ಮತ್ತೆ ಇರಾನ್‌ – ಅಮೆರಿಕ ಮಧ್ಯೆ ಮತ್ತೆ ಯುದ್ಧ? ಶಾಂತಿ ಒಪ್ಪಂದ ಮಾಡಿಕೊಳ್ಳುವಂತೆ ಅಮೆರಿಕ ಎಚ್ಚರಿಕೆ

ಅಮೆರಿಕ : ಅಮೆರಿಕ-ಇರಾನ್ ಯುದ್ಧ ಮತ್ತೆ ಆರಂಭವಾಗುತ್ತಿದೆಯೇ? ವಾಷಿಂಗ್ಟನ್ ಮತ್ತು ಟೆಹ್ರಾನ್ ನಡುವೆ ತಿಳುವಳಿಕೆ ಒಪ್ಪಂದವಿದ್ದರೂ, ಇರಾನ್‌ನಿಂದ ಎಚ್ಚರಿಕೆಗಳು ಹೊರಹೊಮ್ಮಿದ್ದು, ಯುದ್ಧ ಮತ್ತೆ ಆರಂಭವಾಗುವ ಸಾಧ್ಯತೆಯ ಬಗ್ಗೆ ಸುಳಿವು ನೀಡಿವೆ. 
ಇರಾನ್ ನಮ್ಮೊಂದಿಗೆ ಶಾಂತಿ ಒಪ್ಪಂದ ಮಾಡಿಕೊಳ್ಳಬೇಕು, ಇಲ್ಲದಿದ್ದರೆ ನಾವು ಅದರ ಕಥೆ ಮುಗಿಸುತ್ತೇವೆ” ಎಂದು ನೇರವಾಗಿಯೇ ಬೆದರಿಕೆ ಹಾಕಿದ್ದಾರೆ. ಇರಾನ್‌ನ ಪ್ರಮುಖ ತೈಲ ಮತ್ತು ವಿದ್ಯುತ್ ಮೂಲಸೌಕರ್ಯಗಳನ್ನು ಕೆಲವೇ ಗಂಟೆಗಳಲ್ಲಿ ಧೂಳೀಪಟ ಮಾಡುವ ಶಕ್ತಿ ಅಮೆರಿಕಕ್ಕಿದೆ ಎಂದು ಟ್ರಂಪ್ ಎಚ್ಚರಿಸಿದ್ದಾರೆ.

ಇರಾನ್‌ನ 9.1 ಕೋಟಿ ಜನರ ಮೇಲೆ ದಾಳಿ ನಡೆಸಲು ನನಗೆ ಇಷ್ಟವಿಲ್ಲ. ಆದರೆ ಅವರು ಒಪ್ಪದಿದ್ದರೆ, ಕೇವಲ ಒಂದು ಗಂಟೆಯಲ್ಲಿ ಇರಾನ್‌ನ ಎಲ್ಲಾ ಪ್ರಮುಖ ಸೇತುವೆಗಳನ್ನು ನಾವು ಧ್ವಂಸ ಮಾಡಬಲ್ಲೆವು. ಅವರ ಇಂಧನ ಪೂರೈಕೆ, ಆಧುನಿಕ ತೈಲ ಸ್ಥಾವರಗಳು ಮತ್ತು ಇಡೀ ವಿದ್ಯುತ್ ವ್ಯವಸ್ಥೆಯನ್ನು ಮಧ್ಯಾಹ್ನದೊಳಗಾಗಿ ನಾವು ಉಡೀಸ್ ಮಾಡಬಹುದು. ಈ ಶಕ್ತಿ ನಮಗಿದೆ ಎಂಬುದು ಇರಾನ್‌ಗೂ ಚೆನ್ನಾಗಿ ಗೊತ್ತು ಎಂದಿದ್ದಾರೆ.

ಈ ಮಧ್ಯೆ, ಮಂಗಳವಾರ, ಕದನ ವಿರಾಮ ಜಾರಿಯಲ್ಲಿದ್ದರೂ, ಹಾರ್ಮುಜ್ ಜಲಸಂಧಿಯ ಬಳಿ ಒಮಾನ್ ಕರಾವಳಿಯಲ್ಲಿ ತೈಲ ಟ್ಯಾಂಕರ್ ಮೇಲೆ “ಅಜ್ಞಾತ ಉತ್ಕ್ಷೇಪಕ”ವೊಂದು ಅಪ್ಪಳಿಸಿ ಬೆಂಕಿ ಹಚ್ಚಿದೆ ಎಂದು ವರದಿಯಾಗಿದೆ.

ಇರಾನ್‌ನಲ್ಲಿ ಕೆಲಸ ಮುಗಿಸಿ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ ಕೆಲವೇ ಗಂಟೆಗಳ ನಂತರ ಈ ಘಟನೆ ನಡೆದಿದೆ.  ನಾವು ಒಂದಲ್ಲ ಒಂದು ರೀತಿಯಲ್ಲಿ ಗೆಲ್ಲುತ್ತೇವೆ. ನಾವು ಒಪ್ಪಂದ ಮಾಡಿಕೊಳ್ಳುತ್ತೇವೆ ಅಥವಾ ನಾವು ಕೆಲಸವನ್ನು ಮುಗಿಸುತ್ತೇವೆ – ಮತ್ತು ಕೆಲಸವನ್ನು ಮುಗಿಸುವುದು ಕಷ್ಟವಾಗುವುದಿಲ್ಲ ಎಂದು ಟ್ರಂಪ್ ಸೋಮವಾರ ಶ್ವೇತಭವನದಲ್ಲಿ ಹೇಳಿದರು. ಆದರೆ ಒಪ್ಪಂದ ಮಾಡಿಕೊಳ್ಳಲು ಅವರು ಬಯಸುತ್ತಾರೆ ಎಂದು ಹೇಳಿದರು.

ಹಾರ್ಮುಜ್ ಜಲಸಂಧಿಯಲ್ಲಿ ಟ್ಯಾಂಕರ್‌ಗೆ ಬೆಂಕಿ ಹಚ್ಚಿದ ಘಟನೆಯು ಮಾತುಕತೆಗಳಲ್ಲಿ ಹೊಸ ಒತ್ತಡವನ್ನು ಸೇರಿಸಿದೆ. ಶಾಶ್ವತ ಶಾಂತಿಯ ಭರವಸೆಯನ್ನು ಮಂದಗೊಳಿಸಿದೆ. ಈ ವರ್ಷದ ಫೆಬ್ರವರಿಯಲ್ಲಿ ಅಮೆರಿಕ-ಇಸ್ರೇಲಿ ಜಂಟಿ ಅನಿರೀಕ್ಷಿತ ದಾಳಿಯಲ್ಲಿ ಸಾವನ್ನಪ್ಪಿದ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರಿಗೆ ಇರಾನ್ ಗೌರವ ಸಲ್ಲಿಸುತ್ತಿರುವಾಗ ಈ ಹೊಸ ಉದ್ವಿಗ್ನತೆ ಉಂಟಾಗಿದ್ದು, ಯುದ್ಧಕ್ಕೆ ನಾಂದಿ ಹಾಡಿದೆ.

More articles

Latest article

Most read