ವಿಶ್ವಗುರುವಿನ ರಾಸಲೀಲಾ ವಿನೋದ

ತಮ್ಮ ಆರಾಧ್ಯ ದೈವವಾದ ವಿಶ್ವಗುರುವಿನ ಮೇಲೆ ಇಂತಹುದೊಂದು ಆರೋಪ ಕೇಳಿ ಬರುತ್ತದೆ ಎಂದು ಅಂಧಭಕ್ತಾದಿಗಳು ಎಂದೂ ಅಂದುಕೊಂಡಿರಲಿಲ್ಲ. ಶ್ರೀರಾಮನ ಮಹಾಭಕ್ತನ ಮೇಲೆ ರಾಮನವಮಿಯಂದೇ ಶ್ರೀಕೃಷ್ಣಾವತಾರದ ಆರೋಪ ಹೊರಿಸಲಾಗುತ್ತದೆ ಎಂಬುದನ್ನು ಅಂಧಭಕ್ತಾಸುರರಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಗೋದಿ ಮಾಧ್ಯಮಗಳಿಗಂತೂ ಈ ಸೆಕ್ಸ್ ಸ್ಕ್ಯಾಂಡಲ್‌ ಆರೋಪದ ಕುರಿತು ಉಸಿರೆತ್ತುವ ಧೈರ್ಯ ಸಾಲುತ್ತಿಲ್ಲ. ಸೊಲ್ಲೆತ್ತಲು ಚಾನೆಲ್ ಮಾಲೀಕರು ಬಿಡುವುದೂ ಇಲ್ಲ.

ಯಾಕೆಂದರೆ ಹೆಣ್ಣುಬಾಕ ಎನ್ನುವ ಆರೋಪ ಬಂದಿರುವುದು ಸ್ವಯಂಘೋಷಿತ ವಿಶ್ವಗುರು ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಮೇಲೆ. ದೇಶ ಸೇವೆಗಾಗಿ ಹೆಂಡತಿಯನ್ನೇ ಬಿಟ್ಟು ರಾಷ್ಟ್ರಕ್ಕಾಗಿ ಬದುಕನ್ನು ಮೀಸಲಿಟ್ಟಿದ್ದಾರೆಂದು ಅಂಧಭಕ್ತರು ಹೇಳಿಕೊಳ್ಳುವ ದೇವಧೂತ ಅಜೈವಿಕ ನಿಷ್ಕಳಂಕ ಅವತಾರ ಪುರುಷನ ಮೇಲೆ.

ಎಲ್ಲದರೂ ಉಂಟಾ. ರಾಮಬಂಟನಿಗೆ ಸ್ತ್ರೀಲೋಲನೆಂದು ಆರೋಪಿಸುವುದರಲ್ಲಿ ಏನಾದರೂ ಸತ್ಯ ಇದೆಯಾ? ಇದು ವಿರೋಧ ಪಕ್ಷಗಳ ಶಡ್ಯಂತ್ರ, ಆಗದವರ ಕುತಂತ್ರ ಎಂದು ವಾದಿಸಿ ಗೆಲ್ಲಬಹುದಾಗಿತ್ತೇನೋ. ಬೇರೆ ಯಾರಾದರೂ ಹೀಗೆ ಮೋದಿಯವರ ಚಾರಿತ್ರ್ಯಕ್ಕೆ ಕಳಂಕ ತರುವ ಪ್ರಯತ್ನ ಮಾಡಿ ವ್ಯಭಿಚಾರಿ ಎಂದು ತಪ್ಪಾಗಿ ಹೇಳಿ ಮಸಿ ಮೆತ್ತಿದರೆ ಭಕ್ತಗಣ ಸುಮ್ಮನೇ ಬಿಟ್ಟೀತೆ?, ಟು ರುಪೀಸ್ ಗುಲಾಮ ಟ್ರೋಲಿಗರು ಮೌನವಾಗಿರಲು ಆದೀತೆ?

