ಹಳೆ ವೈಶಮ್ಯದ ಹಿನ್ನೆಲೆ ವ್ಯಕ್ತಿಯ ಬರ್ಬರ ಹತ್ಯೆ

ಕೋಲಾರ : ಕಳೆದ ರಾತ್ರಿ ಮಾಲೂರು ಪೊಲೀಸ್ ಠಾಣಾ ವ್ಯಾಪ್ತಿಯ ಸಂತೆ ಮೈದಾನದಲ್ಲಿ ಯುವಕನೊಬ್ಬನನ್ನು ಆತನ ಸ್ನೇಹಿತರೆ ಬರ್ಬರವಾಗಿ ಕೊಲೆ ಮಾಡಿದ್ದಾರೆ.

ಕೊಲೆಯಾದ ವ್ಯಕ್ತಿಯನ್ನು ಜಂಗಾನಹಳ್ಳಿ ಮೂಲದ ಪುರುಷೋತ್ತಮ್ (25) ಎನ್ನಲಾಗಿದ್ದು ಈತನನ್ನು ಟೇಕಲ್ ಮೂಲದ ಸಂಜಯ್ (25) ಆತನ ಸ್ನೇಹಿತನೊಂದಿಗೆ ಸೇರಿ ಮುಚ್ಚು ಮತ್ತು ಲಾಂಗುಗಳಿಂದ ಭೀಕರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ.

ಮೃತ ಪುರುಷೋತ್ತಮ ಹಾಗೂ ಸಂಜಯ್ ಸ್ನೇಹಿತರಾಗಿದ್ದು 3 ವರ್ಷಗಳ ಹಿಂದೆ ನಗರದಲ್ಲಿ ಅಪರಾಧ ಪ್ರಕರಣ ಒಂದರಲ್ಲಿ ಭಾಗಿಯಾಗಿ ಜೈಲುವಾಸವನ್ನು ಸಹ ಅನುಭವಿಸಿದ್ದು ಇತ್ತೀಚಿನ ದಿನಗಳಲ್ಲಿ ಮೃತ ಪುರುಷೋತ್ತಮ ನಾನು ಜೈಲುವಾಸ ಅನುಭವಿಸುವುದಕ್ಕೆ ಕಾರಣ ಸಂಜಯ್ ಮತಿತ್ತರೆಂದು ಹೇಳಿಕೊಂಡು ತಿರುಗಾಡುತ್ತಿದ್ದನೆಂದು ಸಂಜಯ್ ಮೇಲೆ ದ್ವೇಷವನ್ನು ಸಾಧಿಸುತ್ತಿದ್ದ ಎನ್ನಲಾಗಿದೆ.

ಇದನ್ನು ಮನಸ್ಸಿನಲ್ಲಿಟ್ಟುಕೊಂಡು ಕಳೆದ ರಾತ್ರಿ ಪುರುಷೋತ್ತಮ ಎಂದಿನಂತೆ ರೈಲಿನಿಂದ ಇಳಿದು ಮನೆಯತ್ತ ಹೋಗುತ್ತಿದ್ದಾಗ ಸಂಜಯ್ ಹಾಗೂ ಆತನ ಸ್ನೇಹಿತ ಪುರುಷೋತ್ತಮನನ್ನು ಮೆಚ್ಚು ಲಾಂಗು ಇತರೆ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಘಟನಾ ಸ್ಥಳಕ್ಕೆ ಜಿಲ್ಲಾ ರಕ್ಷಣಾಧಿಕಾರಿ ಕನ್ನಿಕಾ ಸುಕ್ರಿಪಾಲ್ ಭೇಟಿ ನೀಡಿದ್ದಾರೆ.

ಮಾಸ್ತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ದಾಖಲಿಸಿಕೊಂಡಿರುವ ಇನ್ಸ್ಪೆಕ್ಟರ್ ಓಂ ಪ್ರಕಾಶ್ ಗೌಡ ಸ್ಥಳ ಪರಿಶೀಲನೆ ನಂತರ ಆರೋಪಿಗಳ ಪತ್ತೆಗಾಗಿ ತೀವ್ರ ಶೋಧ ನಡೆಸುತ್ತಿದ್ದಾರೆ.

More articles

Latest article

Most read