ಆರ್‌ಎಸ್‌ಎಸ್‌ ಆದಾಯದ ಮೂಲ ಯಾವುದು? : ಮೋಹನ್‌ ಭಾಗವತ್‌ಗೆ  ಪತ್ರ ಬರೆದ ಸಚಿವ ಪ್ರಿಯಾಂಕ್‌ ಖರ್ಗೆ

ಬೆಂಗಳೂರು :  ಆರ್‌ಎಸ್‌ಎಸ್‌ ನೂರು ವರ್ಷಗಳನ್ನು ಪೂರೈಸಿರುವ ಹಿನ್ನೆಲೆ ಆರ್‌ಎಸ್‌ಎಸ್‌ ನೋಂದಣಿ, ಚಟುವಟಿಕೆಗಳು ಮತ್ತು ಹಣಕಾಸಿನ ಮಾಹಿತಿಗಳನ್ನು ಬಹಿರಂಗಪಡಿಸುವಂತೆ ಕೋರಿ ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಅವರಿಗೆ ಸಚಿವ ಪ್ರಿಯಾಂಕ್‌ ಖರ್ಗೆ ಪತ್ರ ಬರೆದಿದ್ದಾರೆ. 

ಪತ್ರದಲ್ಲಿ ಹೀಗಿದೆ..
ಮಾನ್ಯ ಶ್ರೀ ಮೋಹನ್ ಭಾಗವತ್ ಅವರೇ, ನನ್ನ ಪತ್ರ ಶೀಘ್ರದಲ್ಲೇ ನಿಮಗೆ ತಲುಪಲಿದೆ. ಆದರೆ, ಈ ವಿಷಯದ ಕುರಿತು ಮೊದಲು ನಿಮ್ಮ ಗಮನಕ್ಕೆ ತರುವುದು ಮುಖ್ಯ ಎಂದು ನಾನು ಭಾವಿಸಿದ್ದೇನೆ.

ಮೊದಲನೆಯದಾಗಿ, 100 ವರ್ಷಗಳನ್ನು ಪೂರೈಸಿದ್ದಕ್ಕಾಗಿ ಆರ್‌ಎಸ್‌ಎಸ್‌ಗೆ ಅಭಿನಂದನೆಗಳು. 60,000ಕ್ಕೂ ಹೆಚ್ಚು ಶಾಖೆಗಳು ಮತ್ತು ಕೋಟ್ಯಂತರ ಸ್ವಯಂಸೇವಕರನ್ನು ಹೊಂದಿರುವುದಾಗಿ ಹೇಳಿಕೊಳ್ಳುವ ಸಂಸ್ಥೆಯಾದ ಆರ್‌ಎಸ್‌ಎಸ್ ಪಾರದರ್ಶಕತೆ ಮತ್ತು ಸಂವಿಧಾನಾತ್ಮಕ ಹೊಣೆಗಾರಿಕೆಯನ್ನು ಪಾಲಿಸಬೇಕಾಗಿದೆ.

ಆರ್‌ಎಸ್‌ಎಸ್‌ನ ಅತ್ಯುನ್ನತ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಯಾದ ಅಖಿಲ ಭಾರತೀಯ ಪ್ರತಿನಿಧಿ ಸಭೆ ಬಿಡುಗಡೆ ಮಾಡಿದ 2025-26ರ ವಾರ್ಷಿಕ ವರದಿಯ ಪ್ರಕಾರ, ಕರ್ನಾಟಕದಲ್ಲಿ 4,127 ದೈನಂದಿನ ಶಾಖೆಗಳು, 1,389 ವಾರದ ಸಾಪ್ತಾಹಿಕ ಸಭೆಗಳು ಮತ್ತು 60 ಮಾಸಿಕ ಮಂಡಳಿಗಳನ್ನು ನಡೆಸಿದ್ದು, 19.61 ಲಕ್ಷ ಮಂದಿ ಭಾಗವಹಿಸುವುದರೊಂದಿಗೆ 2,194 ಸಮಾಜೋತ್ಸವಗಳನ್ನು ಆಯೋಜಿಸಿದೆ ಮತ್ತು ರಾಜ್ಯದಲ್ಲಿ 2.21 ಲಕ್ಷ ಸಮವಸ್ತ್ರಧಾರಿಗಳೊಂದಿಗೆ 562 ಪಥಸಂಚಲವನ್ನು ನಡೆಸಿದೆ.

ಇಂತಹ ದೊಡ್ಡ ಮಟ್ಟದ ಪ್ರಭಾವ ಮತ್ತು ವ್ಯಾಪಕತೆಯನ್ನು ಹೊಂದಿರುವ ಆರ್‌ಎಸ್‌ಎಸ್‌, ತನ್ನ ಕಾನೂನುಬದ್ಧ ಸ್ಥಾನಮಾನ, ನೋಂದಣಿ, ಪದಾಧಿಕಾರಿಗಳು, ಹಣಕಾಸಿನ ಮೂಲಗಳು, ವೆಚ್ಚ, ತೆರಿಗೆ ಪಾವತಿ ಹಾಗೂ ಸಾರ್ವಜನಿಕ ಚಟುವಟಿಕೆಗಳಿಗೆ ಅನುಮತಿ ಕುರಿತು ಸ್ಪಷ್ಟನೆ ನೀಡಬೇಕಾಗಿದೆ.

