ಬೆಂಗಳೂರು : ರಾಜ್ಯದ ಅಭಿವೃದ್ಧಿ ಯೋಜನೆಗಳ ಜಾರಿ, ಪರಿಶೀಲನೆ ಹಾಗೂ ಅಹವಾಲುಗಳ ವಿಚಾರಣೆಗಾಗಿ ಹೊಸ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳನ್ನು ನೇಮಿಸಲಾಗಿದೆ.
ರಾಜ್ಯದ ಅಭಿವೃದ್ಧಿ ಕಾರ್ಯಕ್ರಮಗಳ ಪರಿಣಾಮಕಾರಿತ್ವವನ್ನು ಹೆಚ್ಚಿಸಲು ಹಾಗೂ ಸ್ಥಳೀಯ ಆಡಳಿತದ ಮೇಲ್ವಿಚಾರಣೆಯನ್ನು ಬಲಪಡಿಸಲು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು ಮತ್ತು ಪ್ರಧಾನ ಕಾರ್ಯದರ್ಶಿಗಳ ಮಟ್ಟದ ಅಧಿಕಾರಿಗಳನ್ನು ವಿವಿಧ ಜಿಲ್ಲೆಗಳಿಗೆ ಉಸ್ತುವಾರಿ ಕಾರ್ಯದರ್ಶಿಗಳನ್ನಾಗಿ ನೇಮಿಸಲಾಗಿದೆ.
ಈ ಅಧಿಕಾರಿಗಳು ತಾವು ನೇಮಕಗೊಂಡ ಜಿಲ್ಲೆಗಳಿಗೆ ಭೇಟಿ ನೀಡಿ, ಶಿಕ್ಷಣ, ಆರೋಗ್ಯ, ಕೃಷಿ, ಮೂಲಸೌಕರ್ಯ ಮತ್ತು ಸರ್ಕಾರಿ ಯೋಜನೆಗಳ ಪ್ರಗತಿಯನ್ನು ಪರಿಶೀಲಿಸಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕಾಗುತ್ತದೆ. ಈ ನೇಮಕಾತಿಯು ಆಡಳಿತದಲ್ಲಿ ಪಾರದರ್ಶಕತೆಯನ್ನು ತರಲು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಉತ್ತರದಾಯಿತ್ವವನ್ನು ಹೆಚ್ಚಿಸಲು ಸರ್ಕಾರ ಕೈಗೊಂಡಿರುವ ಪ್ರಮುಖ ಹೆಜ್ಜೆಯಾಗಿದೆ.
ಜಿಲ್ಲಾವಾರು ಉಸ್ತುವಾರಿ ಕಾರ್ಯದರ್ಶಿಗಳ ಪಟ್ಟಿ
ಬೆಂಗಳೂರು ನಗರ: ರಿತ್ತಿಕ ರಂಜನ ಪಾಂಡೆ
ಬೆಂಗಳೂರು ಗ್ರಾಮಾಂತರ: ಡಾ.ಪಿ.ಸಿ. ಜಾಫರ್
ಬೆಂಗಳೂರು ದಕ್ಷಿಣ: ಜಿ. ಮಂಜುನಾಥ
ಚಿಕ್ಕಬಳ್ಳಾಪುರ: ಡಾ.ಎನ್ ಮಂಜುಳ
ಚಿತ್ರದುರ್ಗ: ಅಮ್ಲನ್ ಆದಿತ್ಯ ಬಿಸ್ವಾಸ್
ದಾವಣಗೆರೆ: ಡಾ.ಶಮ್ಲಾ ಇಕ್ಬಾಲ್
ಕೋಲಾರ: ಸಲ್ಮಾ ಕೆ. ಫಾಹಿಮ್
ಶಿವಮೊಗ್ಗ: ಬಿ.ಬಿ. ಕಾವೇರಿ
ತುಮಕೂರು: ದೀಪಾ ಚೋಳನ್
ಬೆಳಗಾವಿ: ಎಸ್. ಬಿ. ಶೆಟ್ಟಣ್ಣವರ್
ಉತ್ತರ ಕನ್ನಡ: ಸುಷಮಾ ಗೋಡಬೋಲೆ
ಹಾವೇರಿ: ಡಾ.ಆರ್. ವಿಶಾಲ್
ಬಾಗಲಕೋಟೆ: ಮೊಹಮ್ಮದ್ ಮೊಹಸಿನ್
ವಿಜಯಪುರ: ಮುಷ್ರ್ ಜಿ ಚೌಧರಿ
ಧಾರವಾಡ: ತುಳಸಿ ಮದ್ದಿನೇನಿ
ಗದಗ: ಡಾ.ಎಂ.ವಿ ವೆಂಕಟೇಶ್
ಬಳ್ಳಾರಿ: ಡಾ.ಕೆ.ವಿ. ತ್ರಿಲೋಕಚಂದ್ರ
ಬೀದರ್: ಡಾ. ರಣದೀಪ್
ಕಲಬುರಗಿ: ಸುಬೋಧ್ ಯಾದವ್
ಕೊಪ್ಪಳ: ಕೆ.ಪಿ. ಮೋಹನರಾಜ್
ರಾಯಚೂರು: ಎಸ್. ಎಸ್. ನಕುಲ್
ಯಾದಗಿರಿ: ಮನೋಜ್ ಜೈನ್
ವಿಜಯನಗರ: ಡಾ.ಕೆ ಜಿ ಜಗದೀಶ
ಮೈಸೂರು: ಡಾ.ಎಸ್. ಸೆಲ್ವಕುಮಾರ್
ಮಂಡ್ಯ: ಮನೋಜ್ ಕುಮಾರ್ ಮೀನಾ
ಕೊಡಗು: ಡಾ.ಎನ್.ವಿ. ಪ್ರಸಾದ್
ಚಾಮರಾಜನಗರ: ಆರ್ ವಿನೋತ್ ಪ್ರಿಯ
ಹಾಸನ: ನವೀನ್ ರಾಜ್ ಸಿಂಗ್
ಚಿಕ್ಕಮಗಳೂರು : ಆರ್. ಗಿರೀಶ್
ದಕ್ಷಿಣ ಕನ್ನಡ: ಡಾ. ವಿ ರಾಮ್ ಪ್ರಸಾತ್ ಮನೋಹರ್
ಉಡುಪಿ: ರೋಹಿಣಿ ಸಿಂಧೂರಿ

