ಶಾಲಾ ಬಾಲಕರಿಗೆ “ಹೇರ್ ಸ್ಟೈಲ್” ಸ್ವಾತಂತ್ರ್ಯ ನೀಡಿದ ಕೇರಳದ ಮಕ್ಕಳ ಆಯೋಗ.

ತಿರುವನಂತಪುರಂ: ಶಾಲಾ ಬಾಲಕರು ತಮ್ಮ ಕೂದಲನ್ನು ಉದ್ದವಾಗಿ ಬೆಳೆಸಿಕೊಳ್ಳಲು ಸ್ವಾತಂತ್ರ್ಯವಿದೆ ಎಂದು ಕೇರಳ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ತೀರ್ಪು ನೀಡಿದೆ. ಹಾಗೆಯೇ ಲಿಂಗ ನಿರ್ಧಾರ ಪ್ರಕ್ರಿಯೆಗೆ ಒಳಗಾಗದ ಮಕ್ಕಳು ತಮ್ಮ ಕೂದಲನ್ನು ಹಾಗೆಯೇ ಇರಿಸಿಕೊಳ್ಳಲು ಮತ್ತು ತಮ್ಮ ಆದ್ಯತೆಗೆ ಅನುಗುಣವಾಗಿ ಉಡುಪನ್ನು ಆಯ್ಕೆ ಮಾಡಿಕೊಳ್ಳುವ ಹಕ್ಕನ್ನು ಹೊಂದಿದ್ದಾರೆ ಎಂದು ಆಯೋಗವು ಹೇಳಿದೆ.

ವಿದ್ಯಾರ್ಥಿಗಳ ಬಾಹ್ಯ ನೋಟಕ್ಕಿಂತ ಅವರ ಶೈಕ್ಷಣಿಕ ಪ್ರಗತಿ ಮತ್ತು ವ್ಯಕ್ತಿತ್ವ ವಿಕಸನಕ್ಕೆ ಶಾಲೆಗಳು ಆದ್ಯತೆ ನೀಡಬೇಕು ಎಂದು ಆಯೋಗ ಸಲಹೆ ನೀಡಿದೆ.

ಪ್ರಾಂಶುಪಾಲರೊಬ್ಬರು ಸಲ್ಲಿಸಿದ್ದ ಅರ್ಜಿಯೂ ಸೇರಿದಂತೆ, ಹಲವು ಅರ್ಜಿಗಳ ಕುರಿತು ಆದೇಶ ಹೊರಡಿಸಿದ ಆಯೋಗ “ಮಕ್ಕಳು ತಮ್ಮ ಕಣ್ಣು ಅಥವಾ ಮುಖವನ್ನು ಮುಚ್ಚದಂತೆ ಕೂದಲನ್ನು ಸ್ವಚ್ಛವಾಗಿ, ಸುರಕ್ಷಿತವಾಗಿ ಮತ್ತು ಅಚ್ಚುಕಟ್ಟಾದ ಶೈಲಿಯಲ್ಲಿ ಇರಿಸಿಕೊಳ್ಳುವ ಜವಾಬ್ದಾರಿಯನ್ನು ಹೊಂದಿರುತ್ತಾರೆ ಎಂದು ಹೇಳಿದೆ.

ಪ್ರಯೋಗಾಲಯ, ಕ್ರೀಡೆ ಮತ್ತು ಪ್ರಾಯೋಗಿಕ ತರಗತಿಗಳ ಸಂದರ್ಭದಲ್ಲಿ ಸುರಕ್ಷತೆಗಾಗಿ, ವಿದ್ಯಾರ್ಥಿಗಳು ತಮ್ಮ ಕೂದಲನ್ನು ಕಟ್ಟಿಕೊಳ್ಳಬೇಕು ಅಥವಾ ಹೇರ್‌ಬ್ಯಾಂಡ್ ಬಳಸಿ ಭದ್ರಪಡಿಸಿಕೊಳ್ಳಬೇಕು. ಕೂದಲಿನ ಆರೋಗ್ಯಕ್ಕೆ ಹಾನಿಕಾರಕವಾದ ರಾಸಾಯನಿಕಗಳು ಅಥವಾ ಬಣ್ಣಗಳನ್ನು ಬಳಸುವುದು ಸೂಕ್ತವಲ್ಲ,” ಎಂದು ಆಯೋಗದ ಸದಸ್ಯ ಪಿ. ಶಾಜೇಶ್ ಭಾಸ್ಕರ್ ಹೊರಡಿಸಿದ ಆದೇಶದಲ್ಲಿ ತಿಳಿಸಲಾಗಿದೆ.

ಕೂದಲಿನ ಉದ್ದ ಅಥವಾ ಶೈಲಿಗೆ ಸಂಬಂಧಿಸಿದ ವಿಷಯಗಳಿಗೆ ಶಾಲಾ ಆಡಳಿತ ಮಂಡಳಿ ಬಾಲಕರು ಮತ್ತು ತೃತೀಯ ಲಿಂಗಿ ಮಕ್ಕಳನ್ನು ಮಾನಸಿಕವಾಗಿ ಪೀಡಿಸಬಾರದು, ಅವರನ್ನು ತರಗತಿಯಿಂದ ಹೊರಗಿಡಬಾರದು, ಅವರೊಂದಿಗೆ ತಾರತಮ್ಯ ಮಾಡಬಾರದು ಅಥವಾ ಯಾವುದೇ ಶಿಸ್ತುಕ್ರಮಕ್ಕೆ ಒಳಪಡಿಸಬಾರದು ಎಂದು ಆದೇಶದಲ್ಲಿ ತಿಳಿಸಲಾಗಿದೆ.

More articles

Latest article

Most read