ನಾಟಕ ಅಕಾಡೆಮಿ ಪ್ರಶಸ್ತಿ ಪ್ರಹಸನ

ಕರ್ನಾಟಕ ನಾಟಕ ಅಕಾಡೆಮಿ ಅಂತಾ ಒಂದಿದೆ ಎಂದು ಕರ್ನಾಟಕದ ಜನತೆಗೆ ಗೊತ್ತಾಗೋದೆ ವಾರ್ಷಿಕ ಪ್ರಶಸ್ತಿ ಪ್ರಕಟವಾಗಿ ಅಪಸ್ವರಗಳು ವ್ಯಕ್ತವಾದಾಗ. ಯಾವುದೇ ವರ್ಷದ ಪ್ರಶಸ್ತಿಗಳಾದರೂ ಅವು ಅನುಮಾನ ಅಪವಾದಗಳಿಂದ ಮುಕ್ತವಾಗಿರುವುದಿಲ್ಲ. ಪ್ರಶಸ್ತಿಯ ಪಟ್ಟಿಯಲ್ಲಿ ಪಡಕೊಂಡವರು ಎಷ್ಟು ಮತ್ತು ಹೊಡಕೊಂಡವರು ಎಷ್ಟು ಎನ್ನುವ ವಿವಾದ ಪ್ರಶಸ್ತಿಗಳ ಪರಂಪರೆಯೇ ಆಗಿದೆ.

ಇನ್ನೂ ಅಕಾಡೆಮಿ ಮತ್ತು ಪ್ರಾಧಿಕಾರಗಳ ಅವಧಿ ಎಂಟು ತಿಂಗಳು ಬಾಕಿ ಇದೆ. ಆದರೆ ಅವುಗಳಲ್ಲಿ ಆತಂಕ ಮನೆಮಾಡಿದೆ. ಯಾವಾಗ ಈ ಸರಕಾರಿ ಸಾಂಸ್ಕೃತಿಕ ಸಂಸ್ಥೆಗಳ ಅವಧಿಯನ್ನು ಮುಂಚಿತವಾಗಿ ಸರಕಾರ ಬರಕಾಸ್ತು ಮಾಡುವುದೋ ಎನ್ನುವ ಸಂದೇಹವೇ ಇದಕ್ಕೆ ಕಾರಣ. ಸರಕಾರ ಬದಲಾಗದಿದ್ದರೂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮಂತ್ರಿಗಳು ಅವರೇ ಇದ್ದರೂ ಮುಖ್ಯ ಮಂತ್ರಿಗಳು ಮಾತ್ರ ಬದಲಾಗಿದ್ದಾರೆ. ನಿಗಮ ಮಂಡಳಿಗಳ ಅಧ್ಯಕ್ಷರುಗಳ ರಾಜೀನಾಮೆ ಪಡೆದುಕೊಂಡಿದ್ದಾರೆ. ಅದೇ ರೀತಿ ಅಕಾಡೆಮಿ ಪ್ರಾಧಿಕಾರಗಳ ಪದಾಧಿಕಾರಿಗಳನ್ನೂ ಅವಧಿ ಪೂರ್ವದಲ್ಲೇ ಮನೆಗೆ ಕಳುಹಿಸಲಾಗುತ್ತದೆ ಎನ್ನುವ ಸಿಡಿಲಬ್ಬರದ ಸುದ್ದಿ ಕನ್ನಡ ಭವನದಲ್ಲಿ ಹರಿದಾಡುತ್ತಿದೆ. ಮುಂದಿನ ಪದಾಧಿಕಾರಿಗಳ ಪಟ್ಟಿ ಮುಖ್ಯ ಮಂತ್ರಿಗಳ ಟೇಬಲ್ ಮೇಲಿದೆ. ಫೈಲಿಗೆ ಸಿಎಂ ಸಾಹೇಬರ ಸಹಿ ಬಾಕಿ ಇದೆ ಎಂಬ ಮಾತು ಗಟ್ಟಿಯಾಗಿ ಕೇಳಿಬರುತ್ತಿದೆ.

