ಗುವಾಹಟಿ : ಐಪಿಎಲ್ 2026 ಪಂದ್ಯದ ನಂತರ ರಾಜಸ್ಥಾನ್ ರಾಯಲ್ಸ್ ತಂಡದ ಯುವ ಆಟಗಾರ ವೈಭವ್ ಸೂರ್ಯವಂಶಿ ಪರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ ನಡೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
15 ವರ್ಷದ ಸೂರ್ಯವಂಶಿ ಕೇವಲ 26 ಎಸೆತಗಳಲ್ಲಿ 78 ರನ್ ಗಳಿಸಿ ತಂಡವನ್ನು ಆರು ವಿಕೆಟ್ಗಳ ಅಂತರದಿಂದ ಗೆಲುವಿನತ್ತ ಕೊಂಡೊಯ್ದರು. 203 ರನ್ಗಳ ಅದ್ಭುತ ಮೊತ್ತವನ್ನು ಬೆನ್ನಟ್ಟಿದ ಸೂರ್ಯವಂಶಿ, ಆರ್ಆರ್ ತಂಡ ಒತ್ತಡಕ್ಕೆ ಒಳಗಾಗದಂತೆ ಸ್ಕೋರ್ ಗಳಿಸಿದರು ಮತ್ತು ಅವರ ಅದ್ಭುತ ಬ್ಯಾಟಿಂಗ್ ಗೆ ಐಪಿಎಲ್ ಆರೆಂಜ್ ಕ್ಯಾಪ್ ತಂದುಕೊಟ್ಟಿತು.
ಪಂದ್ಯ ಮುಗಿದ ನಂತರ, ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ , ವೈಭವ್ ಸೂರ್ಯವಂಶಿಗೆ ಕ್ಯಾಪ್ಗೆ ಒಂದು ಸಣ್ಣ ಸಂದೇಶವನ್ನು ಬರೆದರು. “ಪ್ರಿಯ ವೈಭವ್, ಚೆನ್ನಾಗಿ ಆಡಿದ್ದೀರಿ,” ಕೊಹ್ಲಿ ಎಂದು ಸೂರ್ಯವಂಶಿಗಾಗಿ ಬರೆದರು.
ಐಪಿಎಲ್ ಇತಿಹಾಸದಲ್ಲಿ ಎರಡು ಬಾರಿ 15 ಅಥವಾ ಅದಕ್ಕಿಂತ ಕಡಿಮೆ ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ಮೊದಲ ಭಾರತೀಯ ಬ್ಯಾಟರ್ ಎಂಬ ದಾಖಲೆಯನ್ನು ವೈಭವ್ ಸೂರ್ಯವಂಶಿ ತಮ್ಮದಾಗಿಸಿಕೊಂಡಿದ್ದಾರೆ. ಈ ಹಿಂದೆ ಸಿಎಸ್ಕೆ ವಿರುದ್ಧ 15 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ್ದ ವೈಭವ್ ಇದೀಗ ಆರ್ಸಿಬಿ ವಿರುದ್ಧ ಕೂಡ 15 ಎಸೆತಗಳಲ್ಲೇ ಅರ್ಧಶತಕ ಪೂರೈಸಿ ಈ ದಾಖಲೆ ನಿರ್ಮಿಸಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಅರ್ಧಶತಕ ಸಿಡಿಸಿದ ಅತ್ಯಂತ ಕಿರಿಯ ಬ್ಯಾಟರ್ ಎಂಬ ಹೆಗ್ಗಳಿಕೆಗೂ ಕೂಡ ವೈಭವ್ ಸೂರ್ಯವಂಶಿ ಪಾತ್ರರಾಗಿದ್ದಾರೆ. ತಮ್ಮ 15ನೇ ವಯಸ್ಸಿನಲ್ಲಿ ಸ್ಫೋಟಕ ಅರ್ಧಶತಕ ಸಿಡಿಸಿ ವೈಭವ್ ಈ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ಈ ಮೂಲಕ, ಬೌಲರ್ ಯಾರೇ ಇರಲಿ, ನನ್ನ ಗುರಿ ಚೆಂಡಿನ ಮೇಲಷ್ಟೇ ಎಂದಿದ್ದಾರೆ. ಈ ಮೂಲಕ ತಾನು ಯಾವುದೇ ಬೌಲರ್ನ ನೋಡಿ ಹೆದರಲ್ಲ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.
15 ವರ್ಷದ ವೈಭವ್ ಸೂರ್ಯವಂಶಿ ಎಲ್ಲರೂ ಪ್ರೀತಿಸುವ ಮತ್ತು ಇಷ್ಟಪಡುವ ವ್ಯಕ್ತಿ ಎಂದು ರಾಜಸ್ಥಾನ್ ರಾಯಲ್ಸ್ ನಾಯಕ ರಿಯಾನ್ ಪರಾಗ್ ಹೊಗಳಿದ್ದಾರೆ.

