ಕಲಬುರಗಿಯಲ್ಲಿ ಜವಳಿ ಪಾರ್ಕ್‌ ಅಭಿವೃದ್ಧಿಗೆ ಸಂಪುಟ ಸಭೆ ನಿರ್ಧಾರ

ಬೆಂಗಳೂರು : ಮುಖ್ಯಮಂತ್ರಿಗಳ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಕಲಬುರಗಿ ಜಿಲ್ಲೆಯ ಮಹತ್ವಾಕಾಂಕ್ಷೆಯ ಜವಳಿ ಪಾರ್ಕ್ ನ್ನು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ವತಿಯಿಂದ ಅಭಿವೃದ್ಧಿಪಡಿಸಲು ಕ್ರಮ ವಹಿಸುವಂತೆ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

1000 ಎಕರೆ ಪ್ರದೇಶದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಈ ಜವಳಿ ಪಾರ್ಕ್ ಸುಮಾರು 1,700 ಕೋಟಿ ರೂ. ಯೋಜನಾ ಮೊತ್ತದೊಂದಿಗೆ ಅಭಿವೃದ್ಧಿಪಡಿಸಲಾಗುವುದು. 320 ಕೋಟಿ ರೂ. ವೆಚ್ಚದಲ್ಲಿ ಮೊದಲ ಹಂತದ ಅಭಿವೃದ್ಧಿ ಕಾರ್ಯಗಳನ್ನು KIADB ಕೈಗೆತ್ತಿಕೊಳ್ಳಲಿದೆ.

ಕಲಬುರಗಿಯ ನಂದಿಸಿನ್ನೂರು, ಕಿರಣಗಿ ಗ್ರಾಮಗಳಲ್ಲಿ 1000 ಎಕರೆಯನ್ನು ಕೈಮಗ್ಗ ಮತ್ತು ಜವಳಿ ಇಲಾಖೆಯಡಿಯಲ್ಲಿ ಅಭಿವೃದ್ದಿಪಡಿಸಲಾಗುತ್ತದೆ. ಪಿಎಂ ಮಿತ್ರ ಪಾರ್ಕ್ ಯೋಜನೆಯಡಿಯಲ್ಲಿನ ₹500 ಕೋಟಿ ಬಂಡವಾಳ ಸಹಾಯಧನ ಬಳಸಿಕೊಳ್ಳುವುದರೊಂದಿಗೆ KIADB ಅನುದಾನದೊಂದಿಗೆ ಜವಳಿ ಪಾರ್ಕಿನ ಅಭಿವೃದ್ಧಿಗೆ ವೇಗ ನೀಡಲಾಗುವುದು.

ಈ ಜವಳಿ ಪಾರ್ಕ್ ನಿಂದ ಅಂದಾಜು 1 ಲಕ್ಷ ಜನರಿಗೆ ನೇರ ಉದ್ಯೋಗ ಮತ್ತು ಅಂದಾಜು 2 ಲಕ್ಷ ಪರೋಕ್ಷ ಉದ್ಯೋಗಾವಕಾಶಗಳು ಸೃಷ್ಟಿ ನಿರೀಕ್ಷೆ ಇದೆ. ಈಗಾಗಲೇ ಹಲವು ಜವಳಿ ಉದ್ಯಮಗಳು ಕಲಬುರಗಿ ಜವಳಿ ಪಾರ್ಕಿನಲ್ಲಿ ಬಂಡವಾಳ ಹೂಡಿಕೆಗೆ ಮುಂದೆ ಬಂದಿರುವುದು ಈ ಯೋಜನೆ ಯಶಸ್ಸಿನತ್ತ ಮುನ್ನಡೆಯುವ ಸಕಾರಾತ್ಮಕ ಸೂಚನೆಯಾಗಿದೆ

More articles

Latest article

Most read