ಹೀಗಾಗಿ ಕೆಲವು ಅಕಾಡೆಮಿಗಳು ಇದ್ದಕ್ಕಿದ್ದಂತೆ ಎಚ್ಚರಗೊಂಡಿವೆ. ಬಾಕಿ ಕೆಲಸಗಳಿಗೆ ಚಾಲನೆ ಕೊಟ್ಟಿವೆ. ಸಾಹಿತ್ಯ ಅಕಾಡೆಮಿ ತನ್ನ ಮಕ್ಕಳ ಸಚಿತ್ರ ಮಾಲೆ ಪುಸ್ತಕಗಳ ಕಾರ್ಯವನ್ನು ತೀವ್ರಗೊಳಿಸಿದೆ. ಈಗ ತರಾತುರಿಯಲ್ಲಿ ಆಗಸ್ಟ್ 20 ರಂದು ನಾಟಕ ಅಕಾಡೆಮಿಯ ಈ ಅವಧಿಯ ಕೊಟ್ಟ ಕೊನೆಯ ವಾರ್ಷಿಕ ಪ್ರಶಸ್ತಿಯನ್ನು ಅಧ್ಯಕ್ಷರಾದ ನಾಗರಾಜಮೂರ್ತಿಯವರು ಪ್ರಕಟಿಸಿದ್ದಾರೆ. ಯಾಕೆ ಇಷ್ಟೊಂದು ಆತುರ ಎಂದು ರಂಗಕರ್ಮಿಗಳು ಪ್ರಶ್ನಿಸುತ್ತಿದ್ದಾರೆ.

ಯಾಕೆಂದರೆ ಸದರಿ ಸರಕಾರದ ನಿರ್ಧಾರವನ್ನು ತಿಳಿದು ನಂತರ ಪ್ರಶಸ್ತಿ ಪ್ರಕಟಿಸ ಬೇಕಿತ್ತು. ಈ ಹಿಂದೆ 2018 ರಲ್ಲಿ ಸಿದ್ದರಾಮಯ್ಯನವರ ಸರಕಾರ ಹೋಗಿ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬಂದಾಗ ಅಕಾಡೆಮಿಗಳ ಪದಾಧಿಕಾರಿಗಳನ್ನು ಅವಧಿಪೂರ್ವವಾಗಿ ತೆಗೆದು ಹಾಕಲಾಗುತ್ತದೆ ಎಂದು ಗೊತ್ತಾಗಿದ್ದರೂ ಜೆ.ಲೋಕೇಶರವರು ನಾಟಕ ಅಕಾಡೆಮಿಯ ಪ್ರಶಸ್ತಿಗಳ ಪಟ್ಟಿ ಪ್ರಕಟಿಸಿದ್ದರು.  ಮುಂದೆ ಬರುವವರಾದರೂ ಆ ಪ್ರಶಸ್ತಿಗಳನ್ನು ಕೊಡಮಾಡಲಿ ಎನ್ನುವುದು ಅವರ ಸದುದ್ದೇಶವಾಗಿತ್ತು. ಪ್ರಶಸ್ತಿಗೆ ಭಾಜನರಾದವರಿಗೆ ಅಭಿನಂದನೆಗಳನ್ನು ಸಲ್ಲಿಸಲಾಯ್ತು, ಕೆಲವರಿಗೆ ಅಭಿನಂದನಾ ಸಮಾರಂಭಗಳನ್ನೂ ಮಾಡಲಾಯ್ತು. ಆದರೆ ನಂತರ ಬಿಜೆಪಿ ಸರಕಾರದಿಂದ ಆಯ್ಕೆಯಾಗಿ ಬಂದವರು ಜೆ.ಲೋಕೇಶರವರ ಆಯ್ಕೆಯ ಪಟ್ಟಿಯನ್ನು ಕಸದ ಬುಟ್ಟಿಗೆ ಹಾಕಿ ತಮ್ಮದೇ ಆದ ಪಟ್ಟಿಯನ್ನು ಪ್ರಕಟಿಸಿದರು. ಜೆ.ಲೋಕೇಶರವರ ಪ್ರಶಸ್ತಿ ಪಟ್ಟಿಯಲ್ಲಿದ್ದ ಕಲಾವಿದರಿಗೆ ಅವಮಾನ ಮಾಡಲಾಯ್ತು. ಪ್ರಶಸ್ತಿ ಪ್ರಕಟವಾದರೂ ಪ್ರಶಸ್ತಿಯಿಂದ ವಂಚಿಸಲಾಯ್ತು.

