ರಾಷ್ಟ್ರನಿಷ್ಠೆಯ ಪ್ರಮಾಣಪತ್ರ ನೀಡುವ ಹಕ್ಕು ಆರ್‌ಎಸ್‌ಎಸ್‌ಗೆ ನೀಡಿದ್ದು ಯಾರು? ಪ್ರಿಯಾಂಕ್ ಖರ್ಗೆ ತೀವ್ರ ವಾಗ್ದಾಳಿ

ಬೆಂಗಳೂರು : ಜೆನ್-ಜಿ ಮಕ್ಕಳು ದೇಶಭಕ್ತರೋ ಅಲ್ಲವೋ ಎಂದು ನಿರ್ಧರಿಸಿ ಪ್ರಮಾಣಪತ್ರ ನೀಡಲು ಆರ್‌ಎಸ್‌ಎಸ್‌ ಮೋಹನ್‌ ಭಾಗವತ್‌ ಯಾರು?  ಎಂದು ಗೃಹ ಸಚಿವ ಪ್ರಿಯಾಂಕ್‌ ಖರ್ಗೆ ಪ್ರಶ್ನಿಸಿದ್ದಾರೆ.

ಆರ್‌ಎಸ್‌ಎಸ್‌ ಮೋಹನ್‌ ಭಾಗವತ್‌ಗೆ ದೇಶಭಕ್ತಿಯ ಪ್ರಮಾಣಪತ್ರ ನೀಡುವ ಗುತ್ತಿಗೆಯನ್ನು ಕೊಟ್ಟವರು ಯಾರು? ಸ್ವತಃ ಆರ್‌ಎಸ್‌ಎಸ್‌  ಸಂಘಟನೆಯಾಗಿ ನೋಂದಾಯಿಸಿಕೊಂಡಿಲ್ಲ, ಆದರೂ ಅವರು ಬೇರೆಯವರಿಗೆ ದೇಶಭಕ್ತರ  ಪ್ರಮಾಣಪತ್ರಗಳನ್ನು ನೀಡುತ್ತಾ ತಿರುಗುತ್ತಿದ್ದಾರೆ.  

ಮೊದಲು ಅವರು ತಮ್ಮದೇ ಆದ ಪ್ರಮಾಣೀಕರಣವನ್ನು ಪಡೆದುಕೊಳ್ಳಲಿ ಎಂದು ಕಿಡಿಕಾರಿದ್ದಾರೆ.  ಬಳಿಕ, ಅವರು ಇತರರಿಗೆ ಪ್ರಮಾಣಪತ್ರಗಳನ್ನು ನೀಡಲಿ ಎಂದರು.
ಜೆನ್‌ ಝೀ, ಅಲ್ಫಾ   ಮಕ್ಕಳನ್ನು ಮೋಹನ್‌ ಭಾಗವತ್‌ ಆಶೀರ್ವದಿಸುತ್ತಿದ್ದಾರೆ ಎಂದು ನಿಮಗೆ ಹಾಗೆ ಅನ್ನಿಸುತ್ತದೆಯೇ? ಆಶೀರ್ವಾದವನ್ನು ಯಾರಾದರೂ ಕೇಳಿದ್ದರಾ?

ಮೋಹನ್ ಭಾಗವತ್ ಅಥವಾ ಪ್ರಧಾನ ಮಂತ್ರಿಯವರಿಂದ ಕ್ಷಮೆಯಾಚನೆಯನ್ನು ಯಾರಾದರೂ ಕೇಳಿದ್ದರೇ?  ಎಫ್‌ಐಆರ್‌ಗಳನ್ನು ದಾಖಲಿಸಲಾಗುತ್ತಿರುವಾಗ, ಕ್ಷಮೆಯಾಚನಾ ಪತ್ರಗಳನ್ನು ಬರೆಯುವಂತೆ ಮಕ್ಕಳ ಮೇಲೆ ಅವರ ಪೋಷಕರಿಂದಲೇ ಒತ್ತಡ ಹೇರಲಾಗುತ್ತಿದೆ ಎಂದು ಗಂಭೀರವಾಗಿ ಆರೋಪಿಸಿದರು. 

ಇನ್ನು   ಆ ಮಕ್ಕಳ ಮನಸ್ಸಿನಲ್ಲಿ ನಿಜವಾಗಿಯೂ ಏನಿದೆ ಎಂಬುದು ಜಂತರ್ ಮಂತರ್‌ನಲ್ಲಿ ಎಲ್ಲರಿಗೂ ಸ್ಪಷ್ಟವಾಗಿ ಗೋಚರಿಸಿದೆ ಎಂದು ಪ್ರಿಯಾಂಕ್‌ ಖರ್ಗೆ ಹೇಳಿದರು. 

More articles

Latest article

Most read