ನ್ಯಾಯಕ್ಕಾಗಿ ಮೊಳಗಿದ ಮೌನ ಧ್ವನಿ: ಸೌಜನ್ಯಾ ಪರ ಬೃಹತ್‌ ಜಾಥಾದಲ್ಲಿ ಹರಿದುಬಂದ ಜನಸಾಗರ

ಬೆಳ್ತಂಗಡಿ : ಸೌಜನ್ಯಾ ಪರ ಹೋರಾಟಗಾರರಿಂದ  ಇಂದು ಉಜಿರೆಯಿಂದ ಬೆಳ್ತಂಗಡಿಯವರೆಗೆ ʼನ್ಯಾಯ ನಡಿಗೆʼ  ಮೌನ ಜಾಥಾವು ನಡೆಯಿತು.  ಸಾವಿರಾರು ಹೋರಾಟಗಾರರು ಮೆರವಣಿಗೆಯಲ್ಲಿ ಭಾಗವಹಿಸಿದರು.   

ಇತ್ತೀಚೆಗೆ ಸುಪ್ರೀಂ ಕೋರ್ಟ್‌ ಸೌಜನ್ಯಾ ಪ್ರಕರಣದ ಮರುತನಿಖೆಗೆ ಆದೇಶಿಸಿದ ಹಿನ್ನೆಲೆಯಲ್ಲಿ ಪ್ರಕರಣವನ್ನು ನಿರ್ವಹಿಸುವಲ್ಲಿ ಶ್ರಮಿಸಿದ ನ್ಯಾಯವಾದಿಗಳನ್ನು ಅಭಿನಂದಿಸುವ ಸಲುವಾಗಿ ಬೆಳ್ತಂಗಡಿಯ ಮೈದಾನದಲ್ಲಿ ಬೃಹತ್‌ ಸಮಾವೇಶವನ್ನು ಹಮ್ಮಿಕೊಳ್ಳಲಾಗಿತ್ತು.

ಧರ್ಮಸ್ಥಳ ಸೌಜನ್ಯ ಅತ್ಯಾಚಾರ-ಕೊಲೆ ಪ್ರಕರಣ ನಡೆದು 14 ವರ್ಷಗಳು ತುಂಬಿದ್ದು ಸೌಜನ್ಯಳ 14ನೇ ವರ್ಷದ ಸಂಸ್ಮರಣೆಯ ಪ್ರಯುಕ್ತ ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ, ಪ್ರಜಾಪ್ರಭುತ್ವ ವೇದಿಕೆಯ ನೇತೃತ್ವದಲ್ಲಿ ಕಾರ್ಯಕ್ರಮವು ನಡೆಯಿತು.

