ನವದೆಹಲಿ : ನೀಟ್ ಯುಜಿ 2026ರ ಮರು ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳ ಓಎಂಆರ್ ಶೀಟ್‌ಗಳು ಮತ್ತು ರೆಕಾರ್ಡ್ ಮಾಡಿದ ಪ್ರತಿಕ್ರಿಯೆಗಳನ್ನು ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರ ಬಿಡುಗಡೆ ಮಾಡಿದೆ.
ಅಧಿಕೃತ ವೆಬ್‌ಸೈಟ್ neet.nta.nic.in ಗೆ ಅಭ್ಯರ್ಥಿಗಳು ಭೇಟಿ ನೀಡಿ ತಮ್ಮ ಓಎಂಆರ್ ಶೀಟ್‌ಗಳನ್ನು ವೀಕ್ಷಿಸಬಹುದು ಮತ್ತು ಸ್ಕ್ಯಾನ್ ಮಾಡಿದ ಪ್ರತಿಕ್ರಿಯೆಗಳನ್ನು ಪರಿಶೀಲಿಸಬಹುದು ಪ್ರಾಧಿಕಾರ ತಿಳಿಸಿದೆ.
ರೆಕಾರ್ಡ್ ಮಾಡಿದ ಪ್ರತಿಕ್ರಿಯೆ ಮತ್ತು ಅಭ್ಯರ್ಥಿ ಗುರುತಿಸಿದ ಉತ್ತರದಲ್ಲಿ ವ್ಯತ್ಯಾಸವಿದ್ದರೆ ಜುಲೈ 15, 2026 ರೊಳಗೆ ನಿಗದಿತ ಶುಲ್ಕ ಪಾವತಿಸುವ ಮೂಲಕ ಆನ್‌ಲೈನ್ನಲ್ಲಿ ಆಕ್ಷೇಪಣೆ ಸಲ್ಲಿಸಲು ಅವಕಾಶವಿದೆ.
ಓಎಂಆರ್ ಶೀಟ್‌ಗಳು ಮತ್ತು ರೆಕಾರ್ಡ್ ಪ್ರತಿಕ್ರಿಯೆಗಳ ಬಿಡುಗಡೆ: ಎಲ್ಲ ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ಗೆ ಲಾಗಿನ್ ಆಗುವ ಮೂಲಕ ತಮ್ಮ ಓಎಂಆರ್ ಶೀಟ್‌ಗಳು ಮತ್ತು ರೆಕಾರ್ಡ್ ಮಾಡಿದ ಪ್ರತಿಕ್ರಿಯೆಗಳನ್ನು ವೀಕ್ಷಿಸಬಹುದು ಎಂದು ಎನ್‌ಟಿಎ ಅಧಿಕಾರಿಗಳು ತಿಳಿಸಿದ್ದಾರೆ.
ಅಭ್ಯರ್ಥಿಗಳು ತಮ್ಮ ಅರ್ಜಿ ಸಂಖ್ಯೆ ಮತ್ತು ಪಾಸ್‌ವರ್ಡ್ ಬಳಸಿ ಲಾಗಿನ್ ಆಗಬೇಕು. ಆ ಬಳಿಕ, ಒಟಿಪಿ ಪರಿಶೀಲನೆ ಪೂರ್ಣಗೊಳಿಸಿದ ನಂತರ, ಓಎಂಆರ್ ಶೀಟ್ ಮತ್ತು ರೆಕಾರ್ಡ್ ಮಾಡಿದ ಪ್ರತಿಕ್ರಿಯೆಗಳನ್ನು ವೀಕ್ಷಿಸಬಹುದು. ಪರೀಕ್ಷೆಯ ಸಮಯದಲ್ಲಿ ಅಭ್ಯರ್ಥಿಗಳು ಗುರುತಿಸಿದ ಉತ್ತರಗಳನ್ನು ಸ್ಕ್ಯಾನರ್ ನಿಖರವಾಗಿ ದಾಖಲಿಸಿದೆಯೇ ಎಂದು ಇಲ್ಲಿ ಪರಿಶೀಲಿಸಬಹುದು.