ಆದರೆ ಮೋದಿಯವರ ಮೇಲೆ ಇಂತಹುದೊಂದು ಹೆಣ್ಣುಬಾಕತನದ ಆರೋಪವನ್ನು ಮಾಡಿದ್ದು ಮೋದಿಯ ಬಿಜೆಪಿ ಪಕ್ಷದವರೇ, ಒಂದು ಕಾಲದ ಅವರ ಹೊಗಳುಬಟ್ಟರಾಗಿದ್ದವರೇ. ಹೀಗಾಗಿ ಮಬ್ಬಕ್ತರಿಗೆ, ಟ್ರೋಲಿಗರಿಗೆ, ಸಂಘಿಗಳಿಗೆ ಗೋದಿ ಮೀಡಿಯಾದವರಿಗೆ ಬಾಯಿ ಬಿಡಲಾಗದ ಸಂಕಷ್ಟ ಒದಗಿ ಬಂದಿದೆ.

ಎಫ್ಸ್ಟೀನ್ ಫೈಲ್ ಹಗರಣದಲ್ಲೂ ಮೋದಿ ಹೆಸರು ಕೇಳಿ ಬಂದಿತ್ತು. ಆದರೆ ಇನ್ನೂ ಆ ಕುರಿತು ದಾಖಲೆಗಳು ಬಿಡುಗಡೆ ಆಗದೇ ಇರುವುದರಿಂದ, “ನಾನು ಬಯಸಿದರೆ ಮೋದಿಯವರ ರಾಜಕೀಯ ಭವಿಷ್ಯವನ್ನೇ ಹಾಳು ಮಾಡಬಲ್ಲೆ” ಎಂದು ಟ್ರಂಪ್ ಬ್ಲಾಕ್‌ಮೇಲ್ ಮಾಡಿದ್ದರಿಂದ ಎಪ್ಸ್ಟೀನ್ ಸೆಕ್ಸ್ ಸ್ಕ್ಯಾಂಡಲ್ಲಿನಲ್ಲಿ ಮೋದಿಯವರ ಪಾತ್ರ ಇರಬಹುದೆಂದು ಊಹಿಸಲಾಗಿತ್ತು. ಆದರೆ ಈ ಟ್ರಂಪ್ ದಾಖಲೆಗಳನ್ನು ಬಿಡುಗಡೆ ಮಾಡದೇ ಇರುವುದರಿಂದ ಊಹೆ ಊಹೆಯಾಗಿಯೇ ಉಳಿಯಿತು. ಆದರೂ ಮೋದಿಯವರ ಸುತ್ತ ಎಪ್ಸ್ಟೀನ್ ಅನುಮಾನಗಳ ಹುತ್ತ ಬೆಳೆದಿತ್ತು. ವಿರೋಧ ಪಕ್ಷಗಳ ಆರೋಪಕ್ಕೂ ಕಾರಣವಾಗಿತ್ತು.

ಡಾ.ಮಧು ಪೂರ್ಣಿಮಾ ಕಿಷ್ವಾರ್ ರವರು ಟ್ವೀಟ್

* 2014ರ ಮೇನಲ್ಲಿ ಮೋದಿಯವರು ಅಧಿಕಾರ ಸ್ವೀಕರಿಸಿದ ನಂತರದಲ್ಲೆ ನಾನೇಕೆ ಅವರಿಂದ ಸುರಕ್ಷಿತ ಅಂತರವನ್ನು ಕಾಯ್ದುಕೊಂಡೆ ಎಂಬುದನ್ನು ನನ್ನ ಈ ಬರಹ ವಿವರಿಸುತ್ತದೆ.

* ಅವರ ಬಗ್ಗೆ ನಾನು ಬರೆದ ಪುಸ್ತಕದ ಪ್ರತಿಯನ್ನು ಕೊಡಲು ಕೂಡ ನಾನು ಅವರನ್ನು ಭೇಟಿ ಮಾಡಲಿಲ್ಲ. ಸಹಿ ಮಾಡದ ಪ್ರತಿಯನ್ನು ಅವರ ಮೆಚ್ಚಿನ ಅಧಿಕಾರಿಯಾದ ಭಾರತ್ ಲಾಲ್ ಮೂಲಕ ಕಳುಹಿಸಿದ್ದೆ.

