾಹಿತಿ ನೀಡಿತ್ತು.

ಅಲೆಕ್ಸಾಂಡ್ರೋಸ್ ಪಪೊರಾಕಿಸ್‌ನಿಂದ ಆತಂಕಕಾರಿ ಎಲೆಕ್ಟ್ರಾನಿಕ್ ಸಂದೇಶಗಳನ್ನು ಸ್ವೀಕರಿಸಿದ್ದ ವ್ಯಕ್ತಿಯೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ದರು.

ಆರೋಪಿ ಸಾಮೂಹಿಕ ಗುಂಡಿನ ದಾಳಿಗೆ ಸಂಬಂಧಿಸಿದ ಯೋಜನೆಯನ್ನು ವಿವರಿಸುವ ದಾಖಲೆಯೊಂದನ್ನು ಹಂಚಿಕೊಂಡಿದ್ದ ಎನ್ನಲಾಗಿದೆ.

ಅಲ್ಲದೆ, ರೈಫಲ್, ಮದ್ದುಗುಂಡುಗಳ ಮ್ಯಾಗಜಿನ್‌ಗಳು, ಗುಂಡು ನಿರೋಧಕ ರಕ್ಷಣಾ ಕವಚ ಹಾಗೂ ಇತರ ಯುದ್ಧೋಪಕರಣಗಳ ಚಿತ್ರಗಳನ್ನೂ ಹಂಚಿಕೊಂಡಿದ್ದ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

‘ನಾನು ಏಕೆ ಹೋರಾಡಿದೆ?’ ಹೆಸರಿನ ಪ್ರಣಾಳಿಕೆಯಲ್ಲಿ ಭಾರತೀಯರ ವಿರುದ್ಧ ದ್ವೇಷ!

ತನಿಖೆ ವೇಳೆ ಆರೋಪಿಗೆ ಸಂಬಂಧಿಸಿದೆ ಎನ್ನಲಾದ ‘Why I Fought: A.K.A.: (Aurora shooter’s manifesto)’ ಎಂಬ ಶೀರ್ಷಿಕೆಯ ದಾಖಲೆಯನ್ನು ಪೊಲೀಸರು ಪರಿಶೀಲಿಸಿದ್ದಾರೆ. ಈ ದಾಖಲೆಯಲ್ಲಿ ಶ್ವೇತವರ್ಣೀಯರ ಶ್ರೇಷ್ಠತಾವಾದ ಮತ್ತು ತೀವ್ರವಾದಿ ಸಿದ್ಧಾಂತಗಳನ್ನು ಪ್ರತಿಪಾದಿಸುವ ಹೇಳಿಕೆಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಶೇಷವಾಗಿ ದಕ್ಷಿಣ ಏಷ್ಯಾ ಮೂಲದವರು, ಅದರಲ್ಲೂ ಭಾರತೀಯ ಮೂಲದ ಜನರ ವಿರುದ್ಧ ಹಿಂಸಾಚಾರವನ್ನು ಉಲ್ಲೇಖಿಸುವ ಅಂಶಗಳು ಪ್ರಣಾಳಿಕೆಯಲ್ಲಿ ಕಂಡುಬಂದಿವೆ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.

ಮನೆಯಲ್ಲಿ ರೈಫಲ್, ನೂರಾರು ಗುಂಡುಗಳು ಪತ್ತೆ!

ಸಂಭಾವ್ಯ ದಾಳಿಯ ಮಾಹಿತಿ ದೊರೆತ ತಕ್ಷಣ ಪ್ಯಾಲಟೈನ್ ಮತ್ತು ಮೌಂಟ್ ಪ್ರಾಸ್ಪೆಕ್ಟ್ ಪೊಲೀಸ್ ಇಲಾಖೆಗಳು ಜಂಟಿಯಾಗಿ ಕಾರ್ಯಾಚರಣೆ ಆರಂಭಿಸಿದ್ದವು. ಅಕ್ಟೋಬರ್ 11ರ ಸಂಜೆ ಆರೋಪಿ ತನ್ನ ನಿವಾಸದಿಂದ ಹೊರಬರುತ್ತಿದ್ದಾಗ ಪೊಲೀಸರು ಆತನನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ. ನಂತರ ನ್ಯಾಯಾಲಯದ ಶೋಧನಾ ವಾರಂಟ್ ಪಡೆದು ಆತನ ನಿವಾಸದಲ್ಲಿ ತಪಾಸಣೆ ನಡೆಸಲಾಗಿದೆ.

ಈ ವೇಳೆ ರೈಫಲ್, ಗುಂಡುಗಳು ತುಂಬಿದ್ದ ಹಲವು ಮ್ಯಾಗಜಿನ್‌ಗಳು, ಹೆಚ್ಚುವರಿಯಾಗಿ ನೂರಾರು ರೈಫಲ್ ಗುಂಡುಗಳು, ಯುದ್ಧೋಪಕರಣಗಳು ಹಾಗೂ ತನಿಖೆಗೆ ಸಂಬಂಧಿಸಿದ ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಅಲ್ಲದೆ, ಗುಂಡು ನಿರೋಧಕ ರಕ್ಷಣಾ ಕವಚ ಹೊಂದಿದ್ದ ಟ್ಯಾಕ್ಟಿಕಲ್ ವೆಸ್ಟ್ ಕೂಡ ಪತ್ತೆಯಾಗಿದ್ದು, ಅದರ ಮೇಲೆ ಶ್ವೇತವರ್ಣೀಯರ ಶ್ರೇಷ್ಠತಾವಾದಿ ಉಗ್ರ ಸಿದ್ಧಾಂತಕ್ಕೆ ಸಂಬಂಧಿಸಿದ ಚಿಹ್ನೆಯಿರುವ ಪ್ಯಾಚ್ ಕಂಡುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಕ್ಟೋಬರ್ 30ರಂದು ಮತ್ತೆ ನ್ಯಾಯಾಲಯಕ್ಕೆ ಹಾಜರು

ಬಂಧಿತ ಅಲೆಕ್ಸಾಂಡ್ರೋಸ್ ಪಪೊರಾಕಿಸ್‌ನನ್ನು ಬುಧವಾರ ರೋಲಿಂಗ್ ಮೆಡೋಸ್‌ನ ಕುಕ್ ಕೌಂಟಿ ಮೂರನೇ ಮುನ್ಸಿಪಲ್ ಜಿಲ್ಲಾ ನ್ಯಾಯಾಲಯದಲ್ಲಿ ಬಂಧನ ಸಂಬಂಧಿತ ವಿಚಾರಣೆಗೆ ಹಾಜರುಪಡಿಸಲಾಗಿತ್ತು. ವಿಚಾರಣೆ ನಡೆಸಿದ ನ್ಯಾಯಾಧೀಶರು ಆರೋಪಿಯನ್ನು ಬಂಧನದಲ್ಲಿಡುವಂತೆ ಆದೇಶಿಸಿದ್ದಾರೆ. ಅಕ್ಟೋಬರ್ 30ರಂದು ಆತನನ್ನು ಮತ್ತೆ ನ್ಯಾಯಾಲಯಕ್ಕೆ ಹಾಜರುಪಡಿಸಲು ದಿನಾಂಕ ನಿಗದಿಪಡಿಸಲಾಗಿದೆ.

More articles

Latest article

Most read