ನವದೆಹಲಿ : ನೈರುತ್ಯ ದೆಹಲಿಯ ಸತ್ಯ ನಿಕೇತನ್ ಪ್ರದೇಶದಲ್ಲಿ ಕುಸಿದುಬಿದ್ದ 50 ವರ್ಷ ಹಳೆಯ ಬಹುಮಹಡಿ ಕಟ್ಟಡದ ಅವಶೇಷಗಳಿಂದ ಒಟ್ಟು 11 ಜನರನ್ನು ರಕ್ಷಿಸಲಾಗಿದ್ದು, ಸಾವಿನ ಸಂಖ್ಯೆ ಆರಕ್ಕೆ ಏರಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
ರಾತ್ರಿಯಿಡೀ ನಡೆದ ಕಾರ್ಯಾಚರಣೆಯ ವೇಳೆ ಮತ್ತೊಬ್ಬ ವ್ಯಕ್ತಿಯನ್ನು ರಕ್ಷಿಸಲಾಯಿತಾದರೂ, ಆಸ್ಪತ್ರೆಗೆ ತಲುಪಿಸುವಷ್ಟರಲ್ಲಿ ಅವರು ಮೃತಪಟ್ಟಿದ್ದರು, ಇದರೊಂದಿಗೆ ಸಾವಿನ ಸಂಖ್ಯೆ ಆರಕ್ಕೇರಿದೆ ಎಂದು ನೈರುತ್ಯ ದೆಹಲಿಯ ಪೊಲೀಸ್ ಉಪ ಆಯುಕ್ತ ಅಮಿತ್ ಗೋಯಲ್ ತಿಳಿಸಿದ್ದಾರೆ.
ದೆಹಲಿ ವಿಶ್ವವಿದ್ಯಾಲಯದ ದಕ್ಷಿಣ ಕ್ಯಾಂಪಸ್ ಬಳಿ ಬಾಲಕರ ‘ಪೇಯಿಂಗ್ ಗೆಸ್ಟ್’ ವಸತಿಗೃಹವಾಗಿದ್ದ ಈ ಕಟ್ಟಡವು, ದುರಸ್ತಿ ಕಾರ್ಯ ನಡೆಯುತ್ತಿದ್ದಾಗ ಭಾನುವಾರ ಮಧ್ಯಾಹ್ನ 1.30ರ ಸುಮಾರಿಗೆ ಕುಸಿದುಬಿದ್ದಿತ್ತು. ಇದರ ನಂತರ ರಾತ್ರಿಯಿಡೀ ರಕ್ಷಣಾ ಕಾರ್ಯಾಚರಣೆ ಮುಂದುವರಿಯಿತು.
ದೆಹಲಿ ಪೊಲೀಸ್, ದೆಹಲಿ ಅಗ್ನಿಶಾಮಕ ದಳ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಮತ್ತು ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರದ ತಂಡಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದವು. ಅವಶೇಷಗಳಡಿ ಸಿಲುಕಿರಬಹುದಾದವರನ್ನು ಪತ್ತೆಹಚ್ಚಲು ತುರ್ತು ಸೇವಾ ಸಿಬ್ಬಂದಿ ಶ್ರಮಿಸಿದರು.
ನೆಲಮಹಡಿಯನ್ನೂ (ಬೇಸ್‌ಮೆಂಟ್) ಒಳಗೊಂಡಿದ್ದ ಈ ಐದು ಅಂತಸ್ತಿನ ಕಟ್ಟಡವು ಸುಮಾರು 50 ವರ್ಷ ಹಳೆಯದಾಗಿತ್ತು. ಇದನ್ನು ಪಿಜಿ ವಸತಿಗೃಹವಾಗಿ ಬಳಸಲಾಗುತ್ತಿತ್ತು ಮತ್ತು ಇದು ದಟ್ಟ ಜನಸಂಖ್ಯೆಯಿರುವ ಸತ್ಯ ನಿಕೇತನ್ ಪ್ರದೇಶದಲ್ಲಿತ್ತು; ಈ ಪ್ರದೇಶವು ವಿಶ್ವವಿದ್ಯಾಲಯದ ಕ್ಯಾಂಪಸ್ ಬಳಿ ವಿದ್ಯಾರ್ಥಿಗಳ ವಸತಿಗೃಹಗಳು ಮತ್ತು ತಿಂಡಿ-ತಿನಿಸಿನ ಅಂಗಡಿಗಳಿಗೆ ಹೆಸರುವಾಸಿಯಾಗಿದೆ.
