ನಕಲಿ ಔಷಧಿ ಹಗರಣ : SIT ರಚನೆ, ವಂಶಿ ಕೃಷ್ಣ ಮುಖ್ಯಸ್ಥರು

ಬೆಂಗಳೂರು ದಕ್ಷಿಣ ಜಿಲ್ಲೆಯ ತಾವರೆಕೆರೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ನಕಲಿ ಔಷಧ ಹಗರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರದ ಒಳಾಡಳಿತ ಇಲಾಖೆ ವಿಶೇಷ ತನಿಖಾ ತಂಡ (SIT) ರಚಿಸಿದೆ. ಜಂಟಿ ಪೊಲೀಸ್ ಆಯುಕ್ತರು (ಪಶ್ಚಿಮ) ಸಿ. ವಂಶೀಕೃಷ್ಣ ಐಪಿಎಸ್ ಅವರನ್ನು ತಂಡದ ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ.

ಆಗಸ್ಟ್ 18ರಂದು ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ತಂಡವು ಬಿಡದಿ ಬಳಿ ಕುರುಬರಕೆರೆನಹಳ್ಳಿ ಗ್ರಾಮದ ಫಾರ್ಮ್‌ಹೌಸ್‌ನಲ್ಲಿ ದಾಳಿ ನಡೆಸಿ ಸುಮಾರು ₹4.91 ಕೋಟಿ ಮೌಲ್ಯದ ನಕಲಿ ಔಷಧಗಳನ್ನು ವಶಪಡಿಸಿಕೊಂಡಿತ್ತು. ಪ್ರತಿಷ್ಠಿತ ಬಹುರಾಷ್ಟ್ರೀಯ ಕಂಪನಿಗಳ (Pfizer ಸೇರಿದಂತೆ) ಲೇಬಲ್ ಹಚ್ಚಿ, ಲೈಸೆನ್ಸ್ ಇಲ್ಲದೆ ಔಷಧಗಳನ್ನು ಪುನಃ ಪ್ಯಾಕ್ ಮಾಡಿ ಮಾರಾಟ ಮಾಡುತ್ತಿದ್ದ ಘಟಕ ಪತ್ತೆಯಾಗಿತ್ತು.

ವಶಪಡಿಸಿಕೊಂಡ ವಸ್ತುಗಳಲ್ಲಿ 5,640 ವಯಲ್‌ಗಳ CEFIAVIGENT 2.5 Injection (₹3.38 ಕೋಟಿ), HIZLAM injectables, Xavitaz, Emblaveo ಸೇರಿದಂತೆ ICUಗಳಲ್ಲಿ ಬಳಸುವ ಇಂಜೆಕ್ಷನ್‌ಗಳು, ಅವಧಿ ಮೀರಿದ ಔಷಧಗಳು, ನಕಲಿ ಲೇಬಲ್‌ಗಳು ಮತ್ತು ಪ್ಯಾಕೇಜಿಂಗ್ ಯಂತ್ರಗಳು ಸೇರಿವೆ. ಈ ಔಷಧಗಳನ್ನು ಹಿಮಾಚಲ ಪ್ರದೇಶ, ತೆಲಂಗಾಣ ಮತ್ತು ಇತರೆ ರಾಜ್ಯಗಳಿಂದ ಅಗ್ಗದ ಬೆಲೆಗೆ ತರಿಸಿ, ಇಲ್ಲಿ ಬ್ರಾಂಡ್ ಹೆಸರುಗಳಲ್ಲಿ ಮರುಪ್ಯಾಕ್ ಮಾಡಿ ಆಸ್ಪತ್ರೆಗಳು ಹಾಗೂ ಫಾರ್ಮಸಿಗಳಿಗೆ ಪೂರೈಸುತ್ತಿದ್ದರು ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ.

ಈ ಪ್ರಕರಣವನ್ನು ತಾವರೆಕೆರೆ ಪೊಲೀಸ್ ಠಾಣೆಯಲ್ಲಿ ಕ್ರೈಮ್ ನಂ. 266/2026 ಎಂದು ದಾಖಲಿಸಲಾಗಿದೆ. ಪ್ರಕರಣವು ಭಾರತೀಯ ನ್ಯಾಯ ಸಂಹಿತೆ (BNS) ಕಲಂ 276 (ಔಷಧಗಳನ್ನು ಕಲುಷಿತಗೊಳಿಸುವುದು), ಕಲಂ 318(4) (ವಂಚನೆ) ಹಾಗೂ ಕಾಪಿ ರೈಟ್ಸ್ ಕಾಯ್ದೆ-1957ರ ಕಲಂ 51 ಮತ್ತು 63ರ ಅಡಿಯಲ್ಲಿ ದಾಖಲಾಗಿದೆ.

