ವಸತಿ ಪ್ರದೇಶಕ್ಕೆ ಆಗಮಿಸಿದ ಚಿರತೆ, ಮನೆಯ ಮಂಚದ ಕೆಳಗೆ ಮಲಗಿದ್ದ ಚಿರತೆ ಸೆರೆ

ಮೈಸೂರು : ಕಾಡಿನಿಂದ ನಾಡಿಗೆ ಬಂದು ಚಿರತೆಗಳು  ಹಾದಿ-ಬೀದಿಯಲ್ಲಿ ಸಿಗುವ ಶ್ವಾನಗಳನ್ನು  ಹಿಡಿದು ಹೋಗುತ್ತಿದ್ದವು. ಆದರೆ ಈಗ ನಾಡಿನಲ್ಲಿ ಮನೆಗಳಿಗೂ ನುಗ್ಗಲಾರಂಭಿಸಿವೆ.

ಹೌದು… ಮೈಸೂರಿನ ಸಿದ್ದಾರ್ಥನಗರದ ವಿನಯ ಮಾರ್ಗದಲ್ಲಿ ಇರುವ ಸುರೇಶ್ ಎಂಬುವರ ಮನೆಗೆ ಬಂದು ಅಲ್ಲಿದ್ದ ಮಂಚದ ಕೆಳಗೆ ಸುಮಾರು 2.5 ವರ್ಷ ಪ್ರಾಯದ ಗಂಡು ಚಿರತೆ  ಸುಖ ನಿದ್ರೆಗೆ ಜಾರಿದ್ದ ಘಟನೆ ಶುಕ್ರವಾರ ಬೆಳಗ್ಗೆ ಪತ್ತೆಯಾಗಿದೆ.

ಮಂಚದ ಮೇಲೆ ಮನೆ ಮಾಲೀಕ ಸುರೇಶ್ ಅವರ ತಾಯಿ ಶೈಲಜಾ ಮಲಗಿದ್ದರು. ಇದರಡಿಯೇ ಚಿರತೆ ಸುಮಾರು 2 ಗಂಟೆ ಆಯಾಗಿ ಸುಖನಿದ್ರೆಗೆ ಜಾರಿತ್ತು. ಬೆಳಿಗ್ಗೆ 7:30 ರ ಸುಮಾರಿಗೆ ಚಿರತೆ ಮನೆಯೊಳಕ್ಕೆ  ಬಂದಿರಬಹುದು.  ಆದರೆ ಯಾರ ಗಮನಕ್ಕೂ ಬಂದಿಲ್ಲ. ಬೆಳಗ್ಗೆ  10  ರ ಸುಮಾರಿಗೆ ಮನೆ ಕೆಲಸದಾಕೆ  ಬಂದು ಕಸ ಗುಡಿಸುತ್ತಿದ್ದಾಗ ಮಂಚದ ಕೆಳಗೆ ಚಿರತೆ ಇರುವುದು ಗೊತ್ತಾಗಿದೆ.

ಕೂಡಲೇ ಸೊಗೆ ಸುಜಾತ ಅವರು ಮಂಚದ ಮೇಲೆ ಮಲಗಿದ್ದ  ಅತ್ತೆ ಶೈಲಜಾರನ್ನು ಕೊಠಡಿಯಿಂದ  ಹೊರಗೆ ಕರೆತಂದು ಕೊಠಡಿಯ ಬಾಗಿಲು ಬಂದ್ ಮಾಡಿದ್ದಾರೆ. ಸುದ್ದಿ ತಿಳಿದು ಕೂಡಲೇ ಸ್ಥಳಕ್ಕಾಗಮಿಸಿದ  ಅರಣ್ಯ ಇಲಾಖೆ ಸಿಬ್ಬಂದಿಗಳಿಂದ ಚಿರತೆ ಸೆರೆ ಹಿಡಿಯಲು ಕಾರ್ಯಾಚರಣೆ ನಡೆಸಿದರು.

ಎರಡು ಬಾರಿ ಅರವಳಿಕೆ ಚುಚ್ಚುಮದ್ದು ನೀಡಿ ಚಿರತೆಯನ್ನು  ಸೆರೆ ಹಿಡಿಯಲಾಯಿತು. ಅರಣ್ಯ ಇಲಾಖೆ ಎಸಿಎಫ್ ರವೀಂದ್ರ ಹಾಗೂ ಚಾಮರಾಜೇಂದ್ರ ಮೃಗಾಲಯದ ಪಶುವೈದ್ಯಾಧಿಕಾರಿ ಶಶಿಕುಮಾರ್ ಸಮ್ಮುಖದಲ್ಲಿ ಕಾರ್ಯಾಚರಣೆ ಯಶಸ್ವಿಯಾಗಿ ನಡೆಯಿತು..ಸೆರೆ ಹಿಡಿದ ಚಿರತೆ ಕೂರ್ಗಳ್ಳಿ ಪುನರ್ವಸತಿ ರವಾನೆ ಮಾಡಲಾಯಿತು..