ಈ ಉದಾಹರಣೆಯನ್ನಾದರೂ ಪರಿಗಣಿಸಿ ಹಾಲಿ ಅಧ್ಯಕ್ಷರಾದ ನಾಗರಾಜಮೂರ್ತಿಯವರು ಅವಸರ ಪಡದೇ ಸರಕಾರ ತನ್ನ ನಿರ್ಧಾರ ಪ್ರಕಟಿಸುವವರೆಗಾದರೂ ತಾಳ್ಮೆ ವಹಿಸಬೇಕಾಗಿತ್ತು. ಆದರೆ ಆತುರಕ್ಕೆ ಹೆಸರಾದ ಮೂರ್ತಿಗಳು ತಮ್ಮ ಅಧಿಕಾರವಧಿಯ ನೆತ್ತಿಯ ಮೇಲೆ ಅಮಾನತ್ತಿನ ತೂಗುಗತ್ತಿ ತೂಗಾಡುತ್ತಿದ್ದರೂ ವಾರ್ಷಿಕ ಪ್ರಶಸ್ತಿಗಳನ್ನು ಅನೌನ್ಸ್ ಮಾಡಿಯೇ ಬಿಟ್ಟರು. ಈಗ ಸರಕಾರ ಈಗಿನ ಪದಾಧಿಕಾರಿಗಳನ್ನು ಬಿಡುಗಡೆಗೊಳಿಸಿ ಹೊಸ ಪದಾಧಿಕಾರಿಗಳನ್ನು ಅಕಾಡೆಮಿಗೆ ಆಯ್ಕೆ ಮಾಡಿದ್ದೇ ಆದರೆ ನಾಗರಾಜಮೂರ್ತಿಯವರ ಪ್ರಶಸ್ತಿ ಪಟ್ಟಿ ಅಟ್ಟ ಸೇರುವುದಂತೂ ಗ್ಯಾರಂಟಿ. ಯಾಕೆಂದರೆ ಮುಂದೆ ಬರುವ ಅಧ್ಯಕ್ಷರು ಹಾಗೂ ಸದಸ್ಯರಿಗೆ ತಮ್ಮದೇ ಆದ ಆಯ್ಕೆಗಳಿರುತ್ತವೆ. ಆಗ ನಾಗರಾಜಮೂರ್ತಿಯವರು ಪ್ರಕಟಿಸಿದ ಪಟ್ಟಿಯಲ್ಲಿರುವ ಕಲಾವಿದರಿಗೆ ಅನ್ಯಾಯ ಹಾಗೂ ಅವಮಾನವಾಗುತ್ತದೆ. ಜೆ.ಲೋಕೇಶರವರ ಪ್ರಶಸ್ತಿ ಪ್ರಕರಣದ ಅರಿವಿದ್ದ ನಾಗರಾಜಮೂರ್ತಿಯವರು ಸ್ವಲ್ಪ ಸಂಯಮ ವಹಿಸಬೇಕಾಗಿತ್ತು. ತಮ್ಮ ಆತುರತನಕ್ಕೆ ಬ್ರೇಕ್ ಹಾಕಬೇಕಿತ್ತು.

