ಕೈತಪ್ಪಿದ ಸಚಿವ ಸ್ಥಾನ : ವಿಷ ಕುಡಿದ ತನ್ವೀರ್‌ ಸೇಠ್‌ ಬೆಂಬಲಿಗ

ಮೈಸೂರು : ಆರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರೈ ಸಚಿವ ಸ್ಥಾನ ಸಿಗದ ಹಿನ್ನೆಲೆ ಶಾಸಕ ತನ್ವೀರ್‌ ಸೇಠ್‌ ಬೆಂಬಲಿಗನೋರ್ವ ವಿಷ ಕುಡಿದಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ಸಚಿವ ಸ್ಥಾನ ನೀಡದಿದ್ದನ್ನು ಖಂಡಿಸಿ ನಡೆಯುತ್ತಿದ್ದ ಪ್ರತಿಭಟನೆ ವೇಳೆ, ತಬ್ರೇಜ್‌ ಎಂಬ ವ್ಯಕ್ತಿ ಪ್ರ ಏಕಾಏಕಿ ವಿಷ ಕುಡಿದಿದ್ದಾನೆ. ಆತನನ್ನು ಇದೀಗ ಹೆಚ್ಚಿನ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಈ ಬಗ್ಗೆ ತನ್ವೀರ್‌ ಸೇಠ್‌ ಮಾತನಾಡಿ, ಕಾರ್ಯಕರ್ತರು ಇಂತಹ ಘಟನೆಗೆ ಅವಕಾಶ ನೀಡಬಾರದು. ಕಾರ್ಯಕರ್ತನ ಪ್ರಾಣ ಹೋದರೆ ಯಾರಿಗೂ ನಷ್ಟವಾಗಲ್ಲ, ನನಗೆ ಮಾತ್ರ ನಷ್ಟ ಆಗೋದು. ಇಂತಹ ವರ್ತನೆ ಮಾಡಬಾರದು. ಕಾರ್ಯಕರ್ತರೆ ನನ್ನಆಸ್ತಿ. ನನ್ನ ಮೇಲೆ ಹಲ್ಲೆ ನಡೆದಾಗಲೂ ಅವರೇ ನನಗೆ ಶಕ್ತಿ ಎಂದಿದ್ದಾರೆ.

ಪಕ್ಷ ವಿರೋಧಿ ಚಟುವಟಿಕೆ ಮಾಡಿದವರಿಗೆ ಸ್ಥಾನ : ಆಸೆ ನಿರಾಸೆ ಆಗಿದೆ. ರಾಹುಲ್ ಗಾಂಧಿಗೆ ಎಂಬ ಪದ ಬಳಕೆ ಮಾಡಿದ್ದಕ್ಕೆ ಕೆ.ಎನ್ ರಾಜಣ್ಣರನ್ನು ತಕ್ಷಣ ವಜಾ ಮಾಡಿದರು. ಮೈಸೂರು ಪ್ರಾಂತ್ಯಕ್ಕೆ ಸಿಗಬೇಕಾದ ಶಕ್ತಿ ಸಿಕ್ಕಿಲ್ಲ. ಇದು ಆಶಾದಾಯಕ ಪಟ್ಟಿಯಲ್ಲ. ಆದರೆ ಈ ಭಾಗಕ್ಕೆ ದೊಡ್ಡ ಅನ್ಯಾಯವಾಗಿದೆ. ನನ್ನ ಅಭಿಮಾನಿಗಳು ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧ. ನನಗೆ ಸಿಗಬೇಕಾದ ಗೌರವ ಸಿಗಲಿಲ್ಲ. ಬಹಿರಂಗವಾಗಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದವರಿಗೆ ಸಚಿವ ಸ್ಥಾನ ಸಿಕ್ಕಿದೆ ಎಂದು ತನ್ವೀರ್ ಸೇಠ್ ಅಸಮಾಧಾನ ಹೊರಹಾಕಿದ್ದಾರೆ ಎಂದರು. 

More articles

Latest article

Most read