* ಮೋದಿ ಅವರೊಂದಿಗೆ ಆಪ್ತ ಸಂಬಂಧ ಹೊಂದಿದ್ದ ಕಾರಣದಿಂದಾಗಿ ಕೆಲವು ಮಹಿಳೆಯರು ಸಂಸದರಾಗಿ, ಸಚಿವರೂ ಆಗಿ ಆಯ್ಕೆಯಾದ ಬಗ್ಗೆ ಆರಂಭದಲ್ಲೇ ಸಂಘದ ವಲಯಗಳಲ್ಲಿ ಗುಸುಗುಸು ಮಾತಿನಲ್ಲೇ ಕೇಳಿಬಂದವು. ಅದಕ್ಕಾಗಿ ನಾನು ತುಂಬಾ ಬೇಗ ಎಚ್ಚರಳಾದೆ. ಅವರಿಂದ ದೂರ ಉಳಿದೆ.

* ಮೋದಿಯವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಅವರಿಗೆ “ವಿಶೇಷ ಸೇವೆ”ಗಳನ್ನು ನೀಡಿದ್ದ ಹರ್ದೀಪ್ ಪುರಿ ಮತ್ತು ಜೈಶಂಕರ್ ಅವರು ಸಚಿವ ಸಂಪುಟದಲ್ಲಿ ಸೇರಿದ ನಂತರ ಆ ಗುಸುಗುಸು ಮತ್ತಷ್ಟು ಜೋರಾಯ್ತು.

* 2014ರಲ್ಲಿ ನಾನು ಉಪನ್ಯಾಸಗಳಿಗಾಗಿ ಅಮೇರಿಕಾಗೆ ಹೋದಾಗಲೂ, ಅವರ ಅನೈತಿಕ (ಐಯ್ಯಾಶಿಯ) ಕಥೆಗಳು ಅಲ್ಲಿಯೂ ಹರಡುತ್ತಿದ್ದವು.

* 12ನೇ ತರಗತಿ ಪಾಸ್ ಆಗಿದ್ದ ಸ್ಮೃತಿ ಇರಾನಿಯನ್ನು ಶಿಕ್ಷಣ ಸಚಿವೆಯಾಗಿ ನೇಮಕ ಮಾಡಿದ್ದುದು, ಜನರಿಂದ ಮುಚ್ಚಿಡಲಾಗಿದ್ದ ಅಂತಹ ಲೈಂಗಿಕ ಹಗರಣಗಳ ಬಗ್ಗೆ ಕೇಳಿಬರುತ್ತಿದ್ದ ಗುಸುಗುಸು ಸುದ್ದಿಗಳಿಗೆ ವಿಶ್ವಾಸಾರ್ಹತೆಯನ್ನು ನೀಡಿತು.

* ಮಾನ್ಸಿ ಸೋನಿ ಸಂಬಂಧಿತ ಲೈಂಗಿಕ ಹಗರಣ ಅದಾಗಲೇ ಸುಪ್ರೀಂ ಕೋರ್ಟ್ ತಲುಪಿತ್ತು. ಮೋದಿಗೆ ಹತ್ತಿರವಿದ್ದ ಯಾರೋ ಒಬ್ಬರು, ಜೈಲಿನಲ್ಲಿದ್ದ ಐಎಎಸ್ ಅಧಿಕಾರಿಯು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದ ದಾಖಲೆಗಳ ಸಂಪೂರ್ಣ ಪಟ್ಟಿ ನನಗೆ ನೀಡಿದರು; ಆ ಅಧಿಕಾರಿಗೂ ಸೋನಿಯೊಂದಿಗೆ ಸಂಬಂಧವಿತ್ತು.

