ಬಿಹಾರ ನೂತನ ಸಿಎಂ ಆಗಿ ಸಾಮ್ರಾಟ್ ಚೌಧರಿ ಆಯ್ಕೆ

ಪಾಟ್ನಾ : ಬಿಹಾರದ ನೂತನ ಮುಖ್ಯಮಂತ್ರಿಯಾಗಿ ಸಾಮ್ರಾಟ್ ಚೌಧರಿ ಆಯ್ಕೆಯಾಗಿದ್ದಾರೆ.  ರಾಜ್ಯದಲ್ಲಿ ಉನ್ನತ ಹುದ್ದೆ ಅಲಂಕರಿಸಿದ ಮೊದಲ ಬಿಜೆಪಿ ನಾಯಕರಾಗಿದ್ದಾರೆ. ಪ್ರಮಾಣವಚನ ಸಮಾರಂಭ ನಾಳೆ ನಡೆಯಲಿದೆ ಎನ್ನಲಾಗಿದೆ. 

ಇಂದು ಮುಂಜಾನೆ, ಈಗ ರಾಜ್ಯಸಭಾ ಸದಸ್ಯರಾಗಿರುವ ನಿತೀಶ್ ಕುಮಾರ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. 

ಬಿಹಾರದ ಉಪ ಮುಖ್ಯಮಂತ್ರಿಯಾಗಿದ್ದ 57 ವರ್ಷದ ಸಾಮ್ರಾಟ್‌ ಚೌಧರಿ, ರಾಜ್ಯದ ಪ್ರಮುಖ ಹಿಂದುಳಿದ ವರ್ಗ  ಸಮುದಾಯವಾದ ಕೊಯೇರಿ ಅಥವಾ ಕುಶ್ವಾಹ ಜಾತಿಗೆ ಸೇರಿದವರು. ಹಿಂದುಳಿದ ಜಾತಿಗಳಲ್ಲಿ, ಕುಶ್ವಾಹ ಸಮುದಾಯವು ಯಾದವರ ನಂತರ ಅತಿ ದೊಡ್ಡದಾಗಿದೆ. ಮೂಲಗಳ ಪ್ರಕಾರ, ನಿತೀಶ್ ಕುಮಾರ್ ಅವರ ಜೆಡಿ(ಯು) ಈ ಜಾತಿ ಗುಂಪಿನಿಂದ ಮುಖ್ಯಮಂತ್ರಿಯನ್ನು ನೇಮಿಸುವಂತೆ ಬಿಜೆಪಿಯನ್ನು ಕೇಳಿಕೊಂಡಿತ್ತು ಎನ್ನಲಾಗಿದೆ. 

1990 ರಲ್ಲಿ ಸಕ್ರಿಯ ರಾಜಕೀಯಕ್ಕೆ ಪ್ರವೇಶಿಸಿದ ಚೌಧರಿ, ಲಾಲು ಯಾದವ್ ಅವರ ಆರ್‌ಜೆಡಿಯಿಂದ ನಿತೇಶ್ ಅವರ ಜೆಡಿಯುಗೆ ಮತ್ತು ಅಂತಿಮವಾಗಿ 2017 ರಲ್ಲಿ ಬಿಜೆಪಿಗೆ ಸೇರುವವರೆಗೆ ಅನೇಕ ಬದಲಾವಣೆಗಳನ್ನು ಮಾಡಿದ್ದಾರೆ.

More articles

Latest article

Most read