ಪಿಎಂಎಲ್ಎ, ಯುಎಪಿಎ ದುರ್ಬಳಕೆ : ಕಿಡಿ ಹೊತ್ತಿಸಿದ ಸುಪ್ರೀಂ ಕೋರ್ಟ್ ನ್ಯಾ. ಭುಯಾನ್ ಹೇಳಿಕೆ

ಬೆಂಗಳೂರು : “ನ್ಯಾಯಾಂಗದಲ್ಲಿ ಅನೇಕರು ‘more loyal than the king’ ಸಿಂಡ್ರೋಮ್ನಿಂದ ಬಳಲುತ್ತಿದ್ದಾರೆ. ಇದರಿಂದಾಗಿ ಜನರು ತಿಂಗಳುಗಳ ಕಾಲ ಜೈಲುಗಳಲ್ಲಿ ಬಂಧಿತರಾಗಿ ಉಳಿಯುತ್ತಾರೆ” ಎಂಬ ಸುಪ್ರೀಂ ಕೋರ್ಟ್ ನ್ಯಾಯಾಧೀಶ ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಅವರ ಹೇಳಿಕೆ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

ಸುಪ್ರೀಂ ಕೋರ್ಟ್ ನ್ಯಾಯಾಧೀಶ ಉಜ್ಜಲ್ ಭುಯಾನ್ ಅವರು ನ್ಯಾಯಾಂಗದ ಒಳಗೆ ‘ರಾಜನಿಗಿಂತ ಹೆಚ್ಚು ನಿಷ್ಠಾವಂತ’ ಸಿಂಡ್ರೋಮ್ ಇದೆ ಇದರ ಪರಿಣಾಮವಾಗಿ ಆರೋಪಿಗಳು ತಿಂಗಳುಗಳು ಮತ್ತು ವರ್ಷಗಳ ಕಾಲ ಜೈಲುಗಳಲ್ಲಿ ಬಂಧಿತರಾಗಿ ಬಳಲುತ್ತಿದ್ದಾರೆ ಎಂದು ಹೇಳಿದ್ದರು.

ಬೆಂಗಳೂರಿನಲ್ಲಿ ಮಾರ್ಚ್ 22ರಂದು ನಡೆದ ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ನ ಮೊದಲ ರಾಷ್ಟ್ರೀಯ ಸಮ್ಮೇಳನದಲ್ಲಿ ‘ವಿಕಸಿತ ಭಾರತದಲ್ಲಿ ನ್ಯಾಯಾಂಗದ ಪಾತ್ರ’ ಕುರಿತು ನಡೆದ ಪ್ಯಾನಲ್ ಚರ್ಚೆಯಲ್ಲಿ ನ್ಯಾಯಾಧೀಶ ಭುಯಾನ್ ಮಾತನಾಡಿದ್ದರು.

ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ, 2002 ಬಗ್ಗೆ ಮಾತನಾಡುತ್ತಾ, “ಪಿಎಂಎಲ್ಎ ಒಂದು ಶಕ್ತಿಶಾಲಿ ಆಯುಧ. ಆದರೆ ಯಾವುದೇ ಆಯುಧವನ್ನು ಅತಿಯಾಗಿ ಬಳಸಿದರೆ ಅದರ ಪ್ರಭಾವ ಕುಸಿಯುತ್ತದೆ” ಎಂದು ಎಚ್ಚರಿಸಿದರು. ಅದೇ ರೀತಿ ಅಕ್ರಮ ಚಟುವಟಿಕೆಗಳ ತಡೆಗಟ್ಟುವಿಕೆ ಕಾಯಿದೆ ಅಡಿಯಲ್ಲಿ ವರ್ಷಕ್ಕೆ ಸಾವಿರಾರು ಬಂಧನಗಳಾಗುತ್ತಿದ್ದರೂ ಶಿಕ್ಷೆ ದರ ಕೇವಲ 5% ಅಥವಾ ಅದಕ್ಕಿಂತ ಕಡಿಮೆ ಇದೆ, ಇಂತಹ ಪರಿಸ್ಥಿತಿಯಲ್ಲಿ ಆರೋಪಿಗಳು ವರ್ಷಗಳ ಕಾಲ ಜೈಲಿನಲ್ಲಿರುವುದು ವಿಕಸಿತ ಭಾರತದ ಮಾದರಿಯಾಗಲು ಸಾಧ್ಯವೇ ಎಂದು ಪ್ರಶ್ನಿಸಿದ್ದರು.