ಬೆಳ್ತಂಗಡಿಯ ಅಂಬೇಡ್ಕರ್ ಮೈದಾನದಲ್ಲಿ ‌ನಡೆದ ಅಭಿನಂದನಾ ಸಮಾವೇಶವನ್ನು ಸೌಜನ್ಯ ತಾಯಿ ಕುಸುಮಾವತಿ ಚಂದಪ್ಪ ಗೌಡ ಉದ್ಘಾಟಿಸಿದರು. ಅವರು ಮಾತನಾಡಿ ನಾವು ನ್ಯಾಯಕ್ಕಾಗಿ ಕಳೆದ 14 ವರ್ಷಗಳಿಂದ ಕಾಯುತ್ತಿದ್ದೇವೆ, ನ್ಯಾಯ ಸಿಗುವ ವರೆಗೆ ವಿರಮಿಸುವುದಿಲ್ಲ, ಹೊಸ ತನಿಖೆಯಿಂದ ನ್ಯಾಯ ಸಿಗಬಹುದು ಎಂಬ ಭರವಸೆ ಮೂಡಿದೆ ಎಂದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ  ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯ ಸಂಸ್ಥಾಪಕ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಮಾತನಾಡಿ “ತಪ್ಪುಗಳು ನಡೆಯುವುದು ಸರ್ವೇ ಸಾಮಾನ್ಯ. ಪದೇ ಪದೇ ತಪ್ಪುಗಳಾದರೆ ಅದು ಅಕ್ಷಮ್ಯವಾಗುತ್ತದೆ. ಅ ತಪ್ಪುಗಳನ್ನು  ನಾವು ಪ್ರತಿಭಟಿಸುತ್ತಿದ್ದೇವೆ. ಸೌಜನ್ಯಾ ಒಬ್ಬಳು ಮಾತ್ರವಲ್ಲ, ಸಾವಿರಾರು ಹೆಣ್ಣುಮಕ್ಕಳ ಅತ್ಯಾಚಾರ ಕೊಲೆಯಾಗಿದೆ. ಇದಕ್ಕೆ ಯಾರು ಕಾರಣರು ಎಂಬುದಕ್ಕೆ ಉತ್ತರ ಸಿಗಬೇಕಾಗಿದೆ. ರಾಜ್ಯ ಸರಕಾರ ನಮಗೆ ನ್ಯಾಯ ಕೊಡಿಸಬೇಕು. ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನಿಂದಾಗಿ ನ್ಯಾಯದ ಭರವಸೆ ಮೂಡಿದೆ. ಸಮರ್ಪಕವಾಗಿ ತನಿಖೆ ನಡೆಸುವ ಜವಾಬ್ದಾರಿ ರಾಜ್ಯ ಸರಕಾರದ್ದಾಗಿದೆ. ಈ ಹೋರಾಟ ಒಂದು ಸಾಂಕೇತಿಕ. ಈ ಬಾರಿ ನ್ಯಾಯ ಸಿಗದಿದ್ದರೆ ಮುಂದಿನ ದಿನಗಳಲ್ಲಿ ಲಕ್ಷಾಂತರ ಜನರು ಸೇರಿ ಸೌಜನ್ಯಾಳಿಗೆ ನ್ಯಾಯ ದೊರಕಿಸಲು ಈ ಹೋರಾಟವನ್ನು  ಮುಂದುವರಿಸುತ್ತೇವೆ” ಎಂದು ಗುಡುಗಿದರು.

ಸಭೆಯನ್ನು ಉದ್ದೇಶಿಸಿ ಮಾತಾಡಿದ ಹೋರಾಟಗಾರ ಗಿರೀಶ್ ಮಟ್ಟಣ್ಣನವರು “ಈ ದಿನ ಸಂಭ್ರಮದ ದಿನವಲ್ಲ. ಹದಿನಾಲ್ಕು ವರ್ಷಗಳ ಹಿಂದೆ ಇದೇ ಹೊತ್ತಲ್ಲಿ ಮಗು ಸೌಜನ್ಯಾ ಸತ್ತು ಬಿದ್ದಿತ್ತು. ಇದೇ ಹೊತ್ತಲ್ಲಿ ಇನ್ನೊಂದೆಡೆ ಈ ಪ್ರಕರಣವನ್ನು ಹೇಗೆ ಮುಚ್ಚಿ ಹಾಕುವುದೆಂಬ ಪ್ಲಾನ್‌ ನಡೆಯುತ್ತಿತ್ತು. ಅಂದಿನಿಂದಲೇ ಅಪರಾಧಿಗಳ ಪತ್ತೆಗೆ  ಹೋರಾಟ ನಡೆಯುತ್ತಾ ಬಂದಿದ್ದು ಇವತ್ತು ಸೌಜನ್ಯಾಳೇ ಒಂದು ಶಕ್ತಿಯಾಗಿ ಎದ್ದು ನಿಂತಿದ್ದಾಳೆ. ಹೋರಾಟಕ್ಕೆ ಜನ ಪ್ರವಾಹದಂತೆ  ಹರಿದುಬಂದು ಶಕ್ತಿ ತುಂಬುತ್ತಿದ್ದಾರೆ. ಹೋರಾಟ ಇನ್ನೇನು ಮುಗಿದೇ ಹೋಯಿತು ಅನ್ನುವಷ್ಟರಲ್ಲಿ ಸುಪ್ರೀಂ ಕೋರ್ಟ್‌ ಅದಕ್ಕೆ ಮರುಜೀವ ನೀಡಿದೆ ಎಂಬುದನ್ನು ಸ್ಮರಿಸಿಕೊಂಡರು.

