ಬೆಂಗಳೂರು : ಶ್ರೀಲಂಕದಿಂದ 11 ಕಿ.ಮೀ ಈಜುಕೊಂಡು ಭಾರತದ ಗಡಿಯನ್ನು ದಾಟುವ ಮೂಲಕ ಬೆಂಗಳೂರಿನ ದಂಪತಿಗಳು ದಾಖಲೆ ನಿರ್ಮಿಸಿದ್ದಾರೆ.
ಬೆಂಗಳೂರು ಮೂಲದ ದಂಪತಿ ಡ್ಯಾನಿಶ್ ಅಬ್ದಿ ಮತ್ತು ವೃಶಾಲಿ ಪ್ರಸಾದೆ ರಾಮ ಸೇತು ಮಾರ್ಗದಲ್ಲಿ ಶ್ರೀಲಂಕಾದಿಂದ ಭಾರತಕ್ಕೆ ಈಜುಕೊಂಡು ಬಂದು ಇತಿಹಾಸ ನಿರ್ಮಿಸಿದರು.
ಈ ಜೋಡಿ ಮೇ.7 ರಂದು ಪಾಕ್ ಜಲಸಂಧಿಯಾದ್ಯಂತ ಸುಮಾರು 32 ಕಿಲೋಮೀಟರ್ ಕ್ರಮಿಸಿ, ಶ್ರೀಲಂಕಾದ ತಲೈಮನ್ನಾರ್ನಿಂದ ಬೆಳಿಗ್ಗೆ 4:30 ರ ಸುಮಾರಿಗೆ ಈಜಲು ಪ್ರಾರಂಭಿಸಿ ಮಧ್ಯಾಹ್ನ 3:15 ಕ್ಕೆ ತಮಿಳುನಾಡಿನ ಧನುಷ್ಕೋಡಿ ತಲುಪಿದ್ದಾರೆ.
ಈ ಸವಾಲಿನ ಈಜು ಪೂರ್ಣಗೊಳ್ಳಲು 10 ಗಂಟೆ 45 ನಿಮಿಷಗಳನ್ನು ತೆಗೆದುಕೊಂಡಿದ್ದಾರೆ. ಈ ಬಗ್ಗೆ ದಂಪತಿಗಳು ಇನ್ಸ್ಟಾಗ್ರಾಮ್ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಮೆಚ್ಚುಗೆ ಹಾಗೂ ಅಭಿನಂದನೆ ವ್ಯಕ್ತವಾಗುತ್ತಿದೆ.

