ಬೆಂಗಳೂರು, ಸೆ29 : ವೃತ್ತಿಪರತೆ ಕುಸಿಯುತ್ತಿರುವ ಕಾಲದಲ್ಲಿ ಜಿಎಂಸಿಯಂಥ ಸಂಸ್ಥೆಗಳ ಉಗಮ ಮತ್ತು ಬೆಳವಣಿಗೆ ಹೆಚ್ಚಾಗಬೇಕೆಂದು ಅರಣ್ಯ ಸಚಿವ ರಾಮಲಿಂಗಾ ರೆಡ್ಡಿ ಹೇಳಿದರು.
ಮಾಧ್ಯಮಗಳಲ್ಲಿ ಉದ್ಯಮಿಗಳ ನಿಯಂತ್ರಣ ಹೆಚ್ಚಾಗುತ್ತಿದ್ದು, ವೃತ್ತಿಪರತೆ ಕುಸಿಯುತ್ತಿರುವ ಈ ಸಂದರ್ಭದಲ್ಲಿ ಜಿಎಂಸಿ ಎಂಬ ಸಂಸ್ಥೆ ಸ್ಥಾಪಿಸಿ ವೃತ್ತಿಪರತೆ ಜಾಗೃತಿ ಮೂಡಿಸಲು ಹೊರಟಿರುವುದು ನಿಜಕ್ಕೂ ಉತ್ತಮ ಕಾರ್ಯ ಎಂದು ನಗರದಲ್ಲಿ ನಡೆದ ಜಿಎಂಸಿ (ಗ್ಲೋಬಲ್ ಮೀಡಿಯಾ ಕೌನ್ಸಿಲ್ ) ಸಂಸ್ಥೆ ಉದ್ಘಾಟಿಸಿ ಮಾತನಾಡಿದರು.
ಬದಲಾದ ವಿದ್ಯಮಾನ, ತಂತ್ರಜ್ಞಾನದಲ್ಲಿ ವೃತ್ತಿಪರತೆ ಹೆಚ್ಚಿಸುವ ನಿಟ್ಟಿನಲ್ಲಿ ಪತ್ರಕರ್ತರಿಗೆ ಸೂಕ್ತ ಹೆಚ್ಚಿನ ತರಬೇತಿ ನೀಡಬೇಕಿದೆ. ಮಾಧ್ಯಮಗಳಲ್ಲಿ ನೈಜತೆ, ಪ್ರಮಾಣಿಕತೆ ಹಾಗೂ ವೃತ್ತಿಪರತೆ ಕಡಿಮೆಯಾಗುತ್ತಿದ್ದು ಇದನ್ನು ಹೆಚ್ಚಿಸಬೇಕಿದೆ. ಇಂಥ ಸಂಸ್ಥೆಯಲ್ಲಿ ಜಿಎಂಸಿ ಸಂಸ್ಥೆಯ ಅಗತ್ಯವಿತ್ತು. ಇದರಲ್ಲೂ ಜಿಎಂಸಿ ಸಂಸ್ಥೆ ಬರೀ ಕರ್ನಾಟಕ ಮಾತ್ರ ಗಮನಿಸದೆ ವಿಶ್ವಮಟ್ಟದಲ್ಲಿ ವೃತ್ತಿ ಪರತೆ ಹೆಚ್ಚಿಸಲು ಜಾಗೃತಿ ಮೂಡಿಸಲು ಹೊರಟಿರುವುದು ನಿಜಕ್ಕೂ ಉತ್ತಮ. ಇದಕ್ಕೆ ಸರಕಾರ ಎಲ್ಲಾ ರೀತಿಯಲ್ಲೂ ಸಹಕಾರ, ಸಹಾಯ ಮಾಡಲಿದೆ ಎಂದರು.