ಡಾ.ಮಧು ಪೂರ್ಣಿಮಾ ಕಿಷ್ವಾರ್

* ಇದಕ್ಕಿಂತಲೂ ಹೆಚ್ಚಾಗಿ, ಮೋದಿಗೆ ಹತ್ತಿರವಿದ್ದ ಬಹಳಷ್ಟು ಗುಜರಾತಿ ಜನ, ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಮಹಿಳೆಯರೊಂದಿಗೆ ನಡೆಸಿದ ಅಸಭ್ಯ ಸಂಬಂಧಗಳ ಕಥೆಗಳನ್ನು ನನಗೆ ತಿಳಿಸಿದರು.

* ಸಿಎಂ ಆಗಿ ಆಯ್ಕೆಯಾದ ಮೇಲಷ್ಟೆ ಅಲ್ಲ, ಅದಕ್ಕೂ ಮೊದಲು ಅವರು ಆರೆಸ್ಸೆಸ್ ಪ್ರಚಾರಕರಾಗಿದ್ದಾಗ ಮತ್ತು ಬಿಜೆಪಿ ಪದಾಧಿಕಾರಿಯಾಗಿದ್ದಾಗಲೂ ಇದೇ ರೀತಿಯ ವರ್ತನೆಗಳಿದ್ದವು.

* ಆ ಕಥೆಗಳನ್ನು ಕೇಳಿದ ನಂತರ, ನಾನು ಅವರ ಸಾನ್ನಿಧ್ಯವನ್ನು ಅಸಹ್ಯ ಪಡತೊಡಗಿದ್ದೆ; ಮದುವೆ ಸ್ವಾಗತ ಸಮಾರಂಭಗಳಂತಹ ಕಾರ್ಯಕ್ರಮಗಳಿಗೆ, ಮೋದಿಯವರು ಬರಬಹುದೆಂದು ತಿಳಿದಿದ್ದರೆ, ನಾನು ಅಲ್ಲಿಗೆ ಹೋಗುವುದು ತಪ್ಪಿಸಿಕೊಳ್ಳುತ್ತಿದ್ದೆ.

* ಆ ಭಯಾನಕ ವಿವರಗಳಿಂದ ನಾನು ತೀವ್ರ ಮಾನಸಿಕ ಆಘಾತಕ್ಕೆ ತುತ್ತಾಗಿ, 2014ರಲ್ಲಿ ನಾನು ಗಂಭೀರ ಮನೋವೈಕಲ್ಯಕ್ಕೆ ಒಳಗಾದೆ ಮತ್ತು ಅದು ನನ್ನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿತು.

*  2015ರಲ್ಲಿ, ಈ ಆಘಾತಗಳಿಂದ ಚೇತರಿಸಿಕೊಳ್ಳಲು ಕೊಯಂಬತ್ತೂರಿನ ಆಯುರ್ವೇದ ಚಿಕಿತ್ಸಾ ಕೇಂದ್ರದಲ್ಲಿ 21 ದಿನಗಳ ಕಾಲ ಚಿಕಿತ್ಸೆ ಪಡೆಯಬೇಕಾಯ್ತು.

* ಒಮ್ಮೆ, ನಾನು ಈ ಎಲ್ಲಾ ವಿಚಾರಗಳನ್ನು ಒಬ್ಬ ಹಿರಿಯ ಆರ್‌ಎಸ್‌ಎಸ್ ಚಿಂತಕರೊಂದಿಗೆ ಹಂಚಿಕೊಂಡಾಗ, ಅವರು “ನೀವು ಇಷ್ಟು ಬೆಚ್ಚಿಬೀಳುವುದೇಕೆ? ಅವರ ವೈಯಕ್ತಿಕ ಜೀವನ ನಮ್ಮನ್ನು ಏಕೆ ಕಾಡಬೇಕು?” ಎಂದು ಹೇಳಿ ತಳ್ಳಿಹಾಕಿದರು.

