ನಿತೇಶ್ ತಿವಾರಿ ಅವರ ಬಹುನಿರೀಕ್ಷಿತ ರಾಮಾಯಣ ಸಿನಿಮಾ ಟೀಸರ್ ಬಿಡುಗಡೆಯಾಗಿದೆ. ಈ ಟೀಸರ್ ನಲ್ಲಿ ಪ್ರೇಕ್ಷಕರಿಗೆ ರಣಬೀರ್ ಕಪೂರ್ ಅವರ ಭಗವಾನ್ ರಾಮನ ಮೊದಲ ಮತ್ತು ಹಲವು ನೋಟವನ್ನು ಪರಿಚಯಿಸಲಾಗಿದೆ.
ರಣಬೀರ್ ಕಪೂರ್ ಪೌರಾಣಿಕ ರಾಮನ ಪಾತ್ರದಲ್ಲಿ ಸಮತೋಲನ, ಸೊಬಗು, ಶಾಂತತೆ ಮತ್ತು ದಿವ್ಯ ವೈಭವ ಹಾಗೂ ಪಟ್ಟಾಭಿಷೇಕದಿಂದ ಪಂಚವಟಿ ಕಾಡಿನಲ್ಲಿ ವನವಾಸದವರೆಗೆ ಹೆಜ್ಜೆ ಹಾಕುವ ದೃಶ್ಯಗಳು ಮನಮುಟ್ಟುವಂತಿದೆ. ಟೀಸರ್‌ನ ಕೊನೆಯಲ್ಲಿ ರಾಯ (ರಾವಣ) ಪಾತ್ರದಲ್ಲಿ ಯಶ್ ನಟಿಸಿದ್ದು, ಅವರು ನಡೆದು ಗೋಗುವ ಹಿಂಬದಿಯ ನೋಟವಿದೆ.
ರಾಮಾಯಣ ಚಿತ್ರವನ್ನು 4,000 ಕೋಟಿ ರೂಪಾಯಿಗಳ ಬೃಹತ್ ಬಜೆಟ್‌ನಲ್ಲಿ ನಿರ್ಮಿಸಲಾಗಿದೆ. ನಿರ್ಮಾಪಕ ನಮಿತ್ ಮಲ್ಹೋತ್ರಾ, “ನಾವು ಆರು ಅಥವಾ ಏಳು ವರ್ಷಗಳ ಹಿಂದೆ ಇದನ್ನು ಮಾಡಲು ಹೊರಟಾಗ, ಈ ಪ್ರಮಾಣದ ಬಜೆಟ್ ನಲ್ಲಿ ಭಾರತೀಯ ಸಿನಿಮಾ ಮಾಡುವುದರ ಬಗ್ಗೆ ಜನರು ನನ್ನನ್ನು ಹುಚ್ಚ ಎಂದು ಭಾವಿಸಿದ್ದರು. ಸರಳವಾಗಿ ಹೇಳುವುದಾದರೆ, ಎರಡೂ ಭಾಗಗಳಿಗೆ ಬಜೆಟ್ ಸುಮಾರು $500 ಮಿಲಿಯನ್ ಆಗಿರುತ್ತದೆ, ಇದು 4,000 ಕೋಟಿ ರೂಪಾಯಿಗಳಿಗಿಂತ ಹೆಚ್ಚು ಎಂದಿದ್ದಾರೆ.
“ಜಾಗತಿಕವಾಗಿ ಈ ಸಿನಿಮಾ ನೋಡಲು ಮಹಾಕಾವ್ಯಕ್ಕಾಗಿ ನಾವು ವಿಶ್ವದ ಅತಿದೊಡ್ಡ ಚಿತ್ರವನ್ನು ನಿರ್ಮಿಸುತ್ತಿದ್ದೇವೆ. ಆದರೂ, ನಾವು ಅದನ್ನು ಕೆಲವು ದೊಡ್ಡ ಹಾಲಿವುಡ್ ಚಿತ್ರಗಳಿಗಿಂತ ಹೆಚ್ಚು ಪರಿಣಾಮಕಾರಿಯಾಗಿ ಮಾಡುತ್ತಿದ್ದೇವೆ ಎಂದು ನಾನು ನಂಬುತ್ತೇನೆ ಎಂದು ತಿಳಿಸಿದ್ದಾರೆ.
ಎಆರ್ ರೆಹಮಾನ್ ಮತ್ತು ಆಸ್ಕರ್ ಪ್ರಶಸ್ತಿ ವಿಜೇತ ಹ್ಯಾನ್ಸ್ ಜಿಮ್ಮರ್ ಈ ಯೋಜನೆಯಲ್ಲಿ ಮೊದಲ ಬಾರಿಗೆ ಸಹಕರಿಸಿದ್ದಾರೆ.
ಈ ಚಿತ್ರವು ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದೆ, ಮೊದಲ ಭಾಗವು ದೀಪಾವಳಿಗೆ ಮುಂಚಿತವಾಗಿ ಅಕ್ಟೋಬರ್ 2026 ರಲ್ಲಿ ವಿಶ್ವಾದ್ಯಂತ ಬಿಡುಗಡೆಯಾಗಲಿದೆ, ಆದರೆ ಎರಡನೇ ಭಾಗವು 2027 ರ ದೀಪಾವಳಿಗೆ ಬಿಡುಗಡೆಯಾಗಲಿದೆ.
ರಣಬೀರ್ ಕಪೂರ್ ಜೊತೆಗೆ, ಸಾಯಿ ಪಲ್ಲವಿ, ಸನ್ನಿ ಡಿಯೋಲ್, ರವಿ ದುಬೆ ಮತ್ತು ಯಶ್ ಚಿತ್ರದಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ.

