ಬಿಜೆಪಿಯ ನೂತನ ರಾಷ್ಟ್ರೀಯ ಪದಾಧಿಕಾರಿಗಳ ಪಟ್ಟಿ ಪ್ರಕಟ, ಸ್ಮೃತಿ ಇರಾನಿ ಸೇರಿದಂತೆ 10 ಮಂದಿ ಮಹಿಳೆಯರಿಗೆ ಸ್ಥಾನ

ನವದೆಹಲಿ : ಬಿಜೆಪಿ ಹೊಸ ರಾಷ್ಟ್ರೀಯ ಪದಾಧಿಕಾರಿಗಳ ತಂಡವನ್ನು ಪ್ರಕಟಿಸಿದೆ. ಪಕ್ಷದ ಅಧ್ಯಕ್ಷ ನಿತಿನ್ ನಬಿನ್ ನೇತೃತ್ವದ ಈ ತಂಡದಲ್ಲಿ ಮಾಜಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಸೇರಿದಂತೆ 10 ಮಹಿಳೆಯರು ಹಾಗೂ ಆರು ಮಂದಿ ಅಲ್ಪಸಂಖ್ಯಾತ ಸಮುದಾಯದ ನಾಯಕರುಗಳಿಗೆ ಸ್ಥಾನ ನೀಡಲಾಗಿದೆ.

ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡಿರುವ ಸ್ಮೃತಿ ಇರಾನಿ ಅವರಲ್ಲದೆ, ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೇ ಸಿಂಧಿಯಾ, ಮಾಜಿ ಕೇಂದ್ರ ಸಚಿವೆ ಡಿ. ಪುರಂದರೇಶ್ವರಿ ಮತ್ತು ರಾಷ್ಟ್ರೀಯ ಮಹಿಳಾ ಆಯೋಗದ ಮಾಜಿ ಮುಖ್ಯಸ್ಥೆ ರೇಖಾ ವರ್ಮಾ ಅವರು ಉಪಾಧ್ಯಕ್ಷರಾಗಿದ್ದಾರೆ.ಕವಿತಾ ಪಾಟಿದಾರ್ ಮತ್ತು ಸಂಗೀತಾ ಯಾದವ್ ಅವರನ್ನು ರಾಷ್ಟ್ರೀಯ ಕಾರ್ಯದರ್ಶಿಗಳನ್ನಾಗಿ ನೇಮಿಸಲಾಗಿದೆ. ರೂಪ್ ಕುಮಾರಿ ಚೌಧರಿ ಅವರನ್ನು ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷೆಯನ್ನಾಗಿ ನೇಮಿಸಲಾಗಿದ್ದು, ಪ್ರೀತಿ ಗಾಂಧಿ ಅವರನ್ನು ಸಾಮಾಜಿಕ ಜಾಲತಾಣ ವಿಭಾಗದ ಸಹ-ಸಂಯೋಜಕರನ್ನಾಗಿ ನೇಮಿಸಲಾಗಿದೆ.

ದೇಶದ ವಿವಿಧ ಭಾಗಗಳಿಂದ ಹತ್ತು ಅನುಭವಿ ಮಹಿಳಾ ನಾಯಕಿಯರನ್ನು ರಾಷ್ಟ್ರೀಯ ಪದಾಧಿಕಾರಿಗಳಾಗಿ ನೇಮಕ ಮಾಡಲಾಗಿದೆ. ಪಕ್ಷದ ನಾಯಕರು ಈ ಹೊಸ ತಂಡವನ್ನು ಆಡಳಿತಾತ್ಮಕ ಹಾಗೂ ಸಾಂಸ್ಥಿಕ ಅನುಭವ, ಯುವಶಕ್ತಿ, ಭೌಗೋಳಿಕ ವೈವಿಧ್ಯತೆ ಮತ್ತು ಸಮಗ್ರ ಸಾಮಾಜಿಕ ಪ್ರಾತಿನಿಧ್ಯದ ಒಂದು ಕಾರ್ಯತಂತ್ರದ ಸಮ್ಮಿಶ್ರಣ ಎಂದು ಬಣ್ಣಿಸಿದ್ದಾರೆ.

More articles

Latest article

Most read