* ಅಶ್ಲೀಲ ವಿಡಿಯೋ ಹರಡುವ ಅಮಿತ್ ಮಾಳವೀಯನನ್ನು ಬಿಜೆಪಿಯ ಸಾಮಾಜಿಕ ಮಾಧ್ಯಮ ಮುಖ್ಯಸ್ಥನಾಗಿ ನೇಮಕ ಮಾಡಿರುವುದು, ಪಕ್ಷದ ಉನ್ನತ ನಾಯಕರುಗಳ ಮನೋಭಾವಕ್ಕೆ ಮತ್ತೊಂದು ಸಾಕ್ಷಿಯಾಗಿದೆ.

* ಬಹುಶಃ ಅವರು ಬೇರೆಲ್ಲ ಕ್ಷೇತ್ರಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ್ದರೆ, ಅವರ ಶೋಷಣಾತ್ಮಕ ಲೈಂಗಿಕ ವರ್ತನೆಯನ್ನು ನಾನು ನಿರ್ಲಕ್ಷಿಸುತ್ತಿದ್ದೆನೇನೊ? ಆದರೆ, ಜನಾಂಗೀಯ ದ್ವೇಷವನ್ನು ಹರಡುವಿಕೆಯ ಯತ್ನ; ತಮ್ಮ ಆಕ್ರಮಣಕಾರಿ ವರ್ತನೆಗಳಿಂದ ಹಿಂದೂ ಧರ್ಮಕ್ಕೆ ಮಸಿ ಬಳಿದು, ಹಿಂದೂ ಸಮಾಜವನ್ನು ಸಂಕುಚಿತಗೊಳಿಸಿದ್ದು; ಭೀಮವಾದ ಮತ್ತು ಮುಸ್ಲಿಂರ ವಿರುದ್ಧ ದ್ವೇಷ ಹರಡಲು ಕುಮ್ಮಕ್ಕು ನೀಡಿದ್ದು; ಜಾಗತಿಕ ಮಾಫಿಯಾದ ಎದುರು ಗುಲಾಮಗಿರಿ ವರ್ತನೆ; ಕಥುವಾ ಅತ್ಯಾಚಾರ ಪ್ರಕರಣದಲ್ಲಿ ಹಿಂದೂ ಸಂತ್ರಸ್ತೆಯ ವಿರುದ್ಧ ನಡೆದುಕೊಂಡ ರೀತಿಗಳು… ಇವೆಲ್ಲವೂ ಸೇರಿ, ಅವರ ಮೊದಲ ಅವಧಿಯಲ್ಲಿಯೇ ನಾವು ಒಬ್ಬ ಸೈತಾನಿ ಆಡಳಿತಗಾರನ ಕೈಗೆ ಸಿಕ್ಕಿದ್ದೇವೆ ಎಂಬುದನ್ನು ನನಗೆ ಅರಿವು ಮಾಡಿಸಿದವು.

* ಮೋದಿಯವರ ವ್ಯಕ್ತಿತ್ವದ ಸಮಸ್ಯೆಗಳನ್ನು ಕಂಡ ನಂತರ, ನಮ್ಮ ನಾಯಕರುಗಳ ಲೈಂಗಿಕ ವ್ಯಭಿಚಾರದ ಬಗ್ಗೆ ನಾವೆಲ್ಲ ಹೆಚ್ಚು ಗಮನಹರಿಸಬೇಕಿದೆ ಎಂಬುದು ನನಗೆ ಮನವರಿಕೆಯಾಯ್ತು.

