ಕೋಮು‌ಭಾವನೆ ಬಿತ್ತುತ್ತಿರುವ ಈ‌ ಕಾಲಘಟ್ಟದಲ್ಲಿ ಬಸವಣ್ಣರ‌ ತತ್ವ‌, ಸಿದ್ಧಾಂತ ಅತ್ಯಗತ್ಯ : ಶಿವರಾಜ್ ತಂಗಡಗಿ

ಮೈಸೂರು : ಕೆಲ ದುಷ್ಟ ಶಕ್ತಿಗಳು ಸಮಾಜದಲ್ಲಿ ಕೋಮುಭಾವನೆ ಬಿತ್ತುತ್ತಿರುವ ಇಂತಹ ಕಾಲಘಟ್ಟದಲ್ಲಿ ಬಸವಣ್ಣ ಅವರ ತತ್ವ‌- ಸಿದ್ಧಾಂತಗಳು ಬಹಳ ಮುಖ್ಯವಾಗಿದೆ ಎಂದು ಕನ್ನಡ ಮತ್ತು ‌ಸಂಸ್ಕೃತಿ‌ ಇಲಾಖೆ ಸಚಿವ ಶಿವರಾಜ್.ಎಸ್.ತಂಗಡಗಿ ಅಭಿಪ್ರಾಯಪಟ್ಟರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾಡಳಿತದ ವತಿಯಿಂದ ಮೈಸೂರಿನ ಕಲಾಮಂದಿರದಲ್ಲಿ ಸೋಮವಾರ ಆಯೋಜಿಸಿದ್ದ ಬಸವ ಜಯಂತಿ  ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಬಸವಣ್ಣ ಅವರು ಜಾತಿ‌ ವ್ಯವಸ್ಥೆಗೆ ವಿರುದ್ಧವಾಗಿದ್ದವರು. ಅವರು ಎಲ್ಲ ಧರ್ಮ, ಜಾತಿ ಹಾಗೂ ಜನಾಂಗದವರನ್ನು ಒಂದೇ ರೀತಿಯಲ್ಲಿ ಕಾಣುತ್ತಿದ್ದರು. ಆದರೆ ಇಂದು ಧರ್ಮ ‌ಮತ್ತು ಜಾತಿಗಳ ನಡುವೆ ಕಂದಕ‌ ನಿರ್ಮಾಣ‌ ಮಾಡುವ ಷಡ್ಯಂತ್ರ‌‌ ನಡೆಯುತ್ತಿದೆ ಎಂದು ವಿಷಾಧ ವ್ಯಕ್ತಪಡಿಸಿದರು.‌

ಹಿಂದೆ ಅಧಿಕಾರಕ್ಕೆ ಬಂದ ಎಲ್ಲ ‌ಸರ್ಕಾರಗಳು ಕೇವಲ‌ ಬಾಯಿ‌ ಮಾತಿಗೆ ಮಾತ್ರ ಬವಸಣ್ಣ ಅವರ ವಚನಗಳನ್ನು‌ ಹೇಳುತ್ತಿದ್ದರು.‌ ಬಸವಣ್ಣ ಅವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಲು ಹಾಗೂ ಬಸವಣ್ಣ ಅವರ ಭಾವಚಿತ್ರಗಳನ್ನು ಎಲ್ಲಾ ಸರ್ಕಾರಿ‌ ಕಚೇರಿಗಳಲ್ಲಿ‌ ಕಡ್ಡಾಯವಾಗಿ ಅಳವಡಿಕೆ‌ ಮಾಡಬೇಕೆಂಬ ಆದೇಶ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಅಧಿಕಾರಕ್ಕೆ ಬರಬೇಕಾಯಿತು ಎಂದರು.

ಬಸವಣ್ಣ ಸಮ ಸಮಾಜ ನಿರ್ಮಾಣದ ಹರಿಕಾರ, ಜಗತ್ತಿಗೆ ಪ್ರಜಾಪ್ರಭುತ್ವದ ಅಡಿಪಾಯವನ್ನು ಹಾಕಿಕೊಟ್ಟ ರೂವಾರಿ, ಮಾನವ ಸಮಾನತಾವಾದಿ. ಪ್ರತಿಯೊಬ್ಬರು ಬಸವಣ್ಣ ಅವರ ತತ್ವ‌, ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆಯೋಣ  ಎಂದರು. 

More articles

Latest article

Most read