ಬೆಂಗಳೂರು : ನಾನು ಮುಖ್ಯಮಂತ್ರಿ ಸ್ಥಾನಕ್ಕೆ ರಾಜ್ಯಪಾಲರ ಭವನದಲ್ಲಿ ರಾಜೀನಾಮೆ ಸಲ್ಲಿಸಿದ್ದೇನೆ ಎಂದು ನಿರ್ಗಮಿತ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ರಾಜಣಿನಾಮೆ ಪತ್ರ ಸಲ್ಲಿಕೆ ಬಳಿಕ ಗೃಹ ಕಚೇರಿ ಕೃಷ್ಣಾದಲ್ಲಿ ಮಾತನಾಡಿದ ಅವರು, ರಾಜ್ಯಪಾಲರು ಊರಿನಲ್ಲಿ ಇಲ್ಲ, ಹೀಗಾಗಿ, ರಾಜೀನಾಮೆ ಪತ್ರವನ್ನ ಕಾರ್ಯದರ್ಶಿಗೆ ಸಲ್ಲಿಸಿದ್ದೇನೆ.
ಹೈಕಮಾಂಡ್ ಹೇಳಿದ ಬಳಿಕ ಸ್ವಯಂಪ್ರೇರಿತರಾಗಿ ರಾಜೀನಾಮೆ ಕೊಟ್ಟಿದ್ದೇನೆ. ರಾಷ್ಟ್ರರಾಜಕಾರಣದಲ್ಲಿ ನನಗೆ ಆಸಕ್ತಿ ಇಲ್ಲ, ಸಕ್ರಿಯ ರಾಜಕಾರಣದಲ್ಲಿ ಇರುತ್ತೇನೆ ಎಂದು ಹೈಕಮಾಂಡ್‌ಗೆ ವಿನಮ್ರವಾಗಿ ತಿಳಿಸಿದ್ದೇನೆ. ರಾಜ್ಯ ರಾಜಕಾರಣದಲ್ಲಿ ಕೋಮುವಾದಿ ಶಕ್ತಿಗಳ ವಿರುದ್ಧ ಮುಂದಿನ ದಿನಗಳಲ್ಲಿ ಹೋರಾಟ ಮಾಡುತ್ತೇನೆ ಎಂದು ಹೇಳುತ್ತಾ ಮೂರು ವರ್ಷಗಳ ಮಂತ್ರಿ ಸ್ಥಾನವನ್ನು ಅಂತ್ಯಗೊಳಿಸಿದ್ದಾರೆ.
ಹೈಕಮಾಂಡ್ ಯಾವಾಗ ಸೂಚಿಸುತ್ತಾರೆ ಆವಾಗ ರಾಜೀನಾಮೆ ಕೊಡುತ್ತೇನೆ ಎಂದು ಹೇಳಿದ್ದೆ. ಅದರ ಪ್ರಕಾರ ಮೊನ್ನೆ, ಹೈಕಮಾಂಡ್ ರಾಜೀನಾಮೆ ಕೊಡಿ ಎಂದಾಗ ಆಯ್ತು ಎಂದು ಹೇಳಿದ್ದೆ. ಹೀಗಾಗಿ ಇಂದು ರಾಜೀನಾಮೆ ಸಲ್ಲಿಸಿದ್ದೇನೆ. ರಾಜ್ಯಪಾಲರು ಬಂದ ನಂತರ ಅಂಗೀಕಾರ ಮಾಡುತ್ತಾರೆ ಎಂಬ ವಿಶ್ವಾಸವಿದೆ. ಸಂವಿಧಾನ ಪ್ರಕಾರ ಆಗಲೇಬೇಕು. ಒಮ್ಮೆ ಸಿಎಂ ಬಳಿಕ ಅಂಗೀಕಾರ ಮಾಡಿ, ಮುಂದಿನ ಮುಖ್ಯಮಂತ್ರಿಗೆ ಅವಕಾಶ ಮಾಡಿಕೊಡುವುದು ಅವರ ಜವಾಬ್ದಾರಿ. ಸಂಪೂರ್ಣ ಬಹುಮತದಲ್ಲಿದ್ದೇವೆ. ಸಂವಿಧಾನ ಬದ್ಧವಾಗಿದೆ ಎಂದರು.
ಮತದಾರರೇ ಅಭಿಮಾನಿಗಳು
ರಾಜ್‌ಕುಮಾರ್ ಅಭಿಮಾನಿ ದೇವರು ಅನ್ನುತ್ತಿದ್ದರು, ನಾನು ರಾಜಕಾರಣಿ, ನಾನು ಸಂವಿದಾನವನ್ನೇ ಧರ್ಮ ಎಂದು ತಿಳಿದುಕೊಂಡವನು. ಮತದಾರರೇ ಅಭಿಮಾನಿ ದೇವರು, ಕನ್ನಡ ನಾಡಿನ ಕರ್ನಾಟಕದ ಏಳು ಕೋಟಿ ಜನರ ಸೇವೆ ಮಾಡುವ, ಎರಡು ಬಾರಿ ಸಿಎಂ ಅವಕಾಶ ಸಿಕ್ಕಿತು. ೨ ಬಾರಿ ವಿರೋಧಪಕ್ಷ ನಾಯಕನ ಅವಕಾಶ ಸಿಕ್ಕಿತ್ತು. ಅವಕಾಶ ನೀಡಿದ್ದಕ್ಕೆ ಸೋನಿಯಾಗಾಂಧಿ, ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಅವರಿಗೆ ಈ ಸಂದರ್ಭದಲ್ಲಿ ಅಪಾರವಾದ ಧನ್ಯವಾದ ತಿಳಿಸುವ ಕೆಲಸ ಮಾಡುತ್ತೇನೆ.
