ತಂತ್ರಜ್ಞಾನದಲ್ಲಿ ಬದಲಾಗುತ್ತಿರುವ ಜಗತ್ತಿನ ಮುಂದಿರುವ ಸವಾಲುಗಳನ್ನು ಅವಕಾಶಗಳಾಗಿ ಪರಿವರ್ತಿಸಿಕೊಳ್ಳಬೇಕು : ಪ್ರಧಾನಿ ನರೇಂದ್ರ ಮೋದಿ

ನವದೆಹಲಿ : ಜಗತ್ತು ಮತ್ತು ತಂತ್ರಜ್ಞಾನವು ವೇಗವಾಗಿ ಬದಲಾಗುತ್ತಿದ್ದು, ಹೊಸ ವಿಷಯವನ್ನು ಅಳವಡಿಸಿಕೊಂಡೆ  (ಸ್ಕಿಲ್‌) ಗೆಲ್ಲಬಹುದು.  ಜೊತೆಗೆ ವಿದ್ಯಾರ್ಥಿಗಳು ತಮ್ಮ ಕುತೂಹಲವನ್ನು ಜೀವಂತವಾಗಿರಿಸಿಕೊಳ್ಳಬಹುದು ಎಂದು ಪ್ರಧಾನಿ ನರೇಂದ್ರ ಮೋದಿ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ದೆಹಲಿಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ  57ನೇ ಘಟಿಕೋತ್ಸವ ಸಮಾರಂಭದಲ್ಲಿ ಕೃತಕ ಬುದ್ಧಿಮತ್ತೆ ಆಧಾರಿತ ಉನ್ನತ-ಕಾರ್ಯಕ್ಷಮತೆಯ ಸೂಪರ್ ಕಂಪ್ಯೂಟಿಂಗ್ ಸೌಲಭ್ಯವಾದ ‘ಪರಮ್ ಪ್ರಜ್ಞಾ’ವನ್ನು  ಇದೇ ಸಂದರ್ಭದಲ್ಲಿ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಪ್ರಧಾನಿ, ಹೊಸತನ್ನು ಕಂಡುಕೊಳ್ಳುವ ಧೈರ್ಯವಿರುವ ಯುವಜನಾಂಗಕ್ಕೆ ಸವಾಲುಗಳು ಅವಕಾಶಗಳಾಗಿ ಬದಲಾಗುತ್ತವೆ ಎಂದು ಹೇಳಿದರು. ಪದವಿ ಪದಕಗಳನ್ನು ಪಡೆದುಕೊಳ್ಳುವಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿನಿಯರು ಇರಬೇಕಿತ್ತು ಎಂದರು. 
ಪ್ರತಿಯೊಬ್ಬ ವಿದ್ಯಾರ್ಥಿಯೂ ವಿಭಿನ್ನ ಹಾದಿ ಮತ್ತು ವಿಭಿನ್ನ ಕನಸನ್ನು ಹೊಂದಿರುತ್ತಾರೆ, ಆದರೆ ಐಐಟಿ ದೆಹಲಿಯಲ್ಲಿನ ತಮ್ಮ ಪ್ರಯಾಣದಲ್ಲಿ ಎಲ್ಲರೂ ಒಂದು ತರಹದ  ಭಾವನೆಯನ್ನು ಹಂಚಿಕೊಳ್ಳುತ್ತಾರೆ ಎಂದು ಹೇಳಿದರು.

ದೃಷ್ಟಿಕೋನ ಕಾರ್ಯಕ್ರಮದಿಂದ ಘಟಿಕೋತ್ಸವದವರೆಗಿನ ತಮ್ಮ ಪ್ರಯಾಣದ ಬಗ್ಗೆ ವಿದ್ಯಾರ್ಥಿಗಳು ತೃಪ್ತಿಯ ಭಾವನೆಯನ್ನು ಹೊಂದಿರಬೇಕು ಮತ್ತು ಅದೇ ಸಮಯದಲ್ಲಿ ತಮ್ಮ ಜೀವನದ ಹೊಸ ಅಧ್ಯಾಯವನ್ನು ಪ್ರಾರಂಭಿಸುವ ಬಗ್ಗೆ ಉತ್ಸಾಹವನ್ನೂ ಹೆಚ್ಚಿಸಿಕೊಳ್ಳಬೇಕು ಎಂದು ಅವರು ಹೇಳಿದರು.

ಸಂಶೋಧನೆಯತ್ತ ತೊಡಗಲು ಕರೆ

ಸಂಶೋಧನಾ ಕ್ಷೇತ್ರದಲ್ಲಿರುವ ಅವಕಾಶಗಳ ಬಗ್ಗೆ ವಿದ್ಯಾರ್ಥಿಗಳಿಗೆ ವಿವರಿಸಿದ ಮೋದಿ, ದೇಶದಲ್ಲಿ ಸಂಶೋಧನೆ ಮತ್ತು ನಾವೀನ್ಯತೆಯನ್ನು ಬಲಪಡಿಸುವ ಗುರಿಯಿದ್ದು,  ಪದವಿ ಪಡೆಯುವ ವಿದ್ಯಾರ್ಥಿಗಳ ಮುಂದೆ ಸಂಶೋಧನೆಯಲ್ಲಿ ಹಲವು  ಅವಕಾಶಗಳಿವೆ.  ಪ್ರಧಾನ ಮಂತ್ರಿಗಳ ಸಂಶೋಧನಾ ಫೆಲೋಶಿಪ್ ಪ್ರತಿಭಾನ್ವಿತ ಯುವಜನರಿಗೆ ಸಂಶೋಧನೆಯನ್ನು ಮುಂದುವರಿಸಲು ಅವಕಾಶಗಳನ್ನು ಒದಗಿಸುತ್ತಿದೆ. ಸಂಶೋಧನೆ, ಅಭಿವೃದ್ಧಿ ಮತ್ತು ನಾವೀನ್ಯತೆ ಯೋಜನೆ, ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನದ ಸ್ಥಾಪನೆ ಮತ್ತು ಸಂಶೋಧನಾ ವಲಯಕ್ಕೆ 1 ಲಕ್ಷ ಕೋಟಿ ರೂ.ಗಳವರೆಗೆ ಹಣಕಾಸು ಒದಗಿಸುವುದನ್ನು ಸಹ ಅವರು ಎತ್ತಿ ತೋರಿಸಿದರು ಎಂದು   ಹೇಳಿದರು.

More articles

Latest article

Most read