ರಾಜ್ಯದಲ್ಲಿ 1,500ಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ಗಳಿಗೆ ಬೆಂಬಲ, ರೊಬೊಟಿಕ್ಸ್, ಕ್ವಾಂಟಮ್ ಕಂಪ್ಯೂಟಿಂಗ್ ಹಾಗೂ ಬಯೋಟೆಕ್ನಾಲಜಿ ಕ್ಷೇತ್ರಕ್ಕೆ ವೇಗ : ಪ್ರಿಯಾಂಕ್‌ ಖರ್ಗೆ

ಬೆಂಗಳೂರು : ನಾಸ್ಕಾಂ ಆಯೋಜಿಸಿದ್ದ ‘ಫ್ಯೂಚರ್ ಫೋರ್ಜ್-ಚಾರ್ಟಿಂಗ್ ಇಂಡಿಯಾಸ್ ಡೀಪ್‌ಟೆಕ್ ಆರ್ಕಿಟೆಕ್ಚರ್” ಕಾರ್ಯಕ್ರಮದಲ್ಲಿ ಕರ್ನಾಟಕದ ಡೀಪ್‌ಟೆಕ್  ದೃಷ್ಟಿಕೋನವನ್ನು ಐಟಿ ಬಿಟಿ ಸಚಿವ ಪ್ರಿಯಾಂಕ್‌ ಖರ್ಗೆ ಹಂಚಿಕೊಂಡರು.

ರಾಜ್ಯದ ಡೀಪ್‌ಟೆಕ್ ಇಕೋ ಸಿಸ್ಟಂ ಅನ್ನು ಮತ್ತಷ್ಟು ಬಲಪಡಿಸಲು ಪ್ರತಿಭೆ, ಸಂಶೋಧನೆ, ನವೋದ್ಯಮ, ತಂತ್ರಜ್ಞಾನ ಅಳವಡಿಕೆ ಮತ್ತು ಜಾಣ ಆಡಳಿತ ಎಂಬ  ಐದು ಪ್ರಮುಖ ಅಡಿಪಾಯಗಳ ಮೇಲೆ ನಮ್ಮ ಸರ್ಕಾರ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು. 

ಸರ್ಕಾರ, ಕೈಗಾರಿಕೆ ಮತ್ತು ಶಿಕ್ಷಣ ಸಂಸ್ಥೆಗಳ ನಡುವಿನ ಬಲಿಷ್ಠ ಸಹಭಾಗಿತ್ವವೇ ಕರ್ನಾಟಕವನ್ನು ದೇಶದ ಪ್ರಮುಖ ತಂತ್ರಜ್ಞಾನ ಕೇಂದ್ರವನ್ನಾಗಿ ರೂಪಿಸಿದೆ. ಇದೇ ಮಾದರಿಯನ್ನು ಆಧರಿಸಿ ಕೃತಕ ಬುದ್ದಿಮತ್ತೆ (AI), ಮೆಷಿನ್ ಲರ್ನಿಂಗ್ (ML), ರೊಬೊಟಿಕ್ಸ್, ಕ್ವಾಂಟಮ್ ಕಂಪ್ಯೂಟಿಂಗ್ ಹಾಗೂ ಬಯೋಟೆಕ್ನಾಲಜಿ ಸೇರಿದಂತೆ ಅತ್ಯಾಧುನಿಕ ತಂತ್ರಜ್ಞಾನ ಕ್ಷೇತ್ರಗಳಲ್ಲಿ ನಮ್ಮ ಮುನ್ನಡೆಯನ್ನು ಇನ್ನಷ್ಟು ವೇಗಗೊಳಿಸಲಾಗುವುದು ಎಂದು ತಿಳಿಸಿದರು.

