ಮುಂದಿನ ಪ್ರಧಾನಿ ಅಭ್ಯರ್ಥಿ ತಮಿಳುನಾಡು ಸಿಎಂ ವಿಜಯ್‌! ಇವರನ್ನು ರಾಹುಲ್‌ ಗಾಂಧಿಯೇ ಆಯ್ಕೆ ಮಾಡಲಿದ್ದಾರೆ : ಟಿವಿಕೆ ಶಾಸಕಿ ಕನಿಮೋಳಿ

ಚೆನ್ನೈ : ಮುಂದಿನ ಪ್ರಧಾನಿ ಅಭ್ಯರ್ಥಿಯನ್ನಾಗಿ ತಮಿಳುನಾಡು ಮುಖ್ಯಮಂತ್ರಿ ಸಿ. ವಿಜಯ್‌ ಅವರನ್ನು ರಾಹುಲ್‌ ಗಾಂಧಿ ಆಯ್ಕೆ ಮಾಡುತ್ತಾರೆ ಎಂದು ಟಿವಿಕೆ ಶಾಸಕರೊಬ್ಬರು ಹೇಳಿದ್ದಾರೆ.

ನಟ-ರಾಜಕಾರಣಿ ವಿಜಯ್ ಅವರು ಪ್ರಧಾನಿ ಹುದ್ದೆಗಾಗಿ ರಾಹುಲ್ ಗಾಂಧಿ ಅವರನ್ನು ಬೆಂಬಲಿಸುತ್ತಾರೆ ಎಂಬ ಕಾಂಗ್ರೆಸ್‌ನ ಹೇಳಿಕೆಯನ್ನು ತಳ್ಳಿಹಾಕಿರುವ ‘ತಮಿಳಗ ವೆಟ್ರಿ ಕಳಗಂ’ (ಟಿವಿಕೆ), 2029ರ ಲೋಕಸಭೆ ಚುನಾವಣೆಗೆ ಪಕ್ಷದ ಮುಖ್ಯಸ್ಥ ಹಾಗೂ ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರನ್ನೇ ತಮ್ಮ ಪ್ರಧಾನಿ ಅಭ್ಯರ್ಥಿಯನ್ನಾಗಿ ಮತ್ತೊಮ್ಮೆ ಬಿಂಬಿಸಿದೆ.

ಪ್ರಧಾನಿ ಹುದ್ದೆಗೆ ವಿಜಯ್ ಅವರೇ ಪಕ್ಷದ ಆಯ್ಕೆಯಾಗಿರುತ್ತಾರೆ ಎಂದು ಟಿವಿಕೆ ಶಾಸಕಿ ಕನಿಮೋಳಿ ಬುಧವಾರ ಪುನರುಚ್ಚರಿಸಿದ್ದಾರೆ. ಅಲ್ಲದೆ, ಈ ಹುದ್ದೆಯನ್ನು ಯಾರು ಅಲಂಕರಿಸಬೇಕು ಎಂಬ ನಿರ್ಧಾರವು ದೆಹಲಿಯಲ್ಲಿ ಅಲ್ಲ, ಬದಲಾಗಿ ತಮಿಳುನಾಡಿನಲ್ಲಿಯೇ ನಡೆಯಲಿದೆ ಎಂದು ಅವರು ಪ್ರತಿಪಾದಿಸಿದರು.

2029ರ ಪ್ರಧಾನಿ ಅಭ್ಯರ್ಥಿ ವಿಜಯ್. ಪ್ರಧಾನಿ ಯಾರಾಗಬೇಕು ಎಂಬುದನ್ನು ದೆಹಲಿ ನಿರ್ಧರಿಸುವುದಿಲ್ಲ, ತಮಿಳುನಾಡು ನಿರ್ಧರಿಸುತ್ತದೆ. 2029ರಲ್ಲಿ ಏನೋ ಒಂದು ಪವಾಡ ಸಂಭವಿಸಲಿದೆ. ಸ್ವತಃ ರಾಹುಲ್ ಗಾಂಧಿಯೇ ವಿಜಯ್ ಅವರನ್ನು ಪ್ರಧಾನಿಯನ್ನಾಗಿ ಮಾಡಲಿದ್ದಾರೆ ಎಂದು ಅವರು ಹೇಳಿದರು.

ಆಡಳಿತ ಪಕ್ಷ ಮತ್ತು ಅದರ ಮೈತ್ರಿ ಪಕ್ಷವಾದ ಟಿವಿಕೆ ನಡುವೆ ಭಿನ್ನಾಭಿಪ್ರಾಯಗಳಿವೆಯೆಂಬ ಊಹಾಪೋಹಗಳ ನಡುವೆಯೇ, ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿಯಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಬೆಂಬಲಿಸಲು ಮುಖ್ಯಮಂತ್ರಿ ವಿಜಯ್ ನಿರ್ಧರಿಸಿದ್ದಾರೆ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕಿ ತಾರಾಹೈ ಕಥ್‌ಬರ್ಟ್ ಸೋಮವಾರ ಹೇಳಿದ್ದಾರೆ.

ಮೈತ್ರಿಕೂಟದೊಳಗೆ ನಾಯಕತ್ವಕ್ಕಾಗಿ ಪೈಪೋಟಿ ನಡೆಯುತ್ತಿದೆ ಎಂಬ ವರದಿಗಳನ್ನು ತಳ್ಳಿಹಾಕಿದ ಕಥ್‌ಬರ್ಟ್, ಪ್ರಧಾನಿ ಹುದ್ದೆಗೆ ವಿಜಯ್ ಅವರನ್ನು ಸಂಭಾವ್ಯ ಅಭ್ಯರ್ಥಿಯನ್ನಾಗಿ ಬಿಂಬಿಸುತ್ತಿರುವುದು ಪಕ್ಷದ ಕಾರ್ಯಕರ್ತರ ಉತ್ಸಾಹದ ಫಲವೇ ಹೊರತು, ಅದು ನಾಯಕತ್ವದ ಅಧಿಕೃತ ನಿಲುವಲ್ಲ ಎಂದು ಸ್ಪಷ್ಟಪಡಿಸಿದರು.

ಮುಖ್ಯಮಂತ್ರಿಗಳು ರಾಹುಲ್ ಗಾಂಧಿ ಅವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಆಯ್ಕೆ ಮಾಡಿದ್ದಾರೆ. ಅವರು ಅದೇ ಹಾದಿಯಲ್ಲಿ ಮುಂದುವರಿಯುತ್ತಿದ್ದಾರೆ ಎಂದು ಅವರು ಹೇಳಿದರು.

More articles

Latest article

Most read