ದಾವಣಗೆರೆ : ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಹಲವು ಪ್ರಶಸ್ತಿ ಗಳಿಸಿ, ಅಂತಾರಾಷ್ಟ್ರೀಯ ಮಟ್ಟದ ಬಾಡಿ ಬಿಲ್ಡಂಗ್ ಸ್ಪರ್ಧೆಗೆ ಸಿದ್ಧವಾಗುತ್ತಿದ್ದ 26 ವರ್ಷದ ಸುಶೀಲ್ ಕುಮಾರ್ ಎಂಬುವರು ದಾವಣಗೆರೆಯಲ್ಲಿ ಕುಸಿದುಬಿದ್ದು ಸಾವನ್ನಪ್ಪಿದ್ದಾರೆ.
ಕೆಟಿಜೆ ನಗರದ ನಿವಾಸಿ ಸುಶೀಲ್ ಕುಮಾರ್ ಜಿಮ್ ಮುಗಿಸಿ ಮನೆಗೆ ಬಂದ ಕೆಲ ಹೊತ್ತಲ್ಲೇ ದಿಢೀರ್ ಕುಸಿದು ಬಿದ್ದು ಕೊನೆಯುಸಿರೆಳೆದ ಆಘಾತಕಾರಿ ಘಟನೆ ದಾವಣಗೆರೆಯ ಕೆ.ಟಿ.ಜಂಬಣ್ಣನಗರದಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ನಿನ್ನೆ ರಾತ್ರಿ 8-30 ಈ ಘಟನೆ ನಡೆದಿದ್ದು, ಜಿಮ್ ಮುಗಿಸಿಕೊಂಡು ಸುಶೀಲ್ ಮನೆಗೆ ಬಂದಿದ್ದರು. ತಲೆ ಸುತ್ತುತ್ತಿರುವುದಾಗಿ ಹೇಳಿದ ಕೆಲವೇ ಕ್ಷಣದಲ್ಲೇ ಕುಸಿದು ಬಿದ್ದಿದ್ದಾರೆ. ಕೂಡಲೇ ಕುಟುಂಬಸ್ಥರು ಆಸ್ಪತ್ರೆಗೆ ಸಾಗಿಸಿದ್ದು, ದಾರಿ ಮಧ್ಯದಲ್ಲೇ ಸಾವನ್ನಪ್ಪಿದ್ದಾರೆ. ರಕ್ತದೊತ್ತಡ ಕಡಿಮೆಯಾಗಿ ಹೃದಯಾಘಾತದಿಂದ ಸಾವನ್ನಪ್ಪಿರಬಹುದು ಎಂದು ವೈದ್ಯರು ಹೇಳಿದ್ದಾರೆ.