ಈಗ ಪ್ರಕಟಗೊಂಡ ಪ್ರಶಸ್ತಿ ಪಟ್ಟಿಯ ವಿಷಯಕ್ಕೆ ಬರೋಣ. ಯಥಾಪ್ರಕಾರ ಪಟ್ಟಿಯಲ್ಲಿದ್ದವರಿಗೆ ಅಭಿನಂದನೆಗಳು ಸಲ್ಲಿಕೆಯಾಗುತ್ತಿವೆ ಹಾಗೂ ಕೆಲವಾರು ತಕರಾರುಗಳೂ ಕೇಳಿ ಬರುತ್ತಿವೆ. ಅದರಲ್ಲಿ ಪ್ರಮುಖವಾಗಿರುವುದು ಬಿಜೆಪಿ ಹಾಗೂ ಆರೆಸ್ಸೆಸ್ ಸಿದ್ಧಾಂತಿಗಳಿಗೆ ಪ್ರಶಸ್ತಿ ಕೊಟ್ಟಿರುವುದು. ಯಾರು ಏನೇ ಹೇಳಲಿ ರಂಗಕರ್ಮಿಗಳಲ್ಲಿ ಕೆಲವರು ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ಬೆಂಬಲಿಗರಾಗಿದ್ದಂತೂ ಸತ್ಯ. ಕಲಾವಿದರುಗಳಿಗೆ ಈ ರಾಜಕೀಯ ಸಿದ್ಧಾಂತಗಳ ಹಂಗು ಬೇಕಿಲ್ಲ, ಅವರು ಯಾವತ್ತೂ ಪ್ರಭುತ್ವವನ್ನು ಪ್ರಶ್ನಿಸುವಂತವರಾಗಿರಬೇಕು ಎಂಬುದು ಅಪೇಕ್ಷೆ. ಆದರೆ ವಸ್ತುಸ್ಥಿತಿ ಹಾಗಿಲ್ಲ.  ಈ ರಾಜಕೀಯ ಈಗ ರಂಗಕರ್ಮಿಗಳನ್ನೂ ಪ್ರಭಾವಿಸಿದೆ. ಯಾವ ಪಕ್ಷದ ಸರಕಾರ ಅಸ್ತಿತ್ವಕ್ಕೆ ಬರುತ್ತದೆಯೊ ಆ ಪಕ್ಷದ ಬೆಂಬಲಿಗ ಕಲಾವಿದರನ್ನು ಸರಕಾರಿ ಸಾಂಸ್ಕೃತಿಕ ಸಂಸ್ಥೆಗಳಿಗೆ ನೇಮಕ ಮಾಡುವ ಕೆಟ್ಟ ಸಂಪ್ರದಾಯ ರೂಢಿಯಲ್ಲಿದೆ.

ಹೀಗಿರುವಾಗ ಕಾಂಗ್ರೆಸ್ ಪಕ್ಷದ ಸರಕಾರದಿಂದ ನಾಟಕ ಅಕಾಡೆಮಿಗೆ ಅಧ್ಯಕ್ಷರಾಗಿ ಆಯ್ಕೆಯಾದ ನಾಗರಾಜಮೂರ್ತಿಯವರು ಬಿಜೆಪಿ ಸಿದ್ಧಾಂತಿಗಳಿಗೆ ಪ್ರಶಸ್ತಿ ಕೊಡಲಾರರು ಎಂದೇ ನಂಬಲಾಗಿತ್ತು. ಆದರೆ ಈಗ ಪ್ರಕಟವಾದ ಪ್ರಶಸ್ತಿ ಪಟ್ಟಿಯಲ್ಲಿ ಕೇಸರಿ ಕಲಿಗಳ ಹೆಸರೂ ಇರುವುದನ್ನು ನೋಡಬಹುದಾಗಿದೆ. ಆರೆಸ್ಸೆಸ್ ಸಿದ್ಧಾಂತದ ಉಗ್ರ ಪ್ರತಿಪಾದಕ ಹಾಗೂ ಮೋದಿ ಭಕ್ತ ರಾಜಕುಮಾರ್ ರವರ ಹೆಸರು ಪ್ರಶಸ್ತಿ ಪಟ್ಟಿಯಲ್ಲಿದೆ. ಉಡುಪಿಯ ಪ್ರದೀಪಚಂದ್ರರವರು ಬಿಜೆಪಿ ಪಕ್ಷದ ಪದಾಧಿಕಾರಿಯಾಗಿದ್ದಾರೆ. ರಂಗಕರ್ಮಿಗಳು ಯಾವ ಪಕ್ಷದವರಾದರೇನು ಅವರು ಮಾಡಿದ ರಂಗಸಾಧನೆಗಳನ್ನು ಪರಿಗಣಿಸಿ ಪ್ರಶಸ್ತಿ ಕೊಡಬೇಕು ಎಂಬುದು ಅಪೇಕ್ಷಣೀಯ. ಹಾಗೂ ಪ್ರಶಸ್ತಿಗೆ ಭಾಜನರಾಗಿರುವ ರಾಜಕುಮಾರರವರಾಗಲೀ, ಪ್ರದೀಪಚಂದ್ರರವರಾಗಲೀ ನಿರಂತರವಾಗಿ ರಂಗಭೂಮಿಯಲ್ಲಿ ಸಕ್ರಿಯರಾಗಿದ್ದಾರೆ. ಅವರ ರಾಜಕೀಯ ಹಿತಾಸಕ್ತಿಯನ್ನು ಕಡೆಗಣಿಸಿ ರಂಗಸಾಧನೆಯನ್ನು ಮಾತ್ರ ಪರಿಗಣಿಸಿ ಪ್ರಶಸ್ತಿ ಕೊಡಮಾಡಿದ್ದು ಸರಿಯಾಗಿದೆ ಎಂಬ ವಾದವೂ ಇದೆ.

