ಸಚಿವ ಎಂ.ಬಿ. ಪಾಟೀಲ್ ಕ್ಷಮೆ ಕೇಳಬೇಕು, ಇಲ್ಲದಿದ್ದರೆ ಮಾನನಷ್ಟ ಮೊಕದ್ದಮೆ : ನಿಖಿಲ್ ಕುಮಾರಸ್ವಾಮಿ ಎಚ್ಚರಿಕೆ

ಬೆಂಗಳೂರು :

ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಅವರು ತಮ್ಮ ಹೇಳಿಕೆಗೆ ಕ್ಷಮೆ ಕೇಳಬೇಕು, ಇಲ್ಲದಿದ್ದರೆ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ” ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಬಾಯಿ ಇದೆ ಎಂದು ಏನು ಬೇಕಾದರೂ ಮಾತನಾಡುವುದಲ್ಲ. ಎಂ.ಬಿ. ಪಾಟೀಲ್ ಅವರನ್ನು ವಿದ್ಯಾವಂತರು ಅಂದುಕೊಂಡಿದ್ದೆ. ಯಾವ ಆಧಾರದ ಮೇಲೆ ಮಾತನಾಡಿದ್ದರೋ ಗೊತ್ತಿಲ್ಲ” ಎಂದು ಕುಟುಕಿದರು.

“ಎಂ.ಬಿ. ಪಾಟೀಲ್ ಅವರು ನಮ್ಮ ಕುಟುಂಬದ 100 ಎಕರೆ ಭೂಮಿ ಇದೆ ಎಂದು ಸಾಬೀತು ಮಾಡಿದರೆ ಅವರಿಗೆ ನಾನು ತಲೆಬಾಗುತ್ತೇನೆ. ಇಲ್ಲದಿದ್ದರೆ ಅವರು ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು” ಎಂದು ನಿಖಿಲ್ ಒತ್ತಾಯಿಸಿದರು.

ಪೋಸ್ಟರ್ ರಾಜಕಾರಣಕ್ಕೆ ತೀಕ್ಷ್ಣ ತಿರುಗೇಟು

ಪೋಸ್ಟರ್ ಅಭಿಯಾನದ ಕುರಿತು ಮಾತನಾಡಿ, “ಕೆಲವು ಪುಂಡಪೋಕರಿ ಚೇಲಾಗಳು ಈ ಕೆಲಸ ಮಾಡಿದ್ದಾರೆ. ಅವರಿಗೆಲ್ಲ ಉತ್ತರಿಸಲು ಆಗಲ್ಲ” ಎಂದು ನಿಖಿಲ್ ಕುಮಾರಸ್ವಾಮಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.

“ಈಗಿನ ‘ಸ್ಟೇಟಸ್ ಮುಖ್ಯಮಂತ್ರಿ’ಗಳು ಕೆಲವು ಚೇಲಾಗಳನ್ನು ನಿಖಿಲ್ ಕುಮಾರಸ್ವಾಮಿ ಮತ್ತು ಹೆಚ್.ಡಿ. ಕುಮಾರಸ್ವಾಮಿ ಅವರನ್ನು ಬೈಯಲು ಬಿಟ್ಟಿದ್ದಾರೆ. ಅತೀ ಹೆಚ್ಚು ಬೈದವರಿಗೆ ಮಂತ್ರಿಸ್ಥಾನ ನೀಡಲಾಗುವುದು ಎಂದು ಹೇಳಿದ್ದಾರೆ. ಸಚಿವ ಸಂಪುಟ ವಿಸ್ತರಣೆ ಆದ್ರೆ ಇವರೆಲ್ಲ ಮನೆ ಸೇರಿಕೊಳ್ಳುತ್ತಾರೆ” ಎಂದು ಲೇವಡಿ ಮಾಡಿದರು.

ಶಾಸಕ ಬಾಲಕೃಷ್ಣಗೆ ನಿಖಿಲ್ ಕುಮಾರಸ್ವಾಮಿ ತಿರುಗೇಟು

ನಿಖಿಲ್ ಲೇಔಟ್ ಮಾಡ್ತೀನಿ” ಎಂಬ ಶಾಸಕ ಹೆಚ್.ಸಿ. ಬಾಲಕೃಷ್ಣ ಹೇಳಿಕೆಗೆ ಪ್ರತಿಕ್ರಿಯಿಸಿದ ನಿಖಿಲ್, ರೈತರಿಗೆ ಬೇಕಿರುವುದು ನೆಮ್ಮದಿಯ ಜೀವನ, ಸ್ವಾಭಿಮಾನದ ಬದುಕು. ಶಾಸಕರಿಗೆ ಲೇಔಟ್ ಬೇಕಾಗಿದೆ ಎಂದು ತಿರುಗೇಟು ನೀಡಿದರು.