ಈ ಹೋರಾಟದಲ್ಲಿ ನಾವೆಲ್ಲರೂ ಒಂದು ಎಂದು  ಹೇಳಿದ ಅವರು ಪಿ ಲಂಕೇಶ್‌ ಅವರನ್ನು ಸ್ಮರಿಸಿಕೊಂಡರು. ಸೌಜನ್ಯಾಳ ಪರವಾಗಿ  ಅವರ ಮಗಳು ಸಾಕಷ್ಟು ಬರೆದಳು. ‌ ಅಶ್ಫಾಕುಲ್ಲಾ ಖಾನ್ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ  ಹೇಗೆ ಕ್ರಾಂತಿಕಾರಿ ಭಗತ್‌ ಸಿಂಗ್‌ ಜತೆ ನಿಂತರೋ ಹಾಗೆ ಸಮೀರ್‌ ವಿಡಿಯೋಗಳನ್ನು ಮಾಡಿ ಹೋರಾಟದ ಜತೆ ಗಟ್ಟಿಯಾಗಿ ನಿಂತರು. ಹಿಂದೂ, ಮುಸ್ಲಿಂ, ಕ್ರೈಸ್ತರೆಲ್ಲರನ್ನೂ ಒಗ್ಗೂಡಿಸಿದ ಹೋರಾಟ ಇದು ಎಂದು ಹೇಳುತ್ತಾ ನಾವ್ಯಾರೂ ಲೆಫ್ಟಿಸ್ಟೂ  ಅಲ್ಲ, ರೈಟಿಸ್ಟೂ ಅಲ್ಲ ನಾವು ರೇಪಿಸ್ಟ್‌ ವಿರುದ್ಧ ಎಂದು ಅಭಿಪ್ರಾಯಿಸಿದರು.

ನ್ಯಾಯವಾದಿ ಮೋಹಿತ್ ಕುಮಾರ್, ಪ್ರಸನ್ನ ರವಿ ಹಾಗೂ ಇತರರು ಮಾತನಾಡಿದರು.

ಸೌಜನ್ಯಾಳ ಹೆತ್ತವರೊಂದಿಗೆ ಬೆಂಬಲವಾಗಿ ನಿಂತು ವಿವಿಧ ಹಂತದ ನ್ಯಾಯಾಲಯಗಳಲ್ಲಿ ಹೋರಾಟದುದ್ದಕ್ಕೂ ಉಚಿತವಾಗಿ ವಾದಮಂಡಿಸಿದ ನ್ಯಾಯವಾದಿಗಳಿಗೆ, ಮಾಧ್ಯಮಗಳಿಗೆ,  ಹೋರಾಟಗಾರರಿಗೆ ಸಭೆಯಲ್ಲಿ ಅಭಿನಂದನೆ ಸಲ್ಲಿಸಲಾಯಿತು.

ವೇದಿಕೆಯಲ್ಲಿ  ತಮ್ಮಣ್ಣ ಶೆಟ್ಟಿ,  ಜಯಂತ್ ಟಿ, ದಿನೇಶ್ ಗಾಣಿಗ, ಅಹೋರಾತ್ರ, ಹೈಕೋರ್ಟ್ ನ್ಯಾಯವಾದಿಗಳಾದ ಮೋಹಿತ್ ಕುಮಾರ್‌, ವಿಜಯ ವಾಸು ಪೂಜಾರಿ, ನವೀನ್ ಕುಮಾರ್, ಕೃಷ್ಣಪ್ಪ ಗೌಡ ದೇವಸ್ಯ ಮುಂತಾದವರು ಉಪಸ್ಥಿತರಿದ್ದರು.

More articles

Latest article

Most read