ಆದರೆ ಇದೇ ನಾಗರಾಜಮೂರ್ತಿಯವರು ಈ ಹಿಂದೆ ಬಿಜೆಪಿಗರು ಎಂಬ ವಾದವನ್ನು ಮುಂದಿರಿಸಿ  ಕೆಲವಾರು ರಂಗಕರ್ಮಿಗಳಿಗೆ ಅವಕಾಶವನ್ನು ತಪ್ಪಿಸಿದ್ದಾರೆ. ಅದಕ್ಕೆ ಒಂದು ಉದಾಹರಣೆ ಹೀಗಿದೆ. ರಂಗಾಯಣದ ನಿರ್ದೇಶಕರ ಆಯ್ಕೆಗೆ ಸಚಿವರ ಅಧ್ಯಕ್ಷತೆಯಲ್ಲಿ ರಂಗಸಮಾಜದ ಸಭೆ ಕರೆಯಲಾಗಿತ್ತು. ನಾಟಕ ಅಕಾಡೆಮಿಯ ಅಧ್ಯಕ್ಷರೂ ರಂಗಸಮಾಜದ ಪದನಿಮಿತ್ತ ಸದಸ್ಯರಾಗಿದ್ದರಿಂದ ನಾಗರಾಜಮೂರ್ತಿಯವರನ್ನೂ ಆಹ್ವಾನಿಸಲಾಗಿತ್ತು. ಆ ಸಭೆಯಲ್ಲಿ ರಂಗಕರ್ಮಿ ಮಾಲತೇಶ ಬಡಿಗೇರರವರ ಹೆಸರನ್ನೂ ಸೂಚಿಸಲಾಯ್ತು. ಯಾವುದೇ ಸಭೆ ಇರಲಿ ಅಲ್ಲಿ ನಾಗರಾಜಮೂರ್ತಿಯವರ ಡಾಮಿನೇಶನ್ ಇರಲೇ ಬೇಕು, ಇರುತ್ತದೆ. ಈ ನಾಗರಾಜಮೂರ್ತಿಯವರ ಡಾಮಿನೇಶನ್ ಸ್ವಭಾವಕ್ಕೆ ಸಂಸ್ಕೃತಿ ಇಲಾಖೆಯ ಸಚಿವರಾದ ತಂಗಡಿಯವರೇ ಹಲವಾರು ಬಾರಿ ಬೇಸರಗೊಂಡಿದ್ದಿದೆ. ಇಂತಹ ಇತಿಹಾಸ ಇರುವ ನಾಗರಾಜಮೂರ್ತಿಯವರಿಗೆ ಮಾಲತೇಶ ಬಡಿಗೇರರವರ ಹೆಸರು ಪ್ರಸ್ತಾಪವಾಗಿದ್ದು ಸರಿ ಎನ್ನಿಸಲಿಲ್ಲ. ರಂಗಭೂಮಿಯನ್ನೇ ಬದುಕಾಗಿಸಿಕೊಂಡ ವೃತ್ತಿಪರ ರಂಗಕರ್ಮಿ ಮಾಲತೇಶ ಬಡಿಗೇರರವರು ರಂಗಾಯಣದ ನಿರ್ದೇಶಕರಾಗುವ ಎಲ್ಲಾ ಅರ್ಹತೆಗಳನ್ನೂ ಹೊಂದಿದ್ದರು. ಆದರೆ ಅದನ್ನು ತಪ್ಪಿಸಲು ನಾಗರಾಜಮೂರ್ತಿಗಳು ಬಿಜೆಪಿ ಕಾರ್ಡ್ ಪ್ಲೇ ಮಾಡಿದ್ದರು. ಮಾಲತೇಶರವರ ಹೆಂಡತಿ   ಛಾಯಾರವರ ತಂದೆ ಬಿಜೆಪಿ ಪಕ್ಷದವರು, ಹೀಗಾಗಿ ಮಾಲತೇಶರವರಿಗೆ ಅವಕಾಶ ಕೊಡಬಾರದು ಎನ್ನುವ ವಾದ ಮುಂದಿಟ್ಟು ಅವಕಾಶವನ್ನು ತಪ್ಪಿಸಿದರು. ಹೀಗೆ ಬಿಜೆಪಿಗರು ಎಂದು ಆರೋಪ ಹೊರಿಸಿ ಕೆಲವಾರು ಜನರನ್ನು ಅವಕಾಶವಂಚಿತರನ್ನಾಗಿ ಮಾಡಿದ ಕೀರ್ತಿ ನಾಗರಾಜಮೂರ್ತಿಯವರಿಗೆ ಸಲ್ಲಬೇಕು.