ಆಕ್ಷೇಪಣೆ ಸಲ್ಲಿಸುವುದು ಹೇಗೆ:
ಸ್ಕ್ಯಾನರ್‌ನಿಂದ ದಾಖಲಿಸಲ್ಪಟ್ಟ ಉತ್ತರವು ತಮ್ಮ ನಿಜವಾದ ಉತ್ತರಕ್ಕಿಂತ ಭಿನ್ನವಾಗಿದೆ ಎಂದು ಅಭ್ಯರ್ಥಿಗೆ ಅನಿಸಿದರೆ ಅವರು ನಿರ್ದಿಷ್ಟ ಪ್ರಶ್ನೆಯನ್ನು ಆಯ್ಕೆ ಮಾಡಿ ಆಕ್ಷೇಪಣೆ ಸಲ್ಲಿಸಬಹುದು. ಇದಕ್ಕಾಗಿ ಪ್ರತಿ ಪ್ರಶ್ನೆಗೆ 200 ರೂ. ಶುಲ್ಕವನ್ನು ಆನ್ಲೈನ್ ಮೂಲಕ ಪಾವತಿಸಬೇಕಿದೆ. ಇನ್ನು ಅಭ್ಯರ್ಥಿಯ ಆಕ್ಷೇಪಣೆ ಸರಿಯಾಗಿದ್ದರೆ ಪ್ರತಿ ಪ್ರಶ್ನೆಗೆ ಪಾವತಿಸಿದ್ದ 200 ರೂ. ಶುಲ್ಕವನ್ನು ಮರುಪಾವತಿಸಲಾಗುತ್ತದೆ.
ಅಭ್ಯರ್ಥಿಗಳು ಆಕ್ಷೇಪಣೆ ಸಲ್ಲಿಸಿದ ನಂತರ ಆನ್‌ಲೈನ್ ರಶೀದಿ ಅಥವಾ ಸ್ವೀಕೃತಿಯನ್ನು ಡೌನ್‌ಲೋಡ್ ಮಾಡಿ ಉಳಿಸಿಕೊಳ್ಳಬೇಕು. ಜುಲೈ 15 ರೊಳಗೆ ಮಾತ್ರ ಆಕ್ಷೇಪಣೆ ಸಲ್ಲಿಕೆಗೆ ಅವಕಾಶ ಇ.
ನಿಗದಿತ ಗಡುವಿನ ನಂತರ ಬಂದ ಆಕ್ಷೇಪಣೆಗಳನ್ನು ಸ್ವೀಕರಿಸುವುದಿಲ್ಲ ಅಭ್ಯರ್ಥಿಗಳು ಕೊನೆಯ ನಿಮಿಷದವರೆಗೆ ಕಾಯುವ ಬದಲು ಆದಷ್ಟು ಬೇಗ ಆಕ್ಷೇಪಣೆ ಸಲ್ಲಿಸುವಂತೆ ಎನ್‌ಟಿಎ ಸೂಚಿಸಿದೆ.
ಈ ಪ್ರಕ್ರಿಯೆಯು ಕೇವಲ ಓಎಂಆರ್ ಶೀಟ್ ಮತ್ತು ದಾಖಲಾದ ಪ್ರತಿಕ್ರಿಯೆಗಳಿಗೆ ಮಾತ್ರ ಸೀಮಿತವಾಗಿದೆ. ಕೀ ಆನ್ಸರ್ ಆಕ್ಷೇಪಣೆ ಸಲ್ಲಿಕೆ ದಿನಾಂಕ ಮುಗಿದಿದೆ ಎಂದು ಪ್ರಾಧಿಕಾರ ಸ್ಪಷ್ಟಪಡಿಸಿದೆ.
ಲಾಗಿನ ಮತ್ತು ತಾಂತ್ರಿಕ ಸಮಸ್ಯೆಗಳು ಕಂಡು ಬಂದರೆ ಅಭ್ಯರ್ಥಿಗಳು ಎನ್‌ಟಿಎ ಸಹಾಯವಾಣಿ ಸಂಖ್ಯೆಗಳನ್ನು 011-40759000 ಅಥವಾ 011-69227700 ಸಂಪರ್ಕಿಸಬಹುದು. ಅಲ್ಲದೆ [email protected] ಗೆ ಈಮೇಲ್ ಮೂಲಕ ಸಹಾಯ ಪಡೆಯಬಹುದು.

