ನವದೆಹಲಿ : ಡಿಸಿ ವಿರುದ್ಧ ಚಿನ್ನಸ್ವಾಮಿಯಲ್ಲಿ ಸೋತಿದ್ದ ಆರ್ಸಿಬಿ ಸೇಡು ತೀರಿಸಿಕೊಳ್ಳಲು ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣ ಸಾಕ್ಷಿಯಾಗಿದೆ. ಇತಿಹಾಸದಲ್ಲಿ ಅತ್ಯಂತ ಕಡಿಮೆ ಮೊತ್ತ ದಾಖಲಿಸುವುದನ್ನು ತಪ್ಪಿಸಿಕೊಂಡಿದೆ.
16.3 ಓವರ್ಗಳಲ್ಲಿ ಕೇವಲ 75 ರನ್ಗಳಿಸಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಅಲೌಟ್ ಆಗಿದೆ.
39ನೇ ಪಂದ್ಯದಲ್ಲಿ ಟಾಸ್ ಗೆದ್ದ ಆರ್ಸಿಬಿ, ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ತಂಡ ಕೇವಲ 8 ರನ್ಗಳಿಗೆ ಪ್ರಮುಖ 6 ವಿಕೆಟ್ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆರ್ಸಿಬಿ ವೇಗಿಗಳಾದ ಭುವನೇಶ್ವರ್ ಕುಮಾರ್ ಮೂರು ವಿಕೆಟ್, ಹೇಜೆಲ್ವುಡ್ 4 ವಿಕೆಟ್ ಪೆಡದು ಬ್ಯಾಟರ್ಗಳನ್ನು ಬಂದ ದಾರಿಗೆ ಸುಂಕವಿಲ್ಲದಂತೆ ವಾಪಸ್ ಕಳಿಸಿದರು. ಇದು ಪವರ್ ಪ್ಲೇಯಲ್ಲಿ ಅತಿ ಕಡಿಮೆ ರನ್ ಪಡೆದ ದಾಖಲೆಯಾಗಿದೆ.
ಮೊದಲ 6 ಓವರ್ಗಳಲ್ಲಿ ಕೇವಲ 13 ರನ್ ಕಲೆಹಾಕಿ ಬರೋಬ್ಬರಿ 6 ವಿಕೆಟ್ಗಳನ್ನು ಕಳೆದುಕೊಂಡಿತು.
ಐಪಿಎಲ್ನಲ್ಲಿ ಚೊಚ್ಚಲ ಪಂದ್ಯವನ್ನಾಡಿದ ಸಾಹಿಲ್ ಪಾರಿಖ್ ಕಳಪೆ ಆರಂಭ ಮಾಡಿದ್ದಾರೆ. ಭುವನೇಶ್ವರ್ ಕುಮಾರ್ ಎಸೆತದಲ್ಲಿ ಕೇವಲ ಎರಡು ಎಸೆತಗಳಲ್ಲಿ ರನ್ ಗಳಿಸದೆ ಔಟಾದರು.
ಕೇವಲ 2 ರನ್ಗಳಿಗೆ ಎರಡನೇ ವಿಕೆಟ್ ಕಳೆದುಕೊಂಡಿತು, ಕೆಎಲ್ ರಾಹುಲ್ 1 ರನ್ಗೆ ಔಟಾದರು.
ಕೇವಲ ಎರಡು ರನ್ಗಳಿಗೆ ಮೂರನೇ ವಿಕೆಟ್ ಕಳೆದುಕೊಂಡಿತು. ರಾಹುಲ್ ನಂತರ ಜೋಶ್ ಹ್ಯಾಜಲ್ವುಡ್ ಸಮೀರ್ ರಿಜ್ವಿ ಅವರನ್ನು ಔಟ್ ಮಾಡಿದರು. ಮೊದಲ ಎಸೆತದಲ್ಲೇ ಅವರನ್ನು ಔಟ್ ಮಾಡಿದರು.
ಕೇವಲ 7 ರನ್ಗಳಿಗೆ ಐದನೇ ವಿಕೆಟ್ ಕಳೆದುಕೊಂಡಿತು. ನಾಯಕ ಅಕ್ಷರ್ ಪಟೇಲ್ ಕೂಡ ರನ್ ಗಳಿಸದೆ ಔಟಾದರು. ಭುವನೇಶ್ವರ್ ಕುಮಾರ್ ತಮ್ಮ ಮೂರನೇ ವಿಕೆಟ್ ಪಡೆದರು.
43 ರನ್ಗಳಿಗೆ ಏಳನೇ ವಿಕೆಟ್ ಕಳೆದುಕೊಂಡಿತು. 19 ರನ್ಗಳ ಹೋರಾಟದ ಇನ್ನಿಂಗ್ಸ್ ಆಡಿದ ಡೇವಿಡ್ ಮಿಲ್ಲರ್ ಔಟಾದರು.