ಈಗ ಬಿಜೆಪಿಗರಾದ ಉಡುಪಿಯ ಪ್ರದೀಪಚಂದ್ರರವರಿಗೆ ಹಾಗೂ ಪಕ್ಕಾ ಆರೆಸ್ಸೆಸ್ ಪ್ರತಿಪಾದಕರಾದ ರಾಜಕುಮಾರರಿಗೆ ಯಾಕೆ ಅಕಾಡೆಮಿ ಪ್ರಶಸ್ತಿಯನ್ನು  ಇದೇ ನಾಗರಾಜಮೂರ್ತಿಗಳು ಕೊಟ್ಟಿದ್ದಾರೆ?. ಈ ಬಾರಿ ನಾಟಕ ಅಕಾಡೆಮಿಯ ಜೀವಮಾನದ ಪ್ರಶಸ್ತಿಗೆ ಭಾಜನರಾದ ಮುಖ್ಯಮಂತ್ರಿ ಚಂದ್ರುರವರು ಮೊದಲು ಬಿಜೆಪಿ ಪಕ್ಷದಲ್ಲೇ ಇದ್ದವರಲ್ಲವೇ?. ವಿಜಯನಗರ ಬಿಂಬದ ಸುಷ್ಮಾರವರಿಗೆ ಪ್ರಶಸ್ತಿ ಘೋಷಿಸಿದ್ದು ಸೂಕ್ತವಾಗಿದೆ. ಆದರೆ ಅವರ ತಂದೆ ವೆಂಕಟೇಶರವರು ಕಟ್ಟರ್ ಆರೆಸ್ಸೆಸ್ಸಿಗರಾಗಿದ್ದಾರೆ. ಹೀಗೆ ಹುಡುಕುತ್ತಾ ಹೋದರೆ ಸಂಘಿ ಮನಸ್ಥಿತಿ ಇರುವ ಕೆಲವರು ಪ್ರಶಸ್ತಿ ಪಟ್ಟಿಯಲ್ಲಿದ್ದಾರೆ.

ನಾಟಕ ಅಕಾಡೆಮಿಯ ಹಾಲಿ ಅಧ್ಯಕ್ಷರಾದ ನಾಗರಾಜಮೂರ್ತಿಯವರು

ಆದರೆ ಇಲ್ಲಿ ಸಂಘಿಯೋ ಇಲ್ಲಾ ಬಿಜೆಪಿಯ ಅಂಗವೋ ಎನ್ನುವುದು ಮುಖ್ಯವಲ್ಲ, ರಂಗಭೂಮಿಯಲ್ಲಿ ಅವರು ಮಾಡಿದ ಸಾಧನೆ ಮಾತ್ರ ಮುಖ್ಯ. ಅದನ್ನು ಪರಿಗಣಿಸಿ ಪ್ರಶಸ್ತಿ ಕೊಟ್ಟಿದ್ದರೆ ತಪ್ಪೇನಿಲ್ಲ. ಆದರೆ ಆಕ್ಷೇಪ ಇರುವುದು ಈ ನಾಗರಾಜಮೂರ್ತಿಗಳು ತಮಗೆ ಬೇಕಾದವರು ಬಿಜೆಪಿ ಪಕ್ಷಪಾತಿಗಳಾಗಿದ್ದರೂ ಮಾನ್ಯ ಮಾಡುತ್ತಾರೆ, ತಮಗೆ ಬೇಡವಾದವರ ಮೇಲೆ ಬಿಜೆಪಿಗರು ಎಂದು ಆರೋಪಿಸಿ ವಂಚಿಸುತ್ತಾರೆ. ಈ ರಂಗರಾಜಕೀಯವನ್ನು ವಿರೋಧಿಸಬೇಕಿದೆ.