ನಿಪುಣ ಕರ್ನಾಟಕ ಯೋಜನೆಯ ಮೂಲಕ AI, ಸೈಬರ್ ಸುರಕ್ಷತೆ, ತಯಾರಿಕೆ ಮತ್ತು ಜೀವ ವಿಜ್ಞಾನ ಕ್ಷೇತ್ರಗಳಲ್ಲಿ ಭವಿಷ್ಯದ ಕೌಶಲ್ಯಗಳನ್ನು ಬೆಳೆಸುತ್ತಿದ್ದೇವೆ. ರಾಜ್ಯದಾದ್ಯಂತ ಸ್ಥಾಪಿಸಲಾಗಿರುವ 20ಕ್ಕೂ ಹೆಚ್ಚು ಸೆಂಟರ್ ಆಫ್ ಎಕ್ಸಲೆನ್ಸ್‌ಗಳು ಸಂಶೋಧನೆಯನ್ನು ವಾಣಿಜ್ಯ ಉತ್ಪನ್ನಗಳನ್ನಾಗಿ ಪರಿವರ್ತಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದು, ಇದುವರೆಗೆ 1,000ಕ್ಕೂ ಹೆಚ್ಚು ಬೌದ್ಧಿಕ ಆಸ್ತಿಗಳು (IP) ಸೃಷ್ಟಿಯಾಗಿವೆ.

ELEVATE ಹಾಗೂ ELEVATE NxT ಯೋಜನೆಗಳ ಮೂಲಕ 1,500ಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ಗಳಿಗೆ ಬೆಂಬಲ ನೀಡಿದ್ದೇವೆ. ಡೀಪ್‌ಟೆಕ್ ನವೋದ್ಯಮಗಳಿಗೆ ₹1 ಕೋಟಿವರೆಗೆ ಅನುದಾನ, ಮಾರ್ಗದರ್ಶನ ಮತ್ತು ಜಾಗತಿಕ ಮಾರುಕಟ್ಟೆಗಳೊಂದಿಗೆ ಸಂಪರ್ಕ ಕಲ್ಪಿಸುವ ಮೂಲಕ ಜಾಗತಿಕ ಸ್ಪರ್ಧೆಗೆ ಸಜ್ಜುಗೊಳಿಸುತ್ತಿದ್ದೇವೆ ಎಂದರು.

‘Government First Customer’ ಪರಿಕಲ್ಪನೆಯಡಿ ಸರ್ಕಾರವೇ ನವೋದ್ಯಮಗಳ ಮೊದಲ ಬಳಕೆದಾರನಾಗಿ ಆರೋಗ್ಯ, ಕೃಷಿ, ನಗರಾಡಳಿತ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸ್ಟಾರ್ಟ್‌ಅಪ್‌ಗಳು ಅಭಿವೃದ್ಧಿಪಡಿಸಿರುವ ತಂತ್ರಜ್ಞಾನಗಳನ್ನು ಪ್ರಯೋಗಾತ್ಮಕವಾಗಿ ಅಳವಡಿಸಿಕೊಳ್ಳುತ್ತಿದೆ.

ಇ-ಆಡಳಿತದಿಂದ ವ್ಯವಸ್ಥೆಯತ್ತ ಕರ್ನಾಟಕ ಮುನ್ನಡೆಯುತ್ತಿದ್ದು, ಕೃತಕ ಬುದ್ಧಿಮತ್ತೆ ಮತ್ತು ಡಿಜಿಟಲ್ ತಂತ್ರಜ್ಞಾನಗಳ ನೆರವಿನಿಂದ ಸಾರ್ವಜನಿಕ ಸೇವೆಗಳನ್ನು ಇನ್ನಷ್ಟು ವೇಗವಾಗಿ, ಪರಿಣಾಮಕಾರಿಯಾಗಿ ಹಾಗೂ ನಾಗರಿಕ ಕೇಂದ್ರಿತವಾಗಿ ರೂಪಿಸುತ್ತಿದ್ದೇವೆ. ಪರಿಸರ ಸ್ನೇಹಿ ಡೇಟಾ ಸೆಂಟರ್‌ಗಳ ಅಭಿವೃದ್ಧಿಗೂ ಆದ್ಯತೆ ನೀಡಲಾಗುವುದು ಎಂದರು.

