‘ಹಾರ್ಪರ್ ಕಾಲಿನ್ಸ್’ ಪ್ರಕಾಶನದಿಂದ ಸೋನಿಯಾ ಗಾಂಧಿ ಅವರ ಆತ್ಮಕಥೆ ‘ಬಿಲಾಂಗಿಂಗ್: ಎ ಜರ್ನಿ ಆಫ್ ಲವ್’ ಪುಸ್ತಕ ಪ್ರಕಟ

ನವದೆಹಲಿ :  ‘ಹಾರ್ಪರ್ ಕಾಲಿನ್ಸ್’ (HarperCollins) ಪ್ರಕಾಶನವು,   ಸೋನಿಯಾ ಗಾಂಧಿ ಅವರ ಆತ್ಮಕಥೆ ‘ಬಿಲಾಂಗಿಂಗ್: ಎ ಜರ್ನಿ ಆಫ್ ಲವ್’ (Belonging: A Journey of Love) ಅನ್ನು ಪ್ರಕಟಿಸುವುದಾಗಿ ಈ ಸಂಸ್ಥೆ ಇದೀಗ ಖಚಿತಪಡಿಸಿದೆ.
ಈ ಕಾಲದ ಅತ್ಯಂತ ನಿರೀಕ್ಷಿತ ರಾಜಕೀಯ ಆತ್ಮಕಥೆಗಳಲ್ಲಿ ಒಂದಾಗಿರುವ ಇದು, ಕಾಂಗ್ರೆಸ್  ಪಕ್ಷದ (CPP) ಅಧ್ಯಕ್ಷೆಯಾಗಿರುವ ಸೋನಿಯಾ ಗಾಂಧಿ ಅವರ ಅನುಭವಗಳನ್ನು ಒಳಗೊಂಡಿದೆ. ಕೇಂದ್ರದಲ್ಲಿ 50 ವರ್ಷಗಳಿಗೂ ಹೆಚ್ಚು ಕಾಲ ಅಧಿಕಾರದ ಚುಕ್ಕಾಣಿ ಹಿಡಿದಿದ್ದ ಕುಟುಂಬದ  ಸೊಸೆಯಾಗಿರುವ, ಭಾರತೀಯ ರಾಜಕೀಯವನ್ನು ಅತ್ಯಂತ ಹತ್ತಿರದಿಂದ ಮತ್ತು ಆಂತರಿಕವಾಗಿ ವೀಕ್ಷಿಸಿದವರಾಗಿದ್ದಾರೆ.

ಈ ಪುಸ್ತಕವು ಪ್ರೀತಿ, ಅಸ್ಮಿತೆ, ಕರ್ತವ್ಯ ಮತ್ತು ‘ಒಡೆತನದ ಭಾವನೆ’ಯ (belonging) ಕುರಿತಾದ ಒಂದು ನಾಟಕೀಯ ಹಾಗೂ ಆಳವಾದ ವೈಯಕ್ತಿಕ ಕಥೆಯಾಗುವ ನಿರೀಕ್ಷೆಯಿದೆ. ಜೊತೆಗೆ, ವೈಯಕ್ತಿಕ ಹಾಗೂ ರಾಜಕೀಯ ದೃಷ್ಟಿಕೋನದಿಂದ ಭಾರತದ ಪಯಣದ ಅಪರೂಪದ ನೋಟವನ್ನು ಇದು ಒದಗಿಸುತ್ತದೆ.

ರತನ್ ಟಾಟಾ, ಮಾರ್ಗರೇಟ್ ಥ್ಯಾಚರ್, ಡೇವಿಡ್ ಕ್ಯಾಮರೂನ್, ಕೋಲಿನ್ ಪೊವೆಲ್, ಇಂದಿರಾ ಗಾಂಧಿ, ಬೆನಜೀರ್ ಭುಟ್ಟೋ, ಬರಾಕ್ ಒಬಾಮಾ ಮತ್ತು ಎ.ಪಿ.ಜೆ. ಅಬ್ದುಲ್ ಕಲಾಂ ಅವರಂತಹ ರಾಜಕೀಯ ಹಾಗೂ ಸಾರ್ವಜನಿಕ ಜೀವನದ ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳ ಕುರಿತಾದ ಅಥವಾ ಅವರಿಂದಲೇ ರಚಿತವಾದ ಪುಸ್ತಕಗಳನ್ನು ಪ್ರಕಟಿಸಿದ ಹೆಗ್ಗಳಿಕೆ ಹಾರ್ಪರ್ ಕಾಲಿನ್ಸ್ ಸಂಸ್ಥೆಗಿದೆ. ‘ಬಿಲಾಂಗಿಂಗ್: ಎ ಜರ್ನಿ ಆಫ್ ಲವ್’ ಆ ಪರಂಪರೆಯನ್ನು ಮುಂದುವರಿಸುತ್ತದೆ.
ಬಹುನಿರೀಕ್ಷಿತ ಈ ಆತ್ಮಕಥೆಯು 2026ರ ನವೆಂಬರ್ 10ರಂದು ಭಾರತದಲ್ಲಿ ಬಿಡುಗಡೆಯಾಗಲಿದೆ. ಪುಸ್ತಕ ಬಿಡುಗಡೆಯ ನಂತರ ಪ್ರಕಾಶನ ಸಂಸ್ಥೆಯು ಹೆಚ್ಚಿನ ಮಾಹಿತಿ ಮತ್ತು ವಿವರಗಳನ್ನು ಹಂಚಿಕೊಳ್ಳಲಿದೆ.

More articles

Latest article

Most read