ಇರಾನ್‌ನಿಂದ ಭಾರತೀಯ ಹಡಗುಗಳ ಮೇಲೆ ಡ್ರೋನ್ ದಾಳಿ : ಟ್ರಂಪ್‌ ಆರೋಪ

ಅಮೆರಿಕ :  ಹಾರ್ಮುಜ್ ಜಲಸಂಧಿಯಿಂದ ಹೊರಡುತ್ತಿದ್ದ ಭಾರತೀಯ ಹಡಗುಗಳ ಮೇಲೆ ಇರಾನ್ ಡ್ರೋನ್ ದಾಳಿ ನಡೆಸಲು ಪ್ರಯತ್ನಿಸಿದೆ ಎಂದು ಅಮೆರಿಕ ಅಧ್ಯಕ್ಷ ಡೋನಾಲ್ಡ್‌ ಟ್ರಂಪ್‌  ಆರೋಪಿಸಿದ್ದಾರೆ.

ತಮ್ಮ ಟ್ರೂತ್‌ ಸೋಷಿಯಲ್‌ ವೇದಿಕೆಯಲ್ಲಿ ಬರೆದಿರುವ ಅವರು,  “ಹಾರ್ಮುಜ್ ಜಲಸಂಧಿಯಿಂದ ಹೊರಡುತ್ತಿದ್ದ ಭಾರತೀಯ ಹಡಗುಗಳ ವಿರುದ್ಧ ಇರಾನ್ ನಡೆಸಲು ಯತ್ನಿಸಿದ ಡ್ರೋನ್ ದಾಳಿಯನ್ನು ತಡೆಗಟ್ಟಲಾಗಿದೆ. ಇದು ಸಂಪೂರ್ಣವಾಗಿ ಅಸ್ವೀಕಾರಾರ್ಹ” ಎಂದಿದ್ದಾರೆ. 

ಇದಕ್ಕೆ ಇರಾನ್‌ನ ಪ್ರತಿಕ್ರಿಯಿಸಿದ್ದು, ಈ ಆರೋಪವನ್ನು ತಳ್ಳಿಹಾಕಿದೆ. ಭಾರತದಲ್ಲಿನ ಇರಾನ್ ರಾಯಭಾರ ಕಚೇರಿಯ ಪ್ರಕಾರ, ಟ್ರಂಪ್ ಅವರ ಆರೋಪಗಳು ಆಧಾರರಹಿತವಾಗಿವೆ. ಅಮೆರಿಕ ಇತ್ತೀಚೆಗೆ ಭಾರತೀಯ ಸಿಬ್ಬಂದಿಯಿದ್ದ ಮೂರು ಹಡಗುಗಳ ಮೇಲೆ ದಾಳಿ ನಡೆಸಿದ ವಿಚಾರದಿಂದ ಗಮನ ಬೇರೆಡೆ ಸೆಳೆಯಲು ಈ ಆರೋಪ ಮಾಡುತ್ತಿದೆ ಎಂದು ಇರಾನ್ ಪ್ರತಿಪಾದಿಸಿದೆ.
ಭಾರತೀಯ ನಾವಿಕರ ಸಾವು ಖಂಡಿಸಿರುವ ಭಾರತ,  ತೀವ್ರ ಕಳವಳ ವ್ಯಕ್ತಪಡಿಸಿ, ಇಂತಹ ದಾಳಿಗಳನ್ನು ತಕ್ಷಣ ನಿಲ್ಲಿಸುವಂತೆ ಕರೆ ನೀಡಿದೆ.

ಅಮೆರಿಕ–ಇರಾನ್ ಒಪ್ಪಂದದ ವಿವಾದ 
ಟ್ರಂಪ್ ಅವರು ಮತ್ತೊಂದು ಆರೋಪ ಮಾಡಿದ್ದು, ಇರಾನ್ ಬಹಿರಂಗಪಡಿಸಿರುವ ಅಮೆರಿಕ–ಇರಾನ್ ಶಾಂತಿ ಒಪ್ಪಂದದ ವಿವರಗಳು “ಸತ್ಯಕ್ಕೆ ದೂರವಾಗಿವೆ” ಎಂದು ಹೇಳಿದ್ದಾರೆ. ಇರಾನ್ ಮಾತುಕತೆಗಳಲ್ಲಿ ಪ್ರಾಮಾಣಿಕತೆ ತೋರಿಸುತ್ತಿಲ್ಲ ಎಂದು ಆರೋಪಿಸಿದರು. “ಅವರು ಶೀಘ್ರದಲ್ಲೇ ತಮ್ಮ ನಿಲುವು ಬದಲಿಸಬೇಕು” ಎಂದು ಎಚ್ಚರಿಕೆ ನೀಡಿದರು.

ಜೆಡಿ ವ್ಯಾನ್ಸ್ ಸ್ಪಷ್ಟನೆ 
ಸಾಮಾಜಿಕ ಜಾಲತಾಣದಲ್ಲಿ ಜೆಡಿ ವ್ಯಾನ್ಸ್ ಸ್ಪಷ್ಟನೆ ನೀಡಿದ್ದು,  ಇರಾನ್‌ಗೆ ಯಾವುದೇ ನಗದು ಹಣ ನೀಡಲಾಗುವುದಿಲ್ಲ. ಕೇವಲ ಒಪ್ಪಂದಕ್ಕೆ ಸಹಿ ಹಾಕಿದ ಕಾರಣಕ್ಕೆ ಹಣ ಬಿಡುಗಡೆ ಮಾಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.

ಶಾಂತಿ ಒಪ್ಪಂದದ ಸಾಧ್ಯತೆ

ಇದೇ ವೇಳೆ, ಅಬ್ಬಾಸ್‌ ಅರಗ್ಚಿ  ಅವರು ಅಮೆರಿಕ ಮತ್ತು ಇರಾನ್ ನಡುವಿನ ಯುದ್ಧ ಅಂತ್ಯಗೊಳಿಸುವ ಒಪ್ಪಂದ ಈಗಾಗಲೇ ಬಹಳ ಸಮೀಪದಲ್ಲಿದೆ ಎಂದು ಹೇಳಿದ್ದಾರೆ. “ಇಸ್ಲಾಮಾಬಾದ್ ಒಪ್ಪಂದದ ಕರಡು ಎಂದಿಗಿಂತಲೂ ಈಗ ಹೆಚ್ಚು ಸಮೀಪದಲ್ಲಿದೆ” ಎಂದು ತಿಳಿಸಿದ್ದಾರೆ.

ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಮುಂದುವರಿದಿದ್ದರೂ, ಎರಡೂ ದೇಶಗಳ ನಡುವೆ ಶಾಂತಿ ಮಾತುಕತೆಗಳು ಇನ್ನೂ ನಡೆಯುತ್ತಿವೆ. ಭಾರತೀಯ ನಾವಿಕರ ಸುರಕ್ಷತೆ ಮತ್ತು ಹಾರ್ಮುಜ್ ಜಲಸಂಧಿಯ ಸ್ಥಿರತೆ ಜಾಗತಿಕ ಚಿಂತೆಯ ವಿಷಯವಾಗಿ ಉಳಿದಿವೆ.

More articles

Latest article

Most read