ಆರ್‌ಸಿಬಿ ವಿರುದ್ಧ ಬಿಸಿಸಿಐಗೆ ಸಿಎಸ್‌ಕೆ ದೂರು ನೀಡಿದ್ದು ಈ ಕಾರಣಕ್ಕೆ…

ಬೆಂಗಳೂರು :  ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಈ ಸೀಸನ್‌ನಲ್ಲಿ ಉತ್ತಮ ಆಟ ತೋರಿದ್ದು, ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ. 

ಆರ್‌ಸಿಬಿ ತವರು ಮೈದಾನದಲ್ಲಿ ಆಡಿರುವ ಪಂದ್ಯಗಳನ್ನೆಲ್ಲಾ ಗೆದ್ದುಕೊಂಡಿದೆ. ಆದರೆ, ಸಾಂಪ್ರಾದಾಯಿಕ ಎದುರಾಳಿ ತಂಡ ಸಿಎಸ್‌ಕೆ, ಬಿಸಿಸಿಐಗೆ ಆರ್‌ಸಿಬಿ ವಿರುದ್ಧ ದೂರು ನೀಡಿದೆ.

ಏಪ್ರಿಲ್ 5 ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಡಿಜೆ ಹಾಡು ಆಯ್ಕೆ ಮತ್ತು ಕಾಮೆಂಟ್‌ಗಳ ಬಗ್ಗೆ ಇಂಡಿಯನ್ ಪ್ರೀಮಿಯರ್ ಲೀಗ್ ಫ್ರಾಂಚೈಸಿ ಚೆನ್ನೈ ಸೂಪರ್ ಕಿಂಗ್ಸ್ ಬಿಸಿಸಿಐಗೆ ದೂರು ನೀಡಿದೆ.

ಸಿಎಸ್‌ಕೆ ಪ್ರಕಾರ, ದಕ್ಷಿಣ ಭಾರತದ ಸ್ಟೀರಿಯೊಟೈಪ್‌ಗಳ ಬಗ್ಗೆ ಜನಪ್ರಿಯ ಹಿನ್ನೆಲೆ ಸಂಗೀತವಾದ ‘ದೋಸೆ, ಇಡ್ಲಿ, ಸಾಂಬಾರ್, ಚಟ್ನಿ, ಚಟ್ನಿ’ ಟ್ರ್ಯಾಕ್ ಅನ್ನು ನುಡಿಸುವುದು ಒಳ್ಳೆಯ ಬೆಳವಣಿಗೆ ಅಲ್ಲ ಎಂದು ಹೇಳಿದೆ. 

ಈ ಬೆಳವಣಿಗೆಯನ್ನು ಐಪಿಎಲ್‌ನ ಆಡಳಿತ ಮಂಡಳಿಯ  ಉನ್ನತ ಅಧಿಕಾರಿಯೊಬ್ಬರು ಈ ವಿಷಯವನ್ನು ಪರಿಶೀಲಿಸುತ್ತಿದ್ದಾರೆ ಎನ್ನಲಾಗಿದೆ.  

ಸಿಎಸ್‌ಕೆ ವ್ಯವಸ್ಥಾಪಕ ನಿರ್ದೇಶಕ ಕಾಸಿ ವಿಶ್ವನಾಥನ್ ಮಾಧ್ಯಮಕ್ಕೆ ಹೇಳಿರುವ ಪ್ರಕಾರ,  “ಡಿಜೆಗಳು ಸಾಮಾನ್ಯವಾಗಿ ತವರು ತಂಡವನ್ನು ಬೆಂಬಲಿಸಲು ಇರುತ್ತಾರೆ. ಆದರೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ, ಅದು ವಿಭಿನ್ನವಾಗಿತ್ತು. ನಮ್ಮ ಆಟಗಾರರ ವಿರುದ್ಧ ಕೆಲವು ಕಾಮೆಂಟ್‌ಗಳನ್ನು ಮಾಡಲಾಗಿದೆ. ಇದನ್ನು ಪರಿಗಣಿಸಿ, ಅದನ್ನು ಪರಿಶೀಲಿಸಲು ನಾವು ಬಿಸಿಸಿಐಗೆ ಪತ್ರ ಬರೆದಿದ್ದೇವೆ ಎಂದಿದ್ದಾರೆ”

ಮ್ಯೂಸಿಕ ಡೈರೆಕ್ಟರ್‌ ಗಾನ ಅಪ್ಪು ಅವರು ಸಂಯೋಜಿಸಿರುವ ಈ ಹಾಡು ಎರಡೂ ತಂಡಗಳನ್ನು ದೀರ್ಘಕಾಲದ ಸಂಬಂಧ ಹೊಂದಿರುವಂತೆ ಮಾಡಿದೆ. ಆದರೆ, ಅಭಿಮಾನಿಗಳು ಇದನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಳಸಿಕೊಳ್ಳುತ್ತಿರುವ ಬಗ್ಗೆ ಅಸಮಾಧಾನವಿದೆ.
ಸಿಎಸ್‌ಕೆ ತಂಡದ ಆಟಗಾರರು ಔಟಾದ ನಂತರದ ಡಿಜೆ ಹಾಗೂ ಕಾಮೆಂಟ್‌ಗಳು ಆಟಗಾರರನ್ನು ಕುಗ್ಗಿಸುವಂತಿತ್ತು. ಅವರನ್ನು ಅವಮಾನ ಮಾಡುವ ರೀತಿಯಲ್ಲಿದ್ದವು ಎಂದು ತಂಡ ಹೇಳಿದೆ.

More articles

Latest article

Most read