ವಿಧಾನಪರಿಷತ್‌ ಚುನಾವಣೆ : ಅಡ್ಡ ಮತದಾನ ಮಾಡಿದ್ರ ಜಿ.ಟಿ.ದೇವೇಗೌಡ?

ಬೆಂಗಳೂರು : ರಾಜ್ಯದ 7 ವಿಧಾನಪರಿಷತ್‌ ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. ಇದುವರೆಗೂ ಶೇ.34ರಷ್ಟು ಮತದಾನವಾಗಿದ್ದು, 4 ಗಂಟೆಯವರೆಗೆ ಮತದಾನವಾಗಲಿದೆ. ಸಂಜೆ 6 ಗಂಟೆಗೆ ಫಲಿತಾಂಶ ಪ್ರಕಟವಾಗಲಿದೆ.

ಶಾಸಕ ಜಿ.ಟಿ.ದೇವೇಗೌಡ ಮೊದಲ ಮತ ಚಲಾಯಿಸುವ ಮೂಲಕ ಅಡ್ಡ ಮತದಾನ ಮಾಡಿದ್ದಾರೆ ಎನ್ನಲಾಗುತ್ತಿದ್ದು,  ಆತ್ಮಸಾಕ್ಷಿ ಪ್ರಕಾರ ಮತ ಹಾಕಿದ್ದೇನೆ ಎಂದು ಜಿಟಿಡಿ ಹೇಳಿದ್ದಾರೆ.  

ಕಾಂಗ್ರೆಸ್ 5 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದರೆ, ಬಿಜೆಪಿ 2 ಹಾಗೂ ಜೆಡಿಎಸ್ ನಿಂದ ಓರ್ವ  1 ಅಭ್ಯರ್ಥಿ  ಸ್ಪರ್ಧಿಸಿದ್ದಾರೆ. ಕಾಂಗ್ರೆಸ್​​ನ 4 ಹಾಗೂ ಬಿಜೆಪಿಯ 2 ಅಭ್ಯರ್ಥಿಗಳು ನಿರಾಯಾಸವಾಗಿ ಗೆಲುವು ಸಾಧಿಸಲಿದ್ದಾರೆ. ಏಳನೇ ಸ್ಥಾನಕ್ಕೆ ಜಟಾಪಟಿ ಜೋರಾಗಿದೆ.

ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕಾರ್ತಿಕ್ ಹಾಗೂ ಜೆಡಿಎಸ್ ಅಭ್ಯರ್ಥಿ ಗೋವಿಂದರಾಜು ನಡುವೆ ತುರುಸಿನ ಸ್ಪರ್ಧೆ ಏರ್ಪಟ್ಟಿದೆ. ಕಾಂಗ್ರೆಸ್ ಅಭ್ಯರ್ಥಿಗಳಾಗಿ ತಿಪ್ಪಣ್ಣಪ್ಪ ಕಮಕನೂರು, ಪಿ.ವಿ.ಮೋಹನ್, ಶಿವಣ್ಣ ಬಿ.ಎಸ್., ಬಿ.ಕೆ.ಹರಿಪ್ರಸಾದ್, ವಿನಯ್ ಕಾರ್ತಿಕ್ ಕಣಕ್ಕಿಳಿದಿದ್ದಾರೆ. ಬಿಜೆಪಿಯಿಂದ ರಘು ಆರ್. ಹಾಗೂ ಲಿಂಗರಾಜ ಪಾಟೀಲ್ ಸ್ಪರ್ಧಿಸಿದ್ದಾರೆ. ಜೆಡಿಎಸ್ ಪಕ್ಷ ಗೋವಿಂದ ರಾಜು ಅವರನ್ನು ಕಣಕ್ಕಿಳಿಸಿದೆ.

ಪಕ್ಷಗಳ ಶಾಸಕರ ಬಲಾಬಲ: ಅಭ್ಯರ್ಥಿಯ ಗೆಲುವಿಗೆ 28 ಕೋಟಾ ನಿಗದಿಯಾಗಿದೆ. ಕಾಂಗ್ರೆಸ್ ಶಾಸಕರ ಸಂಖ್ಯಾಬಲ 135 ಇದೆ. ಬಿಜೆಪಿ ಸಂಖ್ಯಾಬಲ 62 ಹೊಂದಿದ್ದರೆ, ಜೆಡಿಎಸ್ ಪಕ್ಷ 18 ಶಾಸಕರ ಬಲ ಹೊಂದಿದೆ. ಉಳಿದಂತೆ 3 ಪಕ್ಷೇತರ ಅಭ್ಯರ್ಥಿಗಳು, 3 ಬಿಜೆಪಿ ಉಚ್ಚಾಟಿತ ಶಾಸಕರು ಹಾಗೂ ಸ್ವತಂತ್ರ ಪಕ್ಷದ ಶಾಸಕ ಜನಾರ್ದನ ರೆಡ್ಡಿ ಅವರ ಮತಗಳು ನಿರ್ಣಾಯಕವಾಗಿವೆ.
ಮೂವರು ಪಕ್ಷೇತರ ಶಾಸಕರು ಹಾಗೂ ಉಚ್ಚಾಟಿತ ಇಬ್ಬರು ಬಿಜೆಪಿ ಶಾಸಕರು ಕಾಂಗ್ರೆಸ್ ಅಭ್ಯರ್ಥಿಗಳನ್ನು ಬೆಂಬಲಿಸುವ ಸಾಧ್ಯತೆ ಹೆಚ್ಚಿದ್ದು, ಇತ್ತ ಬಸನಗೌಡ ಪಾಟೀಲ್ ಯತ್ನಾಳ್ ಬಿಜೆಪಿಗೆ ಮತ ಹಾಕುವುದಾಗಿ ಘೋಷಿಸಿದ್ದಾರೆ. ಜನಾರ್ದನ ರೆಡ್ಡಿ ಕೂಡ ಬಿಜೆಪಿ ಜೊತೆ ವಿಲೀನವಾಗಿದ್ದು, ಎನ್​ಡಿಎ ಅಭ್ಯರ್ಥಿಗೆ ಮತ ಹಾಕಲಿದ್ದಾರೆ.

More articles

Latest article

Most read