ಜಿಕೆವಿಕೆಯಲ್ಲಿ ಮೇ 23 ರಂದು ವಿನೂತನ ‘ರೈತ ಸಂತೆ’

ಬೆಂಗಳೂರು : ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯದ ವಿಶೇಷ ಹಾಗೂ ಜನಪ್ರಿಯ ಕಾರ್ಯಕ್ರಮಗಳಲ್ಲಿ ಒಂದಾದ “ರೈತ ಸಂತೆ” ಈ ಬಾರಿ ಮತ್ತಷ್ಟು ವಿನೂತನ ವಿಷಯಗಳೊಂದಿಗೆ ಸಾರ್ವಜನಿಕರ ಆಕರ್ಷಣೆಗೆ ಸಜ್ಜಾಗಿದೆ. 
ಮೇ 23 ರಂದು ಬೆಳಿಗ್ಗೆ 7  ಗಂಟೆಯಿಂದ ಸಂಜೆ 4  ರವರೆಗೆ ಜಿ.ಕೆ.ವಿಕೆ ಆವರಣದ ಗಣಪತಿ ದೇವಸ್ಥಾನದ ಹತ್ತಿರ ವಿಶ್ವವಿದ್ಯಾನಿಲಯದ ಉತ್ಪನ್ನಗಳ ಈ “ರೈತ ಸಂತೆ”ಯನ್ನು ಆಯೋಜಿಸಲಾಗಿದೆ.  

ಈ ಬಾರಿಯ ರೈತ ಸಂತೆಯ ಪ್ರಮುಖ ಆಕರ್ಷಣೆಯಾಗಿ ರೈತರೇ ನೇರವಾಗಿ ಬೆಳೆದ ತಾಜಾ ಹಲಸು, ದ್ರಾಕ್ಷಿ, ಕಲ್ಲಂಗಡಿ, ಕರಬೂಜ ಹಣ್ಣುಗಳು ಹಾಗೂ ವಿವಿಧ ತರಕಾರಿಗಳು ಲಭ್ಯವಿರಲಿವೆ. ಗುಣಮಟ್ಟದ ರಾಜಮುಡಿ ಅಕ್ಕಿ, ಮೌಲ್ಯವರ್ಧಿತ ಸಿರಿಧಾನ್ಯ ಪದಾರ್ಥಗಳು ಹಾಗೂ ವಿವಿಧ ಸಾವಯವ ಉತ್ಪನ್ನಗಳು.  ತಾಜಾ ಅಣಬೆ ಹಾಗೂ ಅಲಂಕಾರಿಕ ಮೀನು ಮರಿಗಳು. ಸುಗಂಧ ಮತ್ತು ಔಷಧೀಯ ಸಸ್ಯಗಳು, ಅಲಂಕಾರಿಕ ಗಿಡಗಳು, ಜೈವಿಕ ಗೊಬ್ಬರಗಳು ಹಾಗೂ ಎರೆಹುಳು ಗೊಬ್ಬರ ಲಭ್ಯವಿರಲಿದೆ.  

ಕೃಷಿ ಯಂತ್ರೋಪಕರಣಗಳು, ಜೈವಿಕ ಕೀಟನಾಶಕಗಳು, ವಿಶ್ವವಿದ್ಯಾನಿಲಯದ ಕೃಷಿ ಪ್ರಕಟಣೆಗಳು ಹಾಗೂ ಸಮಗ್ರ ಕೃಷಿ ಮಾಹಿತಿ. ಅಡಿಕೆ ಉತ್ಪನ್ನಗಳ ಕರಕುಶಲ ವಸ್ತುಗಳು, ರೇಷ್ಮೆ ಕೃಷಿಯ ಉಪ ಉತ್ಪನ್ನಗಳು, ಜೇನು ಕೃಷಿ ಮತ್ತು ಪಶು ಸಂಗೋಪನೆಗೆ ಸಂಬಂಧಿಸಿದ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ ಇರಲಿದೆ.

ಸಾರ್ವಜನಿಕರು ಹಾಗೂ ರೈತ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಈ ವಿನೂತನ ಸಂತೆಯ ಸದುಪಯೋಗ ಪಡೆದುಕೊಳ್ಳಬೇಕಾಗಿ ಕೃಷಿ ವಿಶ್ವವಿದ್ಯಾನಿಲಯದ ಹಿರಿಯ ವಾರ್ತಾತಜ್ಞರು ಮತ್ತು ಮುಖ್ಯಸ್ಥರಾದ ಡಾ. ಕೆ.ಪಿ. ರಘುಪ್ರಸಾದ್  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

More articles

Latest article

Most read