ಕರ್ನಾಟಕದಲ್ಲಿ ರೂಪುಗೊಳ್ಳುವ ಡೀಪ್‌ಟೆಕ್ ತಂತ್ರಜ್ಞಾನಗಳು ರಾಜ್ಯಕ್ಕಷ್ಟೇ ಅಲ್ಲ, ದೇಶದ ಮತ್ತು ಜಗತ್ತಿನ ಸವಾಲುಗಳಿಗೆ ಪರಿಹಾರ ನೀಡುವಂತಾಗಬೇಕು. ನಾವೀನ್ಯತೆಯನ್ನು ಪ್ರಯೋಗಾಲಯಗಳಿಂದ ಸಮಾಜದ ಪರಿವರ್ತನೆಗೆ ಕೊಂಡೊಯ್ಯುವುದೇ ನಮ್ಮ ಸರ್ಕಾರದ ಸಂಕಲ್ಪ ಎಂದು ಒತ್ತಿ ಹೇಳಿದರು. 

Gnani AI ತಂಡವನ್ನು ಭೇಟಿ ಮಾಡಿದ ಪ್ರಿಯಾಂಕ್‌ ಖರ್ಗೆ

ಬೆಂಗಳೂರು ಮೂಲದ   ಎಐ ಕಂಪನಿಯಾಗಿರುವ Gnani AI ತಂಡವನ್ನು ಐಟಿ-ಬಿಟಿ ಹಾಗೂ ಗೃಹ ಸಚಿವ ಸಚಿವ ಪ್ರಿಯಾಂಕ್‌ ಖರ್ಗೆ ಭೇಟಿಯಾದರು. 

 ತಮ್ಮದೇ ಆದ ಸ್ಪೀಚ್ ಮತ್ತು ಲಾಂಗ್ವೇಜ್ ಮಾಡೆಲ್‌ಗಳನ್ನು ಅಭಿವೃದ್ಧಿಪಡಿಸುತ್ತಿರುವ ಈ ಸಂಸ್ಥೆ,  ರಾಜ್ಯ ಸರ್ಕಾರದ ಐಟಿಬಿಟಿ ಇಲಾಖೆಯ ‘ಎಲಿವೇಟ್’ ಕಾರ್ಯಕ್ರಮದ ಮೊದಲ ಆವೃತ್ತಿಯ ವಿಜೇತರಲ್ಲಿ ಒಂದಾಗಿದೆ.
ಕಂಪನಿಯು ಅಭಿವೃದ್ಧಿಪಡಿಸಿರುವ ಎಂಡ್ ಟು ಎಂಡ್ ಸಂಪೂರ್ಣ ಸ್ವದೇಶಿ ಧ್ವನಿ ಎಐ ತಂತ್ರಜ್ಞಾನವು ಆಡಳಿತಾತ್ಮಕ ಪ್ರಕ್ರಿಯೆಗಳನ್ನು ಸುಲಭಗೊಳಿಸಲು, ನಾಗರಿಕ ಸೇವಾ ವಿತರಣೆಯನ್ನು ಸುಧಾರಿಸಲು ಹಾಗೂ ಫಲಾನುಭವಿಗಳ ನಿರ್ವಹಣೆಗೆ ಹೇಗೆ ನೆರವಾಗುತ್ತದೆ ಎಂಬುದರ ಕುರಿತು ಚರ್ಚೆ ನಡೆಸಲಾಯಿತು.

ಸ್ಮಾರ್ಟ್ ಹಾಗೂ ನಾಗರಿಕ ಕೇಂದ್ರಿತ ಆಡಳಿತವನ್ನು ನಿರ್ಮಿಸಲು, ನಮ್ಮದೇ ನೆಲದ ಸ್ವದೇಶಿ ಎಐ  ಕಂಪನಿಗಳೊಂದಿಗೆ ಪಾಲುದಾರಿಕೆ ಹೊಂದಲು ಕರ್ನಾಟಕ ಸರ್ಕಾರ ಬದ್ಧವಾಗಿದೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು.

More articles

Latest article

Most read