ನಾಮಫಲಕಗಳಲ್ಲಿ ಶೇ.60 ರಷ್ಟು ಕನ್ನಡ ಭಾಷೆಗೆ ಆದ್ಯತೆ ನೀಡಬೇಕು ಹಾಗೂ ಫೆ. ಅಂತ್ಯದೊಳಗೆ ಕಡ್ಡಾಯವಾಗಿ ಕನ್ನಡ ನಾಮಫಲಕ ಅಳವಡಿಸುವಂತೆ ರಾಜ್ಯ ಸರ್ಕಾರ ಡೆಡ್ ಲೈನ್ ಸಿಗದಿ ಮಾಡಿತ್ತು. ಇದೀಗ ಈ ಡೆಡ್ ಲೈನ್ ಇಂದು ಕೊನೆಯಾಗಿದೆ.
ರಾಜ್ಯ ರಾಜಧಾನಿಯಲ್ಲಿ ಕಡ್ಡಾಯ ಕನ್ನಡ ನಾಮಫಲಕ ಅಳವಡಿಕೆಗಾಗಿ ಕನ್ನಡ ಪರ ಸಂಘಟನೆಗಳು ರಣಕಹಳೆ ಮೊಳಗಿಸಿದ್ವು. ಬೇರೆ ಬಾಷೆಯ ನಾಮಫಲಕಗಳ ವಿರುದ್ಧ ಧ್ವನಿ ಎತ್ತಿದ್ದರು. ಸರ್ಕಾರವೂ ಸಹ ಎಚ್ಚೆತ್ತುಕೊಂಡು ಫೆಬ್ರವರಿ 28 ರೊಳಗೆ ಕಡ್ಡಾಯ ಕನ್ನಡ ನಾಮಫಲಕ ಅಳವಡಿಕೆಗೆ ಗಡುವು ನೀಡಿತ್ತು. ಅದರಂತೆ ಅಂಗಡಿಗಳ ಮುಂದೆ ಶೇಕಡಾ 60 ರಷ್ಟು ಕನ್ನಡ ಭಾಷೆಯಲ್ಲೇ ನಾಮಫಲಕ ಇರಬೇಕು. ಇಂದು ಸರ್ಕಾರದ ಡೆಡ್ಲೈನ್ ಮುಗಿಯುತ್ತೆ. ಬೆಂಗಳೂರಿನಲ್ಲಿ ಒಂದಷ್ಟು ಪ್ರಮುಖ ರಸ್ತೆಗಳ ಅಂಗಡಿ-ಮುಂಗಟ್ಟುಗಳ ನಾಮಫಲಕ ಬದಲಾಗಿಲ್ಲ. ಆದರೆ ಬೆಂಗಳೂರಿನ ಬಹುತೇಕ ಕಡೆ ನಾಮಫಲಕ ಬದಲಾಗಿದೆ.
ಸದ್ಯ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಎಚ್ಚೆತ್ತಿರುವ ವ್ಯಾಪಾರಿಗಳು ಹಳೇ ನಾಮಫಲಕ ತೆಗೆದು ಹೊಸ ನಾಮಫಲಕ ಹಾಕಿದ್ದಾರೆ. ಈ ಹಿಂದೆ ಚಿಕ್ಕದಾಗಿದ್ದ ಕನ್ನಡ ಬೋರ್ಡ್ಗಳನ್ನು ಬದಲಾವಣೆ ಮಾಡಿ ಈಗ ದೊಡ್ಡ ದೊಡ್ಡ ಅಕ್ಷರಗಳಲ್ಲೇ ಕನ್ನಡ ನಾಮಫಲಕ ಅಳವಡಿಸಲಾಗಿದೆ.
ಇನ್ನು ಬೆಂಗಳೂರಿನ ಹಲವೆಡೆ ಇನ್ನೂ ಕೂಡ ನಾಮಫಲಕ ಬದಲಾಯಿಸಿಲ್ಲ. 60% ರಷ್ಟು ನಾಮಫಲಕ ಬದಲಾಗಿದೆ ಶೇ40% ಇನ್ನೂ ಬದಲಾಗಬೇಕಿದೆ. ಸರ್ಕಾರ ಆದೇಶ ಮಾಡಿ ಕ್ರಮವಹಿಸದ ಹಿನ್ನಲೆ ಕರವೇ ಮತ್ತೆ ಹೋರಾಟದ ಎಚ್ಚರಿಕೆ ನೀಡಿದೆ. ನಾಮಪಲಕ ಬಳಕೆ ವಿರುದ್ಧ ಬೆಂಗಳೂರು ಸ್ಥಬ್ದ ಮಾಡುವ ಎಚ್ಚರಿಕೆ ನೀಡಿದೆ.
ಇವತ್ತು ರಾತ್ರಿಯೊಳಗೆ ಎಲ್ಲಾ ಬೋರ್ಡ್ ಗಳಲ್ಲಿ ಕಡ್ಡಾಯವಾಗಿ ಕನ್ನಡ ಬರಲಿಲ್ಲ ಅಂದರೆ ಕರವೇ ಕಾರ್ಯಕರ್ತರು ಬೀದಿಗಿಳಿದು ಕಾರ್ಯಚರಣೆ ನಡೆಸಲಿದೆ ಎಂದು ಕರವೇಯ ಕಾರ್ಯಕರ್ತರು ಕರೆ ನೀಡಿದ್ದಾರೆ.