ಸಾಮಾಜಿಕ ಮಾಧ್ಯಮ ಪೋಸ್ಟ್ಗಳು, ಮೀಮ್ಗಳು, ಪ್ರತಿಭಟನೆಗಳಂತಹ ಕಾರಣಗಳಿಗೆ ಸಹ ಸುಮಾರು ಎಫ್ಐಆರ್ಗಳು ನೋಂದಾಯಿಸಲಾಗುತ್ತಿರುವುದನ್ನು ಖಂಡಿಸಿದ ಅವರು ಇಂತಹ ಕ್ಷುಲ್ಲಕ ವಿಷಯಗಳಿಗೆ ಕೋರ್ಟ್ಗಳ ಸಮಯ ವ್ಯಯವಾಗುತ್ತಿದೆ ಎಂದು ತಿಳಿಸಿದರು.

‘ವಿಕಸಿತ ಭಾರತ’ ಎಂಬ ರಾಜಕೀಯ ಗುರಿಗೆ ನ್ಯಾಯಾಂಗವನ್ನು ಸಂಪೂರ್ಣವಾಗಿ ಜೋಡಿಸುವುದು ಸರಿಯಲ್ಲ ಎಂದು ಹೇಳಿದ ಅವರು “ನ್ಯಾಯಾಂಗವು ನಿರಂತರ ವಿಮರ್ಶಕನಾಗಲೂ ಬಾರದು, ಚೀರ್ಲೀಡರ್ ಆಗಲೂ ಬಾರದು. ಅದು ಸದಾ ಎಚ್ಚರದಲ್ಲಿರುವ ಕಾವಲುಗಾರ ಆಗಿರಬೇಕು” ಎಂದು ಒತ್ತಾಯಿಸಿದರು. ವಿಕಸಿತ ಭಾರತದಲ್ಲಿ ಚರ್ಚೆ, ಭಿನ್ನಾಭಿಪ್ರಾಯ ಮತ್ತು ವಿರೋಧಕ್ಕೆ ಹೆಚ್ಚು ಸ್ಥಳಾವಕಾಶವಿರಬೇಕು, ವಿರೋಧವನ್ನು ಅಪರಾಧೀಕರಿಸಬಾರದು ಎಂದು ಅವರು ಹೇಳಿದರು.

ದಲಿತರ ವಿರುದ್ಧದ ಸಾಮಾಜಿಕ ಅಸಮಾನತೆಗಳ ಬಗ್ಗೆಯೂ ಅವರು ತೀವ್ರ ಕಳಕಳಿ ವ್ಯಕ್ತಪಡಿಸಿದರು. “ದಲಿತ ಮಹಿಳೆಯೊಬ್ಬರು ಅಡುಗೆ ಮಾಡಿದ ಆಹಾರವನ್ನು ಮಕ್ಕಳು ತಿನ್ನಬಾರದು ಎಂದು ಪೋಷಕರು ಆಗ್ರಹಿಸುವುದು ಅಥವಾ ದಲಿತರ ಮೇಲೆ ಮೂತ್ರ ವಿಸರ್ಜಿಸುವಂತಹ ಘಟನೆಗಳು ನಡೆಯುವುದು ವಿಕಸಿತ ಭಾರತದ ಮಾದರಿಯಾಗಲು ಸಾಧ್ಯವಿಲ್ಲ” ಎಂದು ಅವರು ಹೇಳಿದರು.

ನ್ಯಾಯಾಂಗದ ಏಕೈಕ ಬಲವು ಜನರ ವಿಶ್ವಾಸ ಎಂದ ಅವರು “ನ್ಯಾಯಾಂಗಕ್ಕೆ ಪರ್ಸ್ (ಹಣ) ಅಥವಾ ಸ್ವರ್ಡ್ (ಖಡ್ಗ) ಇಲ್ಲ. ಅದಕ್ಕಿರುವ ಏಕೈಕ ಸಂಪತ್ತು ಜನರ ಒಳ್ಳೆಯ ಭಾವನೆ” ಎಂದು ಹೇಳಿದರು.

ಈ ಹೇಳಿಕೆಗಳು ವಿವಿಧ ಮಾಧ್ಯಮಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

More articles

Latest article

Most read