ನಾಗರಿಕರು, ಕಾರ್ಮಿಕರು, ಎನ್‌ಜಿಒಗಳು, ಟ್ರಸ್ಟ್‌ಗಳು, ದೇವಾಲಯಗಳು ಮತ್ತು ಕಂಪನಿಗಳಿಂದ ನೋಂದಣಿ, ವಿವರ ಬಹಿರಂಗ ಮತ್ತು ಕಾನೂನಿನ ಪರಿಪಾಲನೆಯನ್ನು ನಿರೀಕ್ಷಿಸಿರುವಾಗ, ಆರ್‌ಎಸ್‌ಎಸ್‌ ಮಾತ್ರ ಏಕೆ ವಿನಾಯಿತಿ ಪಡೆಯಬೇಕು?

ತನ್ನ ಶತಮಾನೋತ್ಸವದ ಸಂದರ್ಭದಲ್ಲಿ ಆರ್‌ಎಸ್‌ಎಸ್‌ ಸಂವಿಧಾನಕ್ಕೆ ಬದ್ಧರಾಗುವ ಹೊಣೆಗಾರಿಕೆ ಮೆರೆಯಬೇಕು ಹಾಗೂ ನೋಂದಣಿ, ಚಟುವಟಿಕೆಗಳು ಮತ್ತು ಹಣಕಾಸಿನ ಮಾಹಿತಿಗಳನ್ನು ಬಹಿರಂಗಪಡಿಸಬೇಕು, ಅನ್ವಯಿಸುವ ತೆರಿಗೆಗಳನ್ನು ಪಾವತಿಸಬೇಕು ಮತ್ತು ಸಂವಿಧಾನದ ಚೌಕಟ್ಟಿನೊಳಗೆ ಪಾರದರ್ಶಕವಾಗಿ ಕಾರ್ಯನಿರ್ವಹಿಸಬೇಕು.

ನನ್ನ ಪತ್ರದಲ್ಲಿ ಹೇಳಿರುವಂತೆ, ಆರ್‌ಎಸ್‌ಎಸ್‌ನಿಂದ ಶೀಘ್ರದಲ್ಲಿಯೇ ಪ್ರತಿಕ್ರಿಯೆ ಸಿಗುವ ನಿರೀಕ್ಷೆಯಲ್ಲಿದ್ದೇನೆ.

ನಾಗರಿಕರ ಹಿತದೃಷ್ಟಿಯಿಂದ ಮತ್ತು ಸಾರ್ವಜನಿಕ ಪಾರದರ್ಶಕತೆಯನ್ನು ಎತ್ತಿಹಿಡಿಯುವ ಸಲುವಾಗಿ, ಆರ್‌ಎಸ್‌ಎಸ್ ಈ ಕೆಳಗಿನ ವಿವರಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಬೇಕೆಂದು ನಾನು ನಿಮ್ಮನ್ನು ವಿನಂತಿಸುತ್ತೇನೆ:

1. ಆರ್‌ಎಸ್‌ಎಸ್‌ನ ಪ್ರಸ್ತುತ ಕಾನೂನಾತ್ಮಕ ಸ್ಥಾನಮಾನ ಮತ್ತು ಸಾಂಸ್ಥಿಕ ರಚನೆ ಏನು?
2. ಸಂಘಟನೆಯ ಜವಾಬ್ದಾರಿಯುತ ಪದಾಧಿಕಾರಿಗಳು ಮತ್ತು ಅಧಿಕೃತ ಪ್ರತಿನಿಧಿಗಳು ಯಾರು?
3.ಸಂಘಟನೆಗೆ ಬರುವ ನಿಧಿಗಳು, ದೇಣಿಗೆಗಳು, ಕೊಡುಗೆಗಳು ಮತ್ತು ಆದಾಯದ ಮೂಲಗಳು ಯಾವುವು?
4. ಸಂಘಟನೆಯ ಒಟ್ಟು ವೆಚ್ಚಗಳು ಮತ್ತು ಅದರ ಹೆಸರಿನಲ್ಲಿರುವ ಅಥವಾ ಅದರ ಅಂಗಸಂಸ್ಥೆಗಳ ಹೆಸರಿನಲ್ಲಿರುವ ಆಸ್ತಿಗಳ ವಿವರಗಳೇನು?
5. ಸಂಘಟನೆಯು ಚಾಲ್ತಿಯಲ್ಲಿರುವ ತೆರಿಗೆ ಕಾನೂನುಗಳನ್ನು ಪಾಲಿಸುತ್ತಿದೆಯೇ ಮತ್ತು ಅಗತ್ಯ ರಿಟರ್ನ್ಸ್‌ಗಳನ್ನು ಸಲ್ಲಿಕೆ ಮಾಡುತ್ತಿದೆಯೇ?
6. ಯಾವುದೇ ಅಧಿಕೃತ ನೋಂದಣಿ ಇಲ್ಲದೆಯೇ ಇಷ್ಟು ದೊಡ್ಡ ಮಟ್ಟದ ಹಣಕಾಸು ಮತ್ತು ಸಾಂಸ್ಥಿಕ ಚಟುವಟಿಕೆಗಳನ್ನು ನಡೆಸಲು ಇರುವ ಕಾನೂನಾತ್ಮಕ ಆಧಾರವೇನು?
7. ಯಾವುದೇ ಸಾರ್ವಜನಿಕ ಹೊಣೆಗಾರಿಕೆ ಇಲ್ಲದೆ ಇಷ್ಟು ಬೃಹತ್ ಪ್ರಮಾಣದಲ್ಲಿ ಕಾರ್ಯನಿರ್ವಹಿಸಲು ಅನುಮತಿ ನೀಡುವ ಸಾಂವಿಧಾನಿಕ ಮತ್ತು ಶಾಸನಬದ್ಧ ಚೌಕಟ್ಟು ಯಾವುದು?
8. ಸಾರ್ವಜನಿಕ ಸ್ಥಳಗಳಲ್ಲಿ ಕಾರ್ಯಕ್ರಮಗಳು, ಪಥಸಂಚಲನಗಳು ಮತ್ತು ಜನಸಮೂಹವನ್ನು ಸೇರಿಸಲು ಪಡೆಯುವ ಅನುಮತಿಗಳು ಮತ್ತು ನಿಯಮಾವಳಿಗಳ ಪಾಲನೆಯ ವಿವರಗಳೇನು?

