ಅಮೆರಿಕ-ಇಸ್ರೇಲ್ ದಾಳಿ ಕುರಿತು ಮ್ಯಾಕ್ರನ್ ನಿಲುವಿಗೆ ಇರಾನ್ ವಿದೇಶಾಂಗ ಸಚಿವ ಅರಾಗ್ಚಿ ಕಿಡಿ

ಇತ್ತೀಚೆಗೆ ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರು ನಾಗರಿಕ ಮೂಲಸೌಕರ್ಯಗಳ ಮೇಲಿನ ದಾಳಿಯನ್ನು ನಿಲ್ಲಿಸುವಂತೆ ‘ಎಕ್ಸ್’ (X) ನಲ್ಲಿ ಪೋಸ್ಟ್ ಮಾಡಿದ್ದರು. ಇದಕ್ಕೆ ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ಚಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ “ಇರಾನ್ ವಿರುದ್ಧ ಇಸ್ರೇಲ್-ಅಮೆರಿಕ ಯುದ್ಧವನ್ನು ಮ್ಯಾಕ್ರನ್ ಒಂದೇ ಒಂದು ಪದದ ಮೂಲಕ ಖಂಡಿಸಿಲ್ಲ. ಟೆಹ್ರಾನ್‌ನಲ್ಲಿ ಇಂಧನ ಸಂಗ್ರಹಾಗಾರವನ್ನು ಸ್ಫೋಟಿಸಿ ಲಕ್ಷಾಂತರ ಜನರನ್ನು ವಿಷಕಾರಿ ಅನಿಲಕ್ಕೆ ಒಡ್ಡಿದಾಗಲೂ ಅವರು ಇಸ್ರೇಲ್ ಅನ್ನು ಖಂಡಿಸಲಿಲ್ಲ. ಅವರ ಪ್ರಸ್ತುತ “ಕಳವಳ” ನಮ್ಮ ಅನಿಲ ಸೌಲಭ್ಯಗಳ ಮೇಲೆ ಇಸ್ರೇಲ್ ನಡೆಸಿದ ದಾಳಿಯ ನಂತರ ಬಂದಿಲ್ಲ. ಇದು ನಮ್ಮ ಪ್ರತಿ ದಾಳಿಯ ನಂತರ ಬಂದಿತು ದುಃಖಕರ” ಎಂದು ಟೀಕಿಸಿದ್ದಾರೆ.  

ಹಾಗೆ ಇನ್ನೊಂದು ಪೋಸ್ಟ್‌ನಲ್ಲಿ “ಇರಾನಿಯನ್ನರು ಮತ್ತು ಅಮೆರಿಕನ್ನರ ಮೇಲೆ ಹೇರಲಾದ ಈ ‘ಉದ್ದೇಶಪೂರ್ವಕ ಯುದ್ಧ’ (War of choice) ಶುರುವಾಗಿ ಕೇವಲ ಮೂರು ವಾರಗಳಾಗಿವೆ ಅಷ್ಟೆ. ಈ $200 ಬಿಲಿಯನ್ ಎಂಬುದು ಕೇವಲ ಒಂದು ಸಣ್ಣ ಮುನ್ಸೂಚನೆ ಮಾತ್ರ (Tip of the iceberg). ಅಮೆರಿಕದ ಆರ್ಥಿಕತೆಗೆ ಅಪ್ಪಳಿಸಲಿರುವ ಒಂದು ಟ್ರಿಲಿಯನ್ ಡಾಲರ್ ಮೊತ್ತದ ‘ಇಸ್ರೇಲ್ ಫಸ್ಟ್ ಟ್ಯಾಕ್ಸ್’ ಗಾಗಿ ಸಾಮಾನ್ಯ ಅಮೆರಿಕನ್ನರು ಬೆಂಜಮಿನ್ ನೆತನ್ಯಾಹು ಮತ್ತು ಕಾಂಗ್ರೆಸ್‌ನಲ್ಲಿರುವ ಅವರ ಬೆಂಬಲಿಗರಿಗೆ ಧನ್ಯವಾದ ಹೇಳಬಹುದು.” ಎಂದು ತಮ್ಮ X ಖಾತೆಯಲ್ಲಿ ಬರೆದುಕೊಂಡಿದ್ದಾರೆ.

More articles

Latest article

Most read