* ಹಣಕಾಸಿನ ವಿಚಾರದಲ್ಲಿ ಭ್ರಷ್ಟರಾಗಿರುವವರಿಗಿಂತಲೂ, ಇಂತಹ ವಿಚಾರಗಳಲ್ಲಿ ಕಾಂಪ್ರಮೈಸ್‌ ಆದವರು ಭಾರತ ವಿರೋಧಿ ಬಾಹ್ಯಶಕ್ತಿಗಳ ಮುಂದೆ ಬೇಗ ಬ್ಲ್ಯಾಕ್‌ಮೇಲ್‌ಗೆ ಈಡಾಗುತ್ತಾರೆ! ಇವರು ಆರಂಭದಿಂದಲೇ ಹೇಗೆ ಬ್ಲ್ಯಾಕ್‌ಮೇಲ್‌ಗೆ ತುತ್ತಾಗುತ್ತಾ ಬಂದಿದ್ದಾರೆ ಎಂಬುದಕ್ಕೆ ಶೀಘ್ರದಲ್ಲೇ ಸಾಕ್ಷ್ಯಗಳನ್ನು ನೀಡುತ್ತೇನೆ. ಆಗ ಈ 56 ಇಂಚು ಎದೆ ತನ್ನ ಕೃತ್ಯಗಳಿಂದ ಮತ್ತಷ್ಟು ಹೆಮ್ಮೆ ಪಡಲಿದೆ.

ಎಂಬುದು ಡಾ. ಮಧು ಪೂರ್ಣಿಮಾ ಕಿಷ್ವಾರ್ ರವರ ಟ್ವೀಟ್ ನಲ್ಲಿರುವ ಅಂಶಗಳಾಗಿವೆ. ಈಗ ಮಧು ಪೂರ್ಣಿಮರನ್ನು ಹತ್ತಿಕ್ಕುವ ಯತ್ನಗಳು ಶುರುವಾಗಿವೆ. ಅವರ ತಮ್ಮ ಅಧಿಕೃತ ಮೈಕ್ರೋಬ್ಲಾಗಿಂಗ್ ಖಾತೆ ಎಕ್ಸ್ ಟ್ವೀಟ್ ಬರಹದ ಮೇಲೆ ಮೋದಿ ಸರ್ಕಾರ ನಿರ್ಬಂಧ ಹೇರುವ ಸಾಧ್ಯತೆಯೂ ಇದೆ.

ಈಗ ಯಾಕೆ ಮೋದಿಯವರ ಮೇಲೆ ಈ ರೀತಿ ಲೈಂಗಿಕ ಹಗರಣಗಳ ಆರೋಪ ಮಾಡಲಾಗುತ್ತಿದೆ. ಇದರ ಹಿಂದೆ ಆರೆಸ್ಸೆಸ್ ಕೈವಾಡ ಏನಾದರೂ ಇದೆಯಾ ಎನ್ನುವ ಅನುಮಾನವೂ ಕಾಡುತ್ತಿದೆ. ಯಾಕೆಂದರೆ ಆರೆಸ್ಸೆಸ್ ಜೊತೆ ಮೋದಿಯವರ ಸಂಬಂಧ ಸುಗಮವಾಗಿಲ್ಲ. ಮೋದಿಯವರ ವರ್ಚಸ್ಸು ಬರಬರುತ್ತಾ ಕಡಿಮೆಯಾಗುತ್ತಿದೆ . ಮೋದಿಯವರ ವಿದೇಶಿ ನೀತಿಗಳಿಂದಾಗಿ ಭಾರತ ತೊಂದರೆಗೆ ಸಿಲುಕಿಕೊಂಡಿದೆ. ಹೀಗಾಗಿ ಮೋದಿಯವರನ್ನೇ ಮುಂದುವರೆಸಿದರೆ ಬಿಜೆಪಿ ಪಕ್ಷಕ್ಕೆ ಹಾನಿಯಾಗುತ್ತದೆ. ಹಾಗೇನಾದರೂ ಆಗಿ ಅಧಿಕಾರ ಕಳೆದುಕೊಂಡರೆ ‘ಹಿಂದೂ ರಾಷ್ಟ್ರ’ದ ಕನಸು ಛಿದ್ರವಾಗುತ್ತದೆ. ಆದ್ದರಿಂದ ಇಂತಹ ಆರೋಪಗಳನ್ನೇ ನೆಪವಾಗಿಟ್ಟುಕೊಂಡು ಮೋದಿಯವರನ್ನು ಬದಲಾಯಿಸಿ ಅವರ ಸ್ಥಾನಕ್ಕೆ ಯೋಗಿಯವರನ್ನು ತರಬೇಕು ಎನ್ನುವುದು ಆರೆಸ್ಸೆಸ್ ನಾಯಕತ್ವದ ಆಶಯವಾಗಿದೆ ಎನ್ನುವ ಗುಸುಗುಸು ಸುದ್ದಿ ಹರಿದಾಡುತ್ತಿದೆ.

