ಈ ಸಲನೂ ಕಪ್‌ ನಮ್ದೆ, ಎರಡನೇ ಬಾರಿಗೆ ಐಪಿಎಲ್‌ ಟ್ರೋಫಿ ಎತ್ತಿಹಿಡಿದ ಆರ್‌ಸಿಬಿ

ಅಹಮದಾಬಾದ್‌ : ಈ ಸಲನೂ ಕಪ್‌ ನಮ್ದೆ. ಗುಜರಾತ್‌ನ ಅಹಮದಾಬಾದ್‌ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್‌ 2026ರ ಫೈನಲ್‌ ಪಂದ್ಯದಲ್ಲಿ ಗುಜರಾತ್‌ ಟೈಟಾನ್ಸ್‌ ತಂಡವನ್ನು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಬಗ್ಗು ಬಡಿದಿದೆ. 

ಚೇಸ್‌ ಕಿಂಗ್‌ ವಿರಾಟ್‌ ಕೊಹ್ಲಿ ಬ್ಯಾಟಿಂಗ್‌ ಪ್ರದರ್ಶನ ರೋಚಕವಾಗಿತ್ತು. ಮೊದಲ ಬ್ಯಾಟ್ಸ್‌ಮನ್‌ ಆಗಿ ಬಂದ ಕೊಹ್ಲಿ ಮ್ಯಾಚ್‌ ಗೆಲ್ಲಿಸಿಯೇ ಬಿಟ್ಟರು. ಅರ್ಷದ್ ಖಾನ್ ಎಸೆದ ಫುಲ್ ಡೆಲಿವರಿ ನೇರವಾಗಿ ಕೊಹ್ಲಿಯ ಹೊಡೆಯುವ ವಲಯಕ್ಕೆ ಬಂದಿತು. ಅವಕಾಶವನ್ನು ಕೈಚೆಲ್ಲದ Virat Kohli, ಚೆಂಡನ್ನು ಲಾಂಗ್-ಆನ್ ಮೇಲಿಂದ ಭರ್ಜರಿ ಸಿಕ್ಸರ್‌ಗೆ ಎತ್ತಿದರು. ಆ ಸಿಕ್ಸರ್‌ನೊಂದಿಗೆ Royal Challengers Bengaluru ಐದು ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿ ತಮ್ಮ ಎರಡನೇ ಐಪಿಎಲ್ ಪ್ರಶಸ್ತಿಯನ್ನು ಗೆದ್ದಿತು. ಪಂದ್ಯವನ್ನು ಗೆಲ್ಲಿಸಿದ ರನ್‌ಗಳನ್ನು ಕೊಹ್ಲಿಯೇ ಬಾರಿಸಿರುವುದು ಈ ಐತಿಹಾಸಿಕ ಕ್ಷಣಕ್ಕೆ ಮತ್ತಷ್ಟು ಮೆರುಗು ತಂದಿತು.

ಜಿಟಿ ತಂಡ ಟಾಸ್‌ ಸೋತು ಬ್ಯಾಟಿಂಗ್‌ ಆರಂಭಿಸಿತು. ಎಂಟು ವಿಕೆಟ್​ಗಳನ್ನು ಕಳೆದುಕೊಳ್ಳುವ   ಮೂಲಕ 155 ರನ್​ಗಳಿಸಿತ್ತು. ಫೀಲ್ಡಿಂಗ್​ನಲ್ಲಿ ಉತ್ತಮ ಪ್ರದರ್ಶನ ತೋರಿರುವ ಪಟಿದಾರ್​ ಟೀಂಗೆ 156 ರನ್​ ಟಾರ್ಗೆಟ್​ ನೀಡಿತ್ತು. 

ಆರ್​ಸಿಬಿ ಬೌಲಿಂಗ್​ ದಾಳಿಗೆ ಗುಜರಾತ್​ ಟೈಟಾನ್ಸ್ ತಂಡ ಎಂಟು ವಿಕೆಟ್​ಗಳನ್ನು ಕಳೆದುಕೊಂಡಿದೆ. ಭುವನೇಶ್ವರ್​ ಪೂಜಾರ ಒಟ್ಟು ಮೂರು ವಿಕೆಟ್​ ಕಬಳಿಸಿದ್ದರೆ, ಒಂದೇ ಓವರ್​ ಜೇಸನ್​ ಹೋಲ್ಡರ್​​ ​​ಮತ್ತು ರಶೀದ್​ ಖಾನ್ ಅವರ​ ವಿಕೆಟ್​ ಉರುಳಿಸಿದರು. 

More articles

Latest article

Most read