ಹಾಗೆಯೇ ಈ ಸಲದ ಪ್ರಶಸ್ತಿ ಪಟ್ಟಿಯಲ್ಲಿ ಮಾಜಿ ರಂಗಕರ್ಮಿಗಳ ಹೆಸರುಗಳಿವೆ. ಅವರು ಎಂದೋ ರಂಗಭೂಮಿಯಲ್ಲಿ ತೊಡಗಿಕೊಂಡಿದ್ದು ಔಟಾಫ್ ಡೇಟೆಡ್. ಈಗ ದಶಕಗಳಿಂದ ಅವರು ಕ್ರಿಯಾಶೀಲರಾಗಿಲ್ಲ. ರಂಗಭೂಮಿಯಲ್ಲಿ ಈಗಲೂ ಸಕ್ರಿಯರಾಗಿರುವ ನೂರಾರು ರಂಗಕರ್ಮಿಗಳನ್ನು ನಿರ್ಲಕ್ಷಿಸಿ ಸಕ್ರಿಯರಲ್ಲದವರನ್ನೂ ಪ್ರಶಸ್ತಿಗೆ ಪರಿಗಣಿಸಿದ್ದು ಆಕ್ಷೇಪಾರ್ಹವಾಗಿದೆ. ಅಂತವರಲ್ಲಿ ಪ್ರಮುಖ ಹೆಸರು ಶಿವಾನಂದ ತಗಡೂರು. ಪರ್ತಕರ್ತರಾಗಿರುವ ತಗಡೂರರಿಗೂ ನಾಟಕ ಅಕಾಡೆಮಿಗೂ ಎತ್ತಣಿಂದೆತ್ತ ಸಂಬಂಧವಯ್ಯಾ ಎಂದು  ಬಹುತೇಕ ರಂಗಕರ್ಮಿಗಳು ಕೇಳುತ್ತಿದ್ದಾರೆ. ಅವರು ಕಲಾವಿದರಾ, ನಿರ್ದೇಶಕರಾ, ನಾಟಕಕಾರರಾ? ಅವರಿಗೆ ಯಾಕೆ ನಾಟಕ ಅಕಾಡೆಮಿ ಪ್ರಶಸ್ತಿ ಎಂದು ಪ್ರಶ್ನಿಸುತ್ತಿದ್ದಾರೆ. ಶಿವಾನಂದ ತಗಡೂರರವರು ಹಾಸನದಲ್ಲಿ ಹಿಂದೆಂದೋ ರಂಗಸಂಘಟಕರಾಗಿದ್ದಂತೂ ನಿಜ. ಆದರೆ ರಂಗಭೂಮಿಗೆ ಅವರ ಕೊಡುಗೆ ಹೇಳಿಕೊಳ್ಳುವಂತಹದ್ದೇನೂ ಇಲ್ಲ. ಪರ್ತಕರ್ತರಾಗಿ, ಪರ್ತಕರ್ತರ ಸಂಘದ ಅಧ್ಯಕ್ಷರಾಗಿ ತಗಡೂರರವರು ಸಕ್ರಿಯರಾಗಿದ್ದಾರೆ. ಅವರ ಜೊತೆ ನಾಗರಾಜಮೂರ್ತಿಯವರಿಗೆ ಇರಬಹುದಾದ ಪರ್ಸನಲ್ ಸ್ನೇಹಕ್ಕೆ ಅಕಾಡೆಮಿ ಪ್ರಶಸ್ತಿ ಕೊಟ್ಟಿರುವುದು ಇನ್ಯಾರೋ ರಂಗಕರ್ಮಿಗೆ ದಕ್ಕಬಹುದಾಗಿದ್ದ ಪ್ರಶಸ್ತಿಯಿಂದ ವಂಚಿಸಿದಂತಾಗಿದೆ.