ವಿಶೇಷ ತನಿಖಾ ತಂಡದ ಸದಸ್ಯರು:

  1. ಶ್ರೀ ಸಿ. ವಂಶೀಕೃಷ್ಣ, ಐಪಿಎಸ್ – ಜಂಟಿ ಪೊಲೀಸ್ ಆಯುಕ್ತರು, ಪಶ್ಚಿಮ, ಬೆಂಗಳೂರು ನಗರ (ಮುಖ್ಯಸ್ಥರು)
  2. ಶ್ರೀ ಶಿವ ಪ್ರಕಾಶ್ ದೇವರಾಜು, ಐಪಿಎಸ್ – ಪೊಲೀಸ್ ಅಧೀಕ್ಷಕರು, ಬೆಂಗಳೂರು
  3. ಶ್ರೀ ಲೋಕೇಶ್ ಬಿ. ಜಗಲಾನರ್, ಐಪಿಎಸ್ – ಪೊಲೀಸ್ ಅಧೀಕ್ಷಕರು, ಸಿ.ಐ.ಡಿ., ಬೆಂಗಳೂರು
  4. ಶ್ರೀ ಮಂಜುನಾಥ ರೆಡ್ಡಿ – ಸಹಾಯಕ ಔಷಧ ನಿಯಂತ್ರಕರು, ಬೆಂಗಳೂರು
  5. ಶ್ರೀಮತಿ ನಮ್ರತಾ ಹಲವೂರು – ಸಹಾಯಕ ಔಷಧ ನಿಯಂತ್ರಕರು, ಬೆಂಗಳೂರು ದಕ್ಷಿಣ ಜಿಲ್ಲೆ
  6. ಶ್ರೀಮತಿ ನೇಹಾ ಮುಗ್ಗಿ – ಔಷಧ ನಿರೀಕ್ಷಕರು, ಬೆಂಗಳೂರು ದಕ್ಷಿಣ ಜಿಲ್ಲೆ

ಸರ್ಕಾರದ ಆದೇಶ ಸಂಖ್ಯೆ ಹೆಚ್‌ಡಿ 204 ಸಿಒಡಿ 2026 (ದಿನಾಂಕ 20.08.2026)ರ ಪ್ರಕಾರ, ಈ ಎಸ್‌ಐಟಿಯನ್ನು ಕರ್ನಾಟಕ ರಾಜ್ಯ ವ್ಯಾಪ್ತಿಯಲ್ಲಿ ಪೊಲೀಸ್ ಠಾಣೆಯೆಂದು ಘೋಷಿಸಲಾಗಿದೆ. ತನಿಖಾಧಿಕಾರಿಗಳಿಗೆ ಬಿ.ಎನ್.ಎಸ್.ಎಸ್. ಕಲಂ 193ರ ಅಡಿಯಲ್ಲಿ ನ್ಯಾಯಾಲಯಕ್ಕೆ ವರದಿ ಸಲ್ಲಿಸುವ ಅಧಿಕಾರವಿದೆ. ರಾಜ್ಯದ ಇತರೆ ಪೊಲೀಸ್ ಠಾಣೆಗಳಲ್ಲಿ ದಾಖಲಾಗುವ ಸಂಬಂಧಿತ ಪ್ರಕರಣಗಳನ್ನು ಈ ತಂಡಕ್ಕೆ ವರ್ಗಾಯಿಸಲಾಗುವುದು.

ಎಸ್‌ಐಟಿ ಅವರ ಪೊಲೀಸ್ ಮಹಾನಿರ್ದೇಶಕರು (ಕಾನೂನು ಮತ್ತು ಸುವ್ಯವಸ್ಥೆ) ಅವರ ಮೇಲ್ವಿಚಾರಣೆಯಲ್ಲಿ ಕಾರ್ಯನಿರ್ವಹಿಸಲಿದೆ. ತನಿಖಾ ಪ್ರಗತಿಯನ್ನು ನಿಯಮಿತವಾಗಿ ವರದಿ ಮಾಡಿ, ಅಂತಿಮ ವರದಿಯನ್ನು ನ್ಯಾಯಾಲಯಕ್ಕೆ ಹಾಗೂ ಸರ್ಕಾರಕ್ಕೆ ಸಲ್ಲಿಸಬೇಕು.

ಪ್ರಧಾನ ಆರೋಪಿ ಪ್ರಶಾಂತ್ (ದುಬೈ ನಿವಾಸಿ) ಇನ್ನೂ ಪರಾರಿಯಾಗಿದ್ದು, ಒಟ್ಟು ನಾಲ್ಕು ಆರೋಪಿಗಳನ್ನು ಬಂಧಿಸಲಾಗಿದೆ. ಅಂತರರಾಜ್ಯ ಜಾಲವನ್ನು ಬೇರುಸಹಿತ ತನಿಖೆ ನಡೆಸಲು ಎಸ್‌ಐಟಿ ರಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

More articles

Latest article

Most read