ಪೆಟ್ರೋಲ್‌, ಡಿಸೇಲ್‌ ಮೇಲಿನ ಅಬಕಾರಿ ಸುಂಕ ಇಳಿಸಿದ ಕೇಂದ್ರ ಸರ್ಕಾರ

ನವದೆಹಲಿ :  ಮಧ್ಯಪ್ರಾಚ್ಯ ಸಂಘರ್ಷದ ಮಧ್ಯೆ ತೈಲ ಕಂಪನಿಗಳ ನಷ್ಟವನ್ನು ಕಡಿಮೆ ಮಾಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ವಿಶೇಷ ಹೆಚ್ಚುವರಿ ಅಬಕಾರಿ ಸುಂಕವನ್ನು ಕಡಿತಗೊಳಿಸಿದೆ.
ಹಣಕಾಸು ಸಚಿವಾಲಯವು ಪೆಟ್ರೋಲ್ ಮೇಲಿನ ವಿಶೇಷ ಅಬಕಾರಿ ಸುಂಕವನ್ನು ಲೀಟರ್‌ಗೆ 13 ರಿಂದ 3 ಕ್ಕೆ ಇಳಿಸಿದೆ. ಡೀಸೆಲ್ ಮೇಲಿನ ಸುಂಕವನ್ನು 10 ರಿಂದ ಶೂನ್ಯಕ್ಕೆ ಇಳಿಸಿದೆ.

ಕೇಂದ್ರ ಅಬಕಾರಿ ನಿಯಮಗಳು ಮತ್ತು ಸುಂಕ ರಚನೆಗಳಿಗೆ ತಿದ್ದುಪಡಿಗಳ ಮೂಲಕ ಬದಲಾವಣೆಗಳನ್ನು ತಿಳಿಸಲಾಗಿದ್ದು, ಇದು ತಕ್ಷಣದಿಂದಲೇ ಜಾರಿಗೆ ಬರಲಿದೆ ಎಂದು ಗೆಜೆಟ್ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಹಾರ್ಮುಜ್‌ ಬಿಕ್ಕಟ್ಟಿನಿಂದ ಪ್ರತಿ ಬ್ಯಾರಲ್‌ ಕಚ್ಚಾ ತೈಲ 100 ಡಾಲರ್‌ಗಳ ಗಡಿ ದಾಟಿದೆ. ಇದರಿಂದ ತೈಲ ಕಂಪನಿಗಳು ಪ್ರತಿ ಲೀಟರ್‌ಗೆ 48.8 ರೂ. ನಷ್ಟ ಅನುಭವಿಸುತ್ತಿವೆ. ಕೇಂದ್ರ ಸರ್ಕಾರದ ಕ್ರಮವು ಕಂಪನಿಗಳಿಗೆ ನಷ್ಟ ಸರಿದೂಗಿಸಲು ನೆರವಾಗಲಿದೆ.

ಪಂಪ್ ಬೆಲೆಗಳ ಮೇಲೆ ಯಾವುದೇ ತಕ್ಷಣದ ಪರಿಣಾಮ ಬೀರುವ ಸಾಧ್ಯತೆಯಿಲ್ಲ. ವಾಯುಯಾನ ಟರ್ಬೈನ್ ಇಂಧನ ಲೀಟರ್‌ಗೆ ರೂ. 50 ವಿಶೇಷ ಹೆಚ್ಚುವರಿ ಅಬಕಾರಿ ಸುಂಕವಾಗಿ, ವಿನಾಯಿತಿಗಳ ಜೊತೆಗೆ ಕೆಲವು ಸಂದರ್ಭಗಳಲ್ಲಿ ಪರಿಣಾಮಕಾರಿ ದರವನ್ನು ಲೀಟರ್‌ಗೆ ರೂ. 29.5 ಗೆ ಮಿತಿಗೊಳಿಸುತ್ತದೆ.

ಅಬಕಾರಿ ಸುಂಕ ಕಡಿತದ ಕುರಿತು ಮಾತನಾಡಿದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಪುರಿ, ಕಚ್ಚಾ ತೈಲ ಬೆಲೆಗಳು ಏರುತ್ತಿರುವಾಗ ಮೋದಿ ಸರ್ಕಾರಕ್ಕೆ ಎರಡು ಆಯ್ಕೆಗಳಿವೆ . ಇತರ ಎಲ್ಲಾ ರಾಷ್ಟ್ರಗಳು ಮಾಡಿದಂತೆ ಭಾರತದ ನಾಗರಿಕರಿಗೆ ಬೆಲೆಗಳನ್ನು ತೀವ್ರವಾಗಿ ಹೆಚ್ಚಿಸುವುದು ಅಥವಾ ಅದರ ಹಣಕಾಸಿನ ಮೇಲೆ ಹೊರೆ ಹೊರುವುದು, ಇದರಿಂದ ಭಾರತೀಯ ನಾಗರಿಕರು ಅಂತರರಾಷ್ಟ್ರೀಯ ಏರಿಳಿತಗಳಿಂದ ಮುಕ್ತರಾಗುತ್ತಾರೆ ಎಂದು ಹೇಳಿದ್ದಾರೆ.

ನಿನ್ನಯಷ್ಟೇ ಭಾರತದ ಬಳಿ ಪ್ರಸ್ತುತ 60 ದಿನಗಳಿಗೆ ಆಗುವಷ್ಟು ತೈಲ ದಾಸ್ತಾನು ಮತ್ತು 30 ದಿನಗಳಿಗೆ ಆಗುವಷ್ಟು ಎಲ್‌ಪಿಜಿ ಸಿಲಿಂಡರ್‌ಗಳ ಪೂರೈಕೆ ಇದೆ ಎಂದು ಕೇಂದ್ರ ಸರ್ಕಾರ ತಿಳಿಸಿತ್ತು.

ಇನ್ನು ನಯಾರ ಎನರ್ಜಿ ಖಾಸಗಿ ಸಂಸ್ಥೆಯು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಕ್ರಮವಾಗಿ 5.3 ರೂ. ಮತ್ತು 3 ರೂ.ಗಳಷ್ಟು ಹೆಚ್ಚಿಸಿರುವುದು ಮಾರುಕಟ್ಟೆಯ ಮೇಲೆ ಮತ್ತಷ್ಟು ಪರಿಣಾಮ ಬೀರಿದೆ ಎನ್ನಲಾಗಿದೆ. 

More articles

Latest article

Most read