ಬೆಂಗಳೂರು: ಇಂದು ಪ್ರಕಟಗೊಂಡಿರುವ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶದಲ್ಲಿ ಉತ್ತಮ ಫಲಿತಾಂಶ ಬಂದಿರುವ ಸೂಚನೆ ಇದೆ.
ದಕ್ಷಿಣ ಕನ್ನಡ ಜಿಲ್ಲೆಯ ಆಳ್ವಾಸ್ ಕಾಲೇಜು ವಿದ್ಯಾರ್ಥಿನಿ ದಿಶಾ 600ಕ್ಕೆ 600 ಅಂಕ ಪಡೆದು ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.
ವಿಜಯನಗರ ಜಿಲ್ಲೆಯ ಕೊಟ್ಟೂರಿನ ಇಂದೂ ಪಿಯು ಕಾಲೇಜಿನ ಕಲಾ ವಿಭಾಗದ ಇಬ್ಬರು ವಿದ್ಯಾರ್ಥಿನಿಯರು 598 ಅಂಕಗಳನ್ನು ಪಡೆಯುವ ಮೂಲಕ ದ್ವಿತೀಯ ಸ್ಥಾನ ಹಂಚಿಕೊಂಡಿದ್ದಾರೆ.
ಕೊಟ್ಟೂರಿನ ಇಂದೂ ಪಿಯು ಕಾಲೇಜಿನ ಇಬ್ಬರು ವಿದ್ಯಾರ್ಥಿನಿಯರಾದ ಸಂಗೀತಾ ಹಾಗೂ ಅರ್ಚನಾ ಕಲಾ ವಿಭಾಗದಲ್ಲಿ ತಲಾ 598 ಅಂಕ ಪಡೆದು ಸಾಧನೆ ಮಾಡಿದ್ದಾರೆ.
ಅನಿಶ್ ರಾಜುಗೆ ವಿಜ್ಞಾನ ವಿಭಾಗದಲ್ಲಿ 583 ಅಂಕ, 97 ಪರ್ಸೆಂಟೇಜ್ ಪಡೆದು ಉತ್ತೀರ್ಣರಾದ ಅನೀಶ್ ಜಯನಗರ ನ್ಯಾಷನಲ್ ಕಾಲೇಜಿನ ವಿದ್ಯಾರ್ಥಿ.
600 ಅಂಕಗಳಿಗೆ 590 ಅಂಕ ಪಡೆದ ಜೀವಿತ್ ಗೌಡ, ವಿಜ್ಞಾನ ವಿಭಾಗದಲ್ಲಿ 590 ಅಂಕ, ಶೇಕಾಡ 98.3% ಅಂಕ ಗಳಿಕೆ. ಜೀವಿತ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ.
ವಾಣಿಜ್ಯ ವಿಭಾಗದಲ್ಲಿ 600/596 ಅಂಕ ಪಡೆದ ಹರ್ಷಿತಾ ಕೆ ಗೌಡ – ಬೆಂಗಳೂರಿನ ಬಿಎಂಎಸ್ ಕಾಲೇಜ್