ಕಟ್ಟಡ ಕುಸಿದಾಗ ಅದರ ನೆಲಮಹಡಿಯಲ್ಲಿ ದುರಸ್ತಿ ಕಾರ್ಯ ನಡೆಯುತ್ತಿತ್ತು ಎಂದು ವರದಿಯಾಗಿದೆ. ಹಲವು ದಿನಗಳ ಮಳೆಯಿಂದಾಗಿ ನೆಲಮಹಡಿಯಲ್ಲಿ ನೀರು ಸಂಗ್ರಹವಾಗಿ ಕಟ್ಟಡದ ಅಡಿಪಾಯ ದುರ್ಬಲಗೊಂಡಿರಬಹುದು ಎಂದು ಸ್ಥಳೀಯರು ಹೇಳಿಕೊಂಡಿದ್ದಾರೆ, ಆದಾಗ್ಯೂ ಕುಸಿತಕ್ಕೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ.
ಘಟನೆಯ ನಂತರ, ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರು ಮ್ಯಾಜಿಸ್ಟ್ರಿಯಲ್ ತನಿಖೆಗೆ ಆದೇಶಿಸಿದರು ಮತ್ತು ಕಟ್ಟಡದ ಮಾಲೀಕರ ವಿರುದ್ಧ ಎಫ್‌ಐಆರ್ದಾ ಖಲಿಸುವಂತೆ ಸೂಚಿಸಿದರು. ತಪ್ಪಿತಸ್ಥರನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ದೆಹಲಿ ಸರ್ಕಾರ ತಿಳಿಸಿದೆ.
ಪೊಲೀಸರು ಈಗ ಕಟ್ಟಡದ ಮಾಲೀಕರು ಮತ್ತು ಇತರರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಘಟನೆಗೆ ಸಂಬಂಧಿಸಿದವರನ್ನು ಪತ್ತೆಹಚ್ಚುವ ಪ್ರಯತ್ನಗಳು ಮುಂದುವರಿದಿವೆ ಎಂದು ಡಿಸಿಪಿ ಗೋಯಲ್ ತಿಳಿಸಿದ್ದಾರೆ.
ಕಟ್ಟಡ ಕುಸಿತವು ಬೃಹತ್ ಪ್ರಮಾಣದ ರಕ್ಷಣಾ ಕಾರ್ಯಾಚರಣೆಗೆ ಕಾರಣವಾಯಿತು ಮತ್ತು ಆರಂಭಿಕ ಹಂತದಲ್ಲಿ ಸುಮಾರು 200 ತುರ್ತು ಸೇವಾ ಸಿಬ್ಬಂದಿ ಇದರಲ್ಲಿ ಭಾಗಿಯಾಗಿದ್ದರು. ಅವಶೇಷಗಳನ್ನು ತೆರವುಗೊಳಿಸಲು ಮತ್ತು ಸಿಲುಕಿರುವವರನ್ನು ತಲುಪಲು ಪ್ರಯತ್ನಿಸುತ್ತಿದ್ದ ರಕ್ಷಣಾ ತಂಡಗಳಿಗೆ ಆ ಪ್ರದೇಶದ ಕಿರಿದಾದ ಮತ್ತು ಜನನಿಬಿಡ ರಸ್ತೆಗಳು ಹೆಚ್ಚುವರಿ ಸವಾಲುಗಳನ್ನು ಒಡ್ಡಿದವು.
ದೆಹಲಿ ವಿಶ್ವವಿದ್ಯಾಲಯದ ದಕ್ಷಿಣ ಕ್ಯಾಂಪಸ್ ವಿದ್ಯಾರ್ಥಿಗಳಿಗೆ ಪ್ರಮುಖ ವಸತಿ ಕೇಂದ್ರವಾಗಿರುವ ಸತ್ಯ ನಿಕೇತನ್‌ನಲ್ಲಿ ತಲೆ ಎತ್ತಿರುವ ಹಲವಾರು ಪಿಜಿ ವಸತಿಗೃಹಗಳು ಮತ್ತು ಬಹುಮಹಡಿ ಕಟ್ಟಡಗಳ ಸುರಕ್ಷತೆಯ ಬಗ್ಗೆಯೂ ಈ ಘಟನೆಯು ಕಳವಳವನ್ನು ಹುಟ್ಟುಹಾಕಿದೆ. ಈ ಪ್ರದೇಶದಲ್ಲಿ ಕಳೆದ ಕೆಲವು ವರ್ಷಗಳಲ್ಲಿ ಅನೇಕ ವಸತಿ ಆಸ್ತಿಗಳನ್ನು ವಿದ್ಯಾರ್ಥಿಗಳ ವಸತಿಗೃಹಗಳಾಗಿ ಪರಿವರ್ತಿಸಲಾಗಿದೆ.
ದೆಹಲಿಯಲ್ಲಿ 50 ವರ್ಷ ಹಳೆಯ ಕಟ್ಟಡ ಕುಸಿತ, ಆರು ಮಂದಿ ದುರ್ಮರಣ