ಕಾಂಗ್ರೆಸ್ ಸೇರಿದ್ದು 2006. ಅಲ್ಲಿಂದ ಕಾಂಗ್ರೆಸ್ ಕಾರ್ಯಕರ್ತರು, ಶಾಸಕರು, ಲೋಕಸಭಾ, ರಾಜ್ಯಸಭಾ ಸದಸ್ಯರು ನನಗೆ ಪ್ರೀತಿ ತೋರಿಸದ್ದಾರೆ. ಎರಡು ಬಾರಿ ಸಿಎಂದ ಆಗಿದ್ದಾಗ ಕೆಲಡಸ ಮಾಡಿದ ಸಹದ್ಯೋಗಿಗಳು ಬೆಂಬಲ, ಸಹಕಾರ, ಪ್ರೀತಿ ನೀಡಿದ್ದಾರೆ ಅದಕ್ಕಾಗಿ ಯಾವಾಗಲೂ ಚಿರಋಣಿ ಎಂದು ತಿಳಿಸಿದರು.
ನಾನು ಹಳ್ಳಿಯಿಂದ ಬಂದವನು, ಎಂದೂ ನಾಯಕನಾಗುತ್ತೇನೆ ಎಂದು ಕನಸು ಕಂಡವನಲ್ಲ. ಬುದ್ಧ, ಬಸವ, ಅಂಬೇಡ್ಕರ್ ತತ್ವಾದರ್ಶಗಳಲ್ಲಿ ನಂಬಿಕೆ ಇಟ್ಟವನು. ಸಂವಿಧಾನದ ಮೇಲೆ ಅಪಾರ ಗೌರವ ಇಟ್ಟುಕೊಂಡಿದ್ದೇನೆ. ಒಂದೇ ಕುಟುಂಬ ಎಂದು ನಂಬಿದ್ದೇನೆ. ಸಮಾನವಾಗಿ ಈ ದೇಶದ ಸಂಪತ್ತು ಹಂಚಿಕೆ ಆಗಬೇಕು ಎಂದು ಬಯಸಿದ್ದವನು.
ಇಡೀ ಸಮಾಜ ಕುವೆಂಪು ಅವರು ಹೇಳಿದಂತೆ ಸರ್ವ ಜನಾಂಗದ ತೋಟ, ಸಮಾನತೆ, ಸಮಾನ ಅವಕಾಶ ಎಲ್ಲರಿಗೂ ಸಿಗಬೇಕು. ಅಸಮಾನತೆ ತೊಲಗಲು ಎಲ್ಲರಿಗೂ ಸಮಾನತೆಯ ಅವಕಾಶ ಸಿಗಬೇಕು. ಅದಕ್ಕಾಗಿ ಪ್ರಣಾಳಿಕೆಯಲ್ಲಿ ಹೇಳೀದಂತೆ ಪ್ರಮಾಣಿಕವಾಗಿ ಜಾರಿ ಮಾಡಿದ್ದೇವೆ. ೧೫೮ ಭರವಸೆಗಳನ್ನು ಈಡೇರಿಸಿದ್ದೇವೆ. ೫ ಗ್ಯಾರೆಂಟಿ ಯೋಜನೆಗಳನ್ನು ಮೊದಲ ವರ್ಷವೇ ಈಡೇರಿಸಿದ್ದೇವೆ. ನಾವು ಜನತೆಗೆ ಕೊಟ್ಟ ಭರವಸೆಗಳನ್ನು, ವಚನವನ್ನು ಈಡೇರಿಸುವ ಪ್ರಮಾಣಿಕ ಪ್ರಯತ್ನ ಮಾಡಿದ್ದೇವೆ. ಮಾತಿಗೆ ತಪ್ಪಿಲ್ಲ. ಜಿಎಸ್‌ಟಿ ಸಂಗ್ರಹದಲ್ಲಿ ದೇಶಕ್ಕೆ ಎರಡನೇ ಸ್ಥಾನದಲ್ಲಿದೆ.
ನನ್ನ ಕೊನೆಯ ಉಸಿರು ಇರುವ ತನಕ ಕೋಮುವಾದಿ ಶಕ್ತಿಗಳ ವಿರುದ್ಧ ಮತ್ತು ಜನರ ಸಮಾನತೆಗಾಗಿ ಹೋರಾಟ ಮಾಡುತ್ತೇನೆ ಎಂದು ಈ ರಾಜ್ಯದ ಜನತೆಗೆ ಹೇಳಲು ಬಯಸುತ್ತೇನೆ. ಎಲ್ಲರಿಗೂ ಹಾಗೂ ಎಲ್ಲಾ ಕಾರ್ಯಕರ್ತರಿಗೂ, ಮಾಧ್ಯಮದವರಿಗೂ ಧನ್ಯವಾದ ಹೇಳುತ್ತೇನೆ ಎಂದರು.
ಇದು ನನಗೆ ಮತ್ತು ನಮ್ಮ ಪಕ್ಷಕ್ಕೆ ಸಂತೃಪ್ತಿ ಕೊಟ್ಟ ವಿಚಾರ. ವಿರೋಧ ಪಕ್ಷದವರು ಟೀಕೆಗಳ ನಡುವೆ ಗ್ಯಾರೆಂಟಿ ಯೋಜನೆಗಳನ್ನು ಜಾರಿ ಮಾಡುವಲ್ಲಿ ಕರ್ನಾಟಕ ಇಡೀ ದೇಶದಲ್ಲೇ ತಲಾ ಆದಾಯದಲ್ಲಿ ನಂಬರ್ ಒನ್ ಸ್ಥಾನದಲ್ಲಿದ್ದೇವೆ.