ಪ್ರಜಾಪ್ರಭುತ್ವದಲ್ಲಿ ಜನರು ಹೆಚ್ಚು ನಂಬಿರುವ ನಾಲ್ಕನೇ ಅಂಗವಾದ ಮಾಧ್ಯಮ ರಂಗದಲ್ಲಿ ನಕಲಿ ಅಥವಾ ತಪ್ಪುಗಳು ಆಗದಂತೆ ಮಾಡಲು ಹೊರಟಿರುವ ಜಿಎಂಸಿಗೆ ಸರಕಾರ ಮಾತ್ರವಲ್ಲ. ಸಾರ್ವಜನಿಕರೂ ಬೆಂಬಲ ನೀಡಬೇಕೆಂದು ಸಲಹೆ ನೀಡಿದರು.
ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯೇಶಾ ಖಾನಂ ಮಾತನಾಡಿ, ಜಿಎಂಸಿ ಸಂಸ್ಥೆ ಉದ್ದೇಶ ಬಹುತೇಕ ಮಾಧ್ಯಮ ಅಕಾಡೆಮಿ ಕಾರ್ಯವನ್ನೇ ಹೋಲುವಂತಿದೆ. ಆದರೆ ಇದರಲ್ಲಿ ಮಹಿಳಾ ಪ್ರಾತಿನಿಧ್ಯ ಅಗತ್ಯವಿದೆ. ಅದನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಹೇಳಿದರು.
ಮಾಜಿ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಮಾತನಾಡಿ, ಬದಲಾದ ಕಾಲಮಾನದಲ್ಲಿ ಮಾದ್ಯಮಗಳು ಬದಲಾಗುತ್ತಿದೆ. ಆದರೆ ಅದರಲ್ಲಿ ಸೇವೆ ಸಲ್ಲಿಸುವವರು ಮಾಡುತ್ತಿರುವ ತಪ್ಪುಗಳನ್ನು ತಿದ್ದುವುದು, ಅವರನ್ನು ಸರಿದಾರಿಗೆ ತಂದು ಮಾದ್ಯಮದ ಘನತೆ ಹೆಚ್ಚಿಸುವ ಕೆಲಸವನ್ನು ಜಿಎಂಸಿ ಸಂಸ್ಥೆ ಮಾಡಲು ಹೊರಟಿದೆ. ಇದಕ್ಕೆ ಜಿಎಂಸಿ ಎನ್ನುವ ಬದಲಿಗೆ ಕರ್ನಾಟಕವನ್ನೂ ಸೇರಿಸಿ ಕೆಜಿಎಂಸಿ ಎಂದು ಹೆಸರಿಸಬೇಕೆಂದರು.
ಕಾರ್ಯಕ್ರಮದಲ್ಲಿ ಜಿಎಂಸಿಯ ಅಧ್ಯಕ್ಷ ರಾಜು ಕಲ್ಕುಣಿ, ಪ್ರಧಾನ ಕಾರ್ಯದರ್ಶಿ ಎನ್. ಬಿ. ಹೊಂಬಾಳ್ ಹಾಗೂ ನರೇಶ್, ವಿಜಯ್, ಸುನೀಲ್ ಹಾಗೂ ಕೇಶವಮೂರ್ತಿ, ಹಾಜರಿದ್ದರು.
ಬದಲಾಗಿರುವ ತಂತ್ರಜ್ಞಾನದಲ್ಲಿ ವೃತ್ತಿಪರತೆ ಹೆಚ್ಚಿಸಿಕೊಳ್ಳಲು ಪತ್ರಕರ್ತರಿಗೆ ತರಬೇತಿ ಅಗತ್ಯ : ರಾಮಲಿಂಗಾ ರೆಡ್ಡಿ
ಗ್ಲೋಬಲ್ ಮೀಡಿಯಾ ಕೌನ್ಸಿಲ್ ಸಂಸ್ಥೆಗೆ ರಾಮಲಿಂಗಾ ರೆಡ್ಡಿ, ಅಜಯ್ ಸಿಂಗ್ ಚಾಲನೆ