ಹೀಗೆ ಕೆದಕುತ್ತಾ ಹೋದರೆ ಪ್ರಶಸ್ತಿ ಪಟ್ಟಿಯಲ್ಲಿ ಬೇಕಾದಷ್ಟು ತಕರಾರುಗಳಿವೆ. ಆದರೆ ನಾಗರಾಜಮೂರ್ತಿಯವರನ್ನು ಪ್ರಶ್ನಿಸುವುದು ಎಂದರೆ ಗಾಳಿ ಗುದ್ದಿ ಮೈ ನೋಯಿಸಿಕೊಂಡಂತೆ. ಕಳೆದ ಎರಡೂ ಕಾಲು ವರ್ಷಗಳಿಂದ ನಾಟಕ ಅಕಾಡೆಮಿಯಲ್ಲಿ ಸರ್ವಾಧಿಕಾರಿಯಾಗಿಯೇ ಮೆರೆದ ನಾಗರಾಜಮೂರ್ತಿಗಳ ಮೇಲೆ ಬಹುತೇಕ ಅಕಾಡೆಮಿ ಸದಸ್ಯರಿಗೆ ತೀವ್ರವಾದ ಅಸಮಾಧಾನವಿದೆ. ಅಕಾಡೆಮಿಯಲ್ಲಿ ಅಕಾಡೆಮಿಕ್ ಕೆಲಸಗಳನ್ನು ಮಾಡುವುದು ಬಿಟ್ಟು ಪ್ರಚಾರ ಗಿಟ್ಟಿಸಲು ಕೇವಲ ರಂಗಪರಿಷೆ, ರಂಗ ಜಾತ್ರೆ, ರಂಗೋತ್ಸವ ಹಾಗೂ ಪ್ರಶಸ್ತಿಗಳ ವಿತರಣೆಯಲ್ಲಿ ನಿರತವಾಗಿರುವ ರಂಗರಾಜಕಾರಣಿ ನಾಗರಾಜಮೂರ್ತಿಯವರು ಮುಂದಿನ ತಲೆಮಾರು ನೆನಪಿಟ್ಟುಕೊಳ್ಳುವಂತಹ ಒಂದೇ ಒಂದು ಹೊಸ ಯೋಜನೆಯನ್ನೂ ಹಮ್ಮಿಕೊಂಡು ಕಾರ್ಯರೂಪಕ್ಕೆ ತಂದಿಲ್ಲ. ಕೇವಲ ಮಾತಿನಲ್ಲೇ ಮಂಟಪ ಕಟ್ಟುವುದರಿಂದ ರಂಗಭೂಮಿಗೆ ಯಾವುದೇ ಪ್ರಯೋಜನವಿಲ್ಲ.

ಎಲ್ಲಾ ಪಕ್ಷಗಳ ಪ್ರಭಾವಿ ರಾಜಕಾರಣಿಗಳ ಒಡನಾಟ ಇರುವ ನಾಗರಾಜಮೂರ್ತಿಯವರು ಮೊದಲು ಸರಕಾರಿ ಸಾಂಸ್ಕೃತಿಕ ಸಂಸ್ಥೆಗಳ ಅವಧಿ ಪೂರ್ವ ಅಮಾನತ್ತು ಆದೇಶ ಆಗದಂತೆ ನೋಡಿಕೊಳ್ಳಲಿ. ಆತುರದಲ್ಲಿ ಪ್ರಶಸ್ತಿಗಳನ್ನು ಕೊಟ್ಟಂತೆ ಮಾಡಿ ಕೊಡದೇ ಕಿತ್ತುಕೊಳ್ಳುವ ಜೆ.ಲೋಕೇಶರವರ ಅವಧಿಯ ಪ್ರಹಸನ ಮತ್ತೆ ಮರುಕಳಿಸದಂತೆ ನೋಡಿಕೊಳ್ಳಲಿ. ನಾಟಕ ಅಕಾಡೆಮಿಗೆ ನಾಗರಾಜಮೂರ್ತಿಗಳು ಮಾದರಿ ಅಧ್ಯಕ್ಷರಾಗದಿದ್ದರೂ ಪರವಾಗಿಲ್ಲ ಮಾರಕ ಅಧ್ಯಕ್ಷರಾಗದಿರಲಿ.

ಇದನ್ನೂ ಓದಿ- ಪುಸ್ತಕದ ಓದು ಕೂಡಾ ವ್ಯವಹಾರವಾದಾಗ…

More articles

Latest article

Most read