ಬೆಂಗಳೂರು : ಶಿವಾಜಿನಗರದಲ್ಲಿ ಫುಟ್‌ಪಾತ್ ತೆರವು ವೇಳೆ ಜಿಬಿಎ ಸಿಬ್ಬಂದಿಗಳಿಗೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಪೊಲೀಸರು 10 ಮಂದಿಯನ್ನು ಬಂಧಿಸಿದ್ದಾರೆ.
ಬಂಧಿತರ ವಿವರ
1) ಕೊಟ್ರೇಶ್ (24), ತಂದೆ ಹೊನ್ನಪ್ಪ, ಸುಪ್ಪಿನಕೆರೆ
2) ಭರತ್ ಹೆಚ್ (24), ತಂದೆ: ಹನುಮಂತ ರಾವ್, ಸಿದ್ದಾಪುರ
3) ರಘು (28), ತಂದೆ: ಬಸವರಾಜ, ಸಿದ್ದಾಪುರ, ವೈಟ್‌ಫೀಲ್ಡ್
4) ರಂಜನ್ ಎನ್ (19), ತಂದೆ: ನಾಗರಾಜ, ಹೊಂಗಸಂದ್ರ
5) ಮುಜೈದ್ ಮೊಹಮ್ಮದ್ (39), ತಂದೆ: ಅಲ್ಲಾಬಕ್ಷ್, ಶಿವಾಜಿನಗರ
6) ಪಂಪನ್ (23), ತಂದೆ: ಶಂಕರ್, ಶಿವಾಜಿನಗರ
7) ರಂಗಸ್ವಾಮಿ (49), ತಂದೆ: ರಾಜೇಗೌಡ, ಜಕ್ಕೂರು ಲೇಔಟ್
8) ಕಿರಣ್ ಎಸ್ ನಾಯಕ, ತಂದೆ: ಶಂಕರ್ ಪಿ ನಾಯಕ, ಚಾಮರಾಜಪೇಟೆ
9) ಬಸರಾಜ (28), ತಂದೆ: ಭೀಮಣ್ಣ ಗೌಡ, ಸಿದ್ದಾಪುರ
10) ಪರಶುರಾಮ್ (27), ತಂದೆ: ತಲಜಪ್ಪ, ಸಿದ್ದಾಪುರ
ಮಂಗಳವಾರ ಬೆಳಗ್ಗೆ ಶಿವಾಜಿನಗರದಲ್ಲಿ ಜಿಬಿಎ ವತಿಯಿಂದ ನಡೆದ ಫುಟ್‌ಪಾತ್ ಒತ್ತುವರಿ ತೆರವು ಕಾರ್ಯಾಚರಣೆ ವೇಳೆ ಪಾಲಿಕೆ ಸಿಬ್ಬಂದಿ ಮತ್ತು ಪೊಲೀಸರೊಂದಿಗೆ ಸ್ಥಳೀಯ ಸಂಘಟನೆಗಳ ಸದಸ್ಯರು ಮಾತಿನ ಚಕಮಕಿ ನಡೆಸಿದ್ದರು. ತೆರವು ಕಾರ್ಯಾಚರಣೆಗೆ ಅಡ್ಡಿಪಡಿಸಿದ್ದ ಆರೋಪಿಗಳು, ಪಾಲಿಕೆಯ ಇಂಜಿನಿಯರ್‌ಗಳು ಮತ್ತು ಜೆಸಿಬಿ ಚಾಲಕನ ಮೇಲೆ ಹಲ್ಲೆಗೆ ಯತ್ನಿಸಿದ ಆರೋಪ ಸಹ ಕೇಳಿಬಂದಿದೆ.
ಉದ್ವಿಗ್ನ ಪರಿಸ್ಥಿತಿಯುಂಟಾದ ಬಳಿಕ ಕೆಲಕಾಲ ಕಾರ್ಯಾಚರಣೆಯನ್ನ ತಾತ್ಕಾಲಿಕವಾಗಿ ನಿಲ್ಲಿಸಲಾಗಿತ್ತು. ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿ, ಜೆಸಿಬಿ ಚಾಲಕನ ಮೇಲೆ ಪೆಪ್ಪರ್ ಸ್ಪ್ರೇ ಮಾಡಿರುವುದಾಗಿ ಕೆಲಸಕ್ಕೆ ಅಡ್ಡಿಪಡಿಸಲಾಯಿತು ಎಂದು ಆರೋಪಿಸಿ ಜಿಬಿಎ ಅಧಿಕಾರಿಗಳು ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ ಮಹೇಶ್ವರ ರಾವ್
ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಹಾಗೂ ಕೇಂದ್ರ ನಗರ ಪಾಲಿಕೆಯ ಆಯುಕ್ತರಾದ ಶ್ರೀ ಜಗದೀಶ್ ಬೌರಿಂಗ್ ಆಸ್ಪತ್ರೆಗೆ ಭೇಟಿ ನೀಡಿ ಶಿವಾಜಿನಗರ ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆಯಲ್ಲಿ ಹಲ್ಲೆಗೊಳಗಾದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಆರೋಗ್ಯ ವಿಚಾರಿಸಿದರು ಹಾಗೂ ಅವರಿಗೆ ಧೈರ್ಯ ತುಂಬಿದರು.
ಶಿವಾಜಿನಗರದಲ್ಲಿ ಹಲ್ಲೆಗೆ ಒಳಗಾದ ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು
1. ಮಾಧವರಾವ್ – AEE 2. ಸಾವಿತ್ರಿ – AEE 3. ರುಚಿತಾ – AE 4. ಸಿದ್ದಪ್ಪ -ಜೆಸಿಬಿ ಡ್ರೈವರ್ 5. ಸುನೀಲ್ -ಟ್ರಾಕ್ಟರ್ ಸಿಬ್ಬಂದಿ