ಇಷ್ಟೆಲ್ಲಾ ಅದರೂ ಮಡಿಲ ಮಾಧ್ಯಮಗಳು ತುಟಿ ಬಿಚ್ಚದೇ ಪಂಚೇಂದ್ರಿಯಗಳನ್ನು  ಮುಚ್ಚಿಕೊಂಡು ಕೂತಿವೆ. ಆದರೆ ಸ್ವತಂತ್ರ ಸಾಮಾಜಿಕ ಮಾಧ್ಯಮಗಳು ಬಯಲಾದ ಸತ್ಯಗಳನ್ನು ಬಿಚ್ಚಿಡುತ್ತಿವೆ. ಸಂಸತ್ತಿನಲ್ಲಿ ರಾಹುಲ್ ಗಾಂಧಿಯವರು ಎಫ್ಸ್ಟೀನ್ ಫೈಲ್‌ನಲ್ಲಿ ಮೋದಿ ಹೆಸರಿರುವುದನ್ನು ಪ್ರಸ್ತಾಪಿಸಿದ್ದಾಗ ಬಹುತೇಕ ಗೋದಿ ಮಾಧ್ಯಮಗಳು “ರಾಹುಲ್ ಮೋದಿಯವರ ಚಾರಿತ್ರ್ಯ ಹರಣ ಮಾಡುತ್ತಿದ್ದಾರೆ” ಎಂದು ಅರಚಾಡಿದ್ದವು. ಆದರೆ ಈಗ ಮೋದಿಯವರ ಪಕ್ಷದ ಮುಖಂಡರೇ ಮಾಡುತ್ತಿರುವ ಲೈಂಗಿಕ ಆರೋಪಗಳ ಬಗ್ಗೆ ಉಸಿರೆತ್ತುತ್ತಿಲ್ಲ. ಸುಬ್ರಮಣಿಯನ್ ಸ್ವಾಮಿ ಹಾಗೂ ಮಧು ಪೂರ್ಣಿಮಾ ರವರು ಮಾಡಿರುವ ಗಂಭೀರ ಆರೋಪಗಳು ಚರ್ಚಾರ್ಹವಾಗಿವೆ. ಇಂತಹ ಆರೋಪಗಳು ಬಂದಾಗ ಸ್ವತಃ ಮೋದಿಯವರೇ ಬಾಯಿ ಬಿಡಬೇಕಿದೆ. ಆರೋಪ ಮಾಡಿದವರ ಬಳಿ ಸೂಕ್ತ ಪುರಾವೆಗಳಿದ್ದರೆ ಕೋರ್ಟ್ ಮೊರೆಹೋಗಿ ತನಿಖೆಗೆ ಅದೇಶ ಪಡೆಯಬಹುದಾಗಿದೆ. ವಿರೋಧ ಪಕ್ಷಗಳಾದರೂ ಪ್ರಧಾನಿಗಳ ಮೇಲೆ ಕೇಳಿಬಂದ ಲೈಂಗಿಕ ಹಗರಣದ ಆರೋಪಗಳನ್ನು ಸಂಸತ್ತಿನ ಒಳಗೆ ಹಾಗೂ ಹೊರಗೆ ಚರ್ಚಿಸಬೇಕಿದೆ. ತಾರ್ಕಿಕ ಹಂತಕ್ಕೆ ತೆಗೆದುಕೊಂಡು ಹೋಗಬೇಕಿದೆ.

ಶಶಿಕಾಂತ ಯಡಹಳ್ಳಿ

ರಾಜಕೀಯ ವಿಶ್ಲೇಷಕರು

,

More articles

Latest article

Most read