ಜನದಟ್ಟಣೆ ವಸತಿ ಪ್ರದೇಶಕ್ಕೆ ಬಂದ ಚಿರತೆ: ಸಿದ್ಧಾರ್ಥನಗರ ಬಡಾವಣೆ ಚಾಮುಂಡಿ ಬೆಟ್ಟದ ಸಮೀಪದಲ್ಲಿ ಇದೆ. ಆದರೆ ಈ ಬಡಾವಣೆ ಈಗ ಜನದಟ್ಟಣೆಯಿಂದ ಕೂಡಿದೆ. ಜನರ ಜೊತೆಗೆ ವಾಹನಗಳು ಹಗಳಿರುಳು ಸಂಚಾರಿಸುತ್ತವೆ. ಬಡಾವಣೆ ಉತ್ತರಕ್ಕೆ ಬನ್ನೂರು ರಸ್ತೆ,  ಟಿ. ನರಸೀಪುರಕ್ಕೆ ಹೋಗುವ ರಸ್ತೆಗಳು ಇವೆ. ಈ ರಸ್ತೆಗಳಲ್ಲಿ ವಾಹನಗಳು ಅಪಾರ ಸಂಖ್ಯೆಯಲ್ಲಿ ಸಂಚಾರಿಸುತ್ತವೆ.

ಜನರಲ್ಲಿ ಆತಂಕ : ಆದರೂ ಬೆಳಗ್ಗೆ ಹೊತ್ತು ಚಿರತೆ ಬಂದಿದ್ದಾದರೂ ಹೇಗೆ  ಏಕೆ  ಬಂತು ಎಂಬ ಆತಂಕ ಜನರಲ್ಲಿ ಉಂಟಾಗಿದೆ. ಚಾಮುಂಡಿಬೆಟ್ಟದ ಕಲ್ಲುಬಂಡೆಗಳಲ್ಲಿ ವಾಸ ಮಾಡುವ ಚಿರತೆಗೆ ಬೆಟ್ಟ ಅಜುಬಾಜಿನಲ್ಲಿ ಇರುವ ಗುಂಡುರಾವ್‌, ಗೌರಿಶಂಕರ ನಗರ ಬಡಾವಣೆಗಳಲ್ಲಿ ನಡುರಾತ್ರಿ ಹೋಗಿ ನಾಯಿಗಳನ್ನು ಹಿಡಿದು ತಿನ್ನುವುದು ಸಾಮಾನ್ಯ ಎಂಬಂತಾಗಿತ್ತು. ಈಗ ಜನದಟ್ಟಣೆ ಇರುವ ಬಡಾವಣೆ ಮನೆಗೆ ಅದೂ ಹಾಡುಹಗಲಿನಲ್ಲೇ ನುಗ್ಗಿ ಭಯವಿಲ್ಲದೇ ಚಿರತೆ ನಿದ್ರೆ ಮಾಡುತ್ತಿರುವ ಘಟನೆ ನೀಡಿರುವ ಜನತೆಯಲ್ಲಿ ಆತಂಕವನ್ನು ಉಂಟು ಮಾಡಿದೆ.
ಮನೆಗೆ ಬಂದರೂ ಮನೆಯೊಳಗಿನ ಮಂದಿಗೆ ತೊಂದರೆ ಮಾಡಿಲ್ಲ.

ಆಶ್ಚರ್ಯ ಸಂಗತಿ ಎಂದರೆ ಮನೆಗೆ ನುಗ್ಗಿ ಕೊಠಡಿಯಲ್ಲಿ ಇದ್ದ ಮಂಚದ ಕೆಳಗೆ ಹೋಗಿ ನಿದ್ರೆ ಮಾಡಿದೆ. ಮಂಚದ ಮೇಲೆ ಮಲಗಿದ್ದ ವೃದ್ಧೆಯ ಮೇಲೆ ದಾಳಿ ನಡೆಬಹುದಿತ್ತು ಅಥವಾ ತಮ್ಮ ಪತಿಯ ತಾಯಿಯನ್ನು ಕೊಠಡಿಯಿಂದ ಕರೆದುಕೊಂಡು ಹೋಗಲು ಬಂದ ಸೊಸೆ ಮೇಲೂ ದಾಳಿ ಮಾಡಬಹುದಿತ್ತು. ಆದರೆ ದಾಳಿ ಮಾಡಿಲ್ಲ.

ಬೇಟೆ ವಿಳಂಬವಾಯ್ತ : ರಾತ್ರಿ ನಾಡಿಗೆ ಬಂದ ಚಿರತೆ ಬೇಟೆ ಯಾವುದು ಸಿಗದೆ ವಿಳಂಬವಾಗಿ, ಸೂರ್ಯನ ಬೆಳಕು ಹೆಚ್ಚಾಗುತ್ತಿದ್ದಂತೆ ಸಂಚರಿಸಲು ಕಷ್ಟವಾಗಿ ಹೋಗುವ ಮಾರ್ಗದಲ್ಲಿ ಸಿಕ್ಕ ಮನೆಗೆ ಚಿರತೆ ನುಗ್ಗಿರಬಹುದು ಎಂದು ಶಂಕಿಸಲಾಗಿದೆ.

More articles

Latest article

Most read