ಟೌನ್ ಶಿಪ್ ಚರ್ಚೆ ರೈತರ ಸಮ್ಮುಖ ಆಗಲಿ

ವಿಧಾನಸೌಧದಲ್ಲಿ ಚರ್ಚೆಗೆ ಸಂಬಂಧಿಸಿದಂತೆ ಮಾತನಾಡಿ, ಮೊನ್ನೆ ಗೌರವಾನ್ವಿತ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ಅವರನ್ನು ಡಿಸಿಎಂ ಡಿ.ಕೆ. ಶಿವಕುಮಾರ್ ಭೇಟಿ ಮಾಡಿ, ‘ನಾನೂ ಟೌನ್‌ಶಿಪ್ ಮಾಡುತ್ತಿದ್ದೇನೆ’ ಎಂದು ಹೇಳಿದ್ದಾಗಿ ಸುಳ್ಳು ವದಂತಿ ಹರಡಿಸಿದ್ದಾರೆ. ಒಂದು ವೇಳೆ ‘ಅಲ್ಲಿ ಫಲವತ್ತಾದ ಭೂಮಿ ಇದೆ, ರೈತರಿಗೆ ಅನ್ಯಾಯ ಮಾಡಿ, 10 ಲಕ್ಷಕ್ಕೂ ಅಧಿಕ ಗಿಡಮರಗಳನ್ನು ಕಡಿದು ಟೌನ್‌ಶಿಪ್ ಮಾಡುತ್ತಿದ್ದೇವೆ’ ಎಂದು ಹೇಳಿದ್ದರೆ ಪ್ರಧಾನಮಂತ್ರಿಗಳು ಒಪ್ಪುತ್ತಿದ್ದರೇ?ಎಂದು ಪ್ರಶ್ನಿಸಿದರು.

ವಿಧಾನಸೌಧದ ಎಸಿ ರೂಮ್‌ನಲ್ಲಿ ಚರ್ಚೆ ಬೇಡ. ರೈತರಿಗೆ ಅನ್ಯಾಯವಾಗುತ್ತಿರುವ ಪ್ರದೇಶದಲ್ಲೇ, ರೈತರ ಮಧ್ಯೆ ಪರ-ವಿರೋಧ ಚರ್ಚೆಯಾಗಲಿ” ಎಂದು ಆಗ್ರಹಿಸಿದರು.

ಸತ್ಯಾಸತ್ಯತೆ ಹೊರಬರಲಿ

ಕುಮಾರಸ್ವಾಮಿ ಅವರಿಗೆ ಯಾವುದೇ ತಂಡ ಇಲ್ಲ. ತಂಡ ಇರುವುದು ಮುಖ್ಯಮಂತ್ರಿಗಳಿಗೆ. ನಮ್ಮ ಕಾರ್ಯಕರ್ತರು ಯಾರೂ ಬರುವುದಿಲ್ಲ. ನೀವೇ ನಿಮ್ಮ ಕಾರ್ಯಕರ್ತರು, ನಿಮ್ಮ ಚೇಲಾಗಳನ್ನು ಕರೆದುಕೊಂಡು ಬಂದು ರೈತರ ಮಧ್ಯೆ ಚರ್ಚೆ ಮಾಡಿ. ಸತ್ಯಾಸತ್ಯತೆ ಹೊರಬರಲಿ” ಎಂದು ಸವಾಲು ಹಾಕಿದರು.

ಬದನೆಕಾಯಿ ಬೆಳೆದು ಕಾಲೇಜು ಕಟ್ಟಿದ್ದಾರಾ?

ಪೋಸ್ಟರ್ ಅಭಿಯಾನದ ಕುರಿತು ಮತ್ತೆ ಮಾತನಾಡಿ, “ಇವರೇನು ಬದನೆಕಾಯಿ ಬೆಳೆದು ಸ್ಕೂಲ್, ಕಾಲೇಜು, ಕಮರ್ಷಿಯಲ್ ಬಿಲ್ಡಿಂಗ್ ಕಟ್ಟಿದ್ದಾರೆಯೇ? ನಮಗೂ ಪೋಸ್ಟರ್ ಅಭಿಯಾನ ಮಾಡಲು ಬರುತ್ತದೆ. ಆದರೆ ಇವರಂತೆ ಕೀಳು ಮಟ್ಟದ ರಾಜಕಾರಣ ಮಾಡಬಾರದು ಎಂದು ಸುಮ್ಮನಿದ್ದೇವೆ” ಎಂದು ನಿಖಿಲ್ ಕುಮಾರಸ್ವಾಮಿ ಎಚ್ಚರಿಕೆ ನೀಡಿದರು.

More articles

Latest article

Most read