ಯಾವಾಗಲೂ ರಾಷ್ಟ್ರೀಯತೆ, ಶಿಸ್ತು, ಕರ್ತವ್ಯ ಮತ್ತು ಕಾನೂನಿನ ಪಾಲನೆಯ ಬಗ್ಗೆ ಮಾತನಾಡುವ ಒಂದು ಸಂಸ್ಥೆಯು, ಭಾರತದ ಸಾಂವಿಧಾನಿಕ ಮತ್ತು ಶಾಸನಬದ್ಧ ನಿಯಮಗಳಿಗೆ ಸಂಪೂರ್ಣವಾಗಿ ಗೌರವ ನೀಡುವ ಮೂಲಕ ಪಾರದರ್ಶಕತೆಗೆ ಮಾದರಿಯಾಗಬೇಕಿದೆ. ಸಾಮಾನ್ಯ ನಾಗರಿಕರಿಗೆ ನಿಯಮಗಳನ್ನು ಪಾಲಿಸಲು ಹೇಳುವ ಸಂಸ್ಥೆಗಳು, ತಮಗೆ ಮಾತ್ರ ಆ ನಿಯಮಗಳಿಂದ ವಿನಾಯಿತಿ ಇರಬೇಕೆಂದು ನಿರೀಕ್ಷಿಸಬಾರದು.

ಆರ್‌ಎಸ್‌ಎಸ್ ತನ್ನ 100 ನೇ ವರ್ಷದ ಆಚರಣೆಯ ಸಂದರ್ಭದಲ್ಲಿ ಕೇವಲ ಸಂಭ್ರಮಾಚರಣೆ ಮಾಡದೆ, ಆತ್ಮಾವಲೋಕನ ಮಾಡಿಕೊಳ್ಳಬೇಕು. ಭಾರತೀಯ ಕಾನೂನಿನ ಚೌಕಟ್ಟಿನೊಳಗೆ ತನ್ನನ್ನು ತಾನು ಅಧಿಕೃತವಾಗಿ ನೋಂದಾಯಿಸಿಕೊಂಡು, ಸಂಪೂರ್ಣ ಪಾರದರ್ಶಕ ಸಂಸ್ಥೆಯಾಗಿ ಕಾರ್ಯನಿರ್ವಹಿಸುವುದೇ ಅದು ಭಾರತದ ಗಣರಾಜ್ಯಕ್ಕೆ ಮತ್ತು ಅದರ ಕಾನೂನಿಗೆ ನೀಡಬಹುದಾದ ಅತ್ಯುತ್ತಮ ಗೌರವವಾಗಿದೆ.

ಈ ಪ್ರಮುಖ ವಿಷಯಗಳ ಕುರಿತು ಚರ್ಚಿಸಲು ಮತ್ತು ಅಗತ್ಯ ಸ್ಪಷ್ಟನೆಗಳನ್ನು ಒದಗಿಸಲು ನಿಮ್ಮ ಕಡೆಯಿಂದ ಒಬ್ಬ ಅಧಿಕೃತ ಪ್ರತಿನಿಧಿಯನ್ನು ನಿಯೋಜಿಸಬೇಕೆಂದು ಹಾಗೂ ಈ ಪತ್ರಕ್ಕೆ ಅಧಿಕೃತ ಪ್ರತಿಕ್ರಿಯೆ ನೀಡಬೇಕೆಂದು ನಾನು ಆಶಿಸುತ್ತೇನೆ ಎಂದು ಪತ್ರದಲ್ಲಿ ಬರೆದಿದ್ದಾರೆ.

More articles

Latest article

Most read