ನವದೆಹಲಿ : ಜಾಮೀನು ಆದೇಶದಲ್ಲಿ ಮಾರ್ಪಾಡು ಕೋರಿ ನಟ ದರ್ಶನ್ ಸಲ್ಲಿಸಿದ್ದ ಅರ್ಜಿ ಸುಪ್ರೀಂಕೋರ್ಟ್ ರಿಜಿಸ್ಟರ್ರಿಂದ ಅರ್ಜಿ ತಿರಸ್ಕಾರವಾಗಿದೆ.
ಒಂದು ವರ್ಷ ಜಾಮೀನು ಅರ್ಜಿ ಸಲ್ಲಿಸದಂತೆ ಸುಪ್ರೀಂಕೋರ್ಟ್ ಹೇಳಿತ್ತು, ಆ ಅರ್ಜಿಯನ್ನು ಮಾರ್ಪಾಡು ಮಾಡುವಂತೆ ದರ್ಶನ್ ಮೇಲ್ಮನವಿ ಸಲ್ಲಿಸಿದ್ದರು.
ತುರ್ತು ಪರಿಸ್ಥಿತಿಗಳಲ್ಲಿ ಜಾಮೀನು ಕೋರಲು ಅವಕಾಶ ನೀಡುವಂತೆ ಕೊಲೆ ಆರೋಪಿ ದರ್ಶನ್ ಮನವಿ ಮಾಡಿದ್ದರು. ಅಲ್ಲದೆ ತಮ್ಮ ಜಾಮೀನಿನ ಕುರಿತಾಗಿ ಸುಪ್ರೀಂಕೋರ್ಟ್ ನೀಡಿರುವ ಆದೇಶಕ್ಕೆ ತಿದ್ದುಪಡಿಗೆ ಸಹ ದರ್ಶನ್ ಆಗ್ರಹಿಸಿದ್ದರು.
ಸುಪ್ರೀಂಕೋರ್ಟ್ನಲ್ಲಿ ಅರ್ಜಿ ವಿಚಾರಣೆಗೆ ಬರುವುದಕ್ಕೆ ಮುಂಚೆಯೇ ಅರ್ಜಿ ತಿರಸ್ಕೃತಗೊಂಡಿದೆ. ‘ಈ ಅರ್ಜಿ ವಿಚಾರಣೆಗೆ ಅರ್ಹವಲ್ಲ’ ಎಂದು ಕಾರಣ ನೀಡಿ ಸುಪ್ರೀಂಕೋರ್ಟ್ ರಿಜಿಸ್ಟಾರ್ ಅವರು ಅರ್ಜಿಯನ್ನು ತಿರಸ್ಕಾರ ಮಾಡಿದ್ದಾರೆ. ಈ ಅರ್ಜಿಯನ್ನು ವಿಚಾರಣೆಗೆ ಪಟ್ಟಿ ಮಾಡಲು ಸಾಧ್ಯವಿಲ್ಲ ಎಂದು ದರ್ಶನ್ ಪರ ವಕೀಲರಿಗೆ ಸುಪ್ರೀಕೋರ್ಟ್ ರಿಜಿಸ್ಟಾರ್ ಸೂಚಿಸಿದ್ದಾರೆ.

