ಕರ್ನಾಟಕ ವೃತ್ತಿಗಳ ಮೇಲಿನ ತೆರಿಗೆ : ತಿದ್ದುಪಡಿ ವಿಧೇಯಕ ಮಂಡಿಸಿದ ಸಚಿವ ಪ್ರಿಯಾಂಕ್ ಖರ್ಗೆ

ಬೆಂಗಳೂರು, ಮಾರ್ಚ್ 18 : 2026ನೇ ಸಾಲಿನ ಕರ್ನಾಟಕ ವೃತ್ತಿಗಳ, ಕಸುಬುಗಳ, ಅಜೀವಿಕೆಗಳ ಮತ್ತು ಉದ್ಯೋಗಗಳ ಮೇಲಣ ತೆರಿಗೆ (ತಿದ್ದುಪಡಿ) ವಿಧೇಯಕವನ್ನು ಮುಖ್ಯಮಂತ್ರಿಗಳ ಪರವಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವರು ವಿಧಾನಸಭೆಯಲ್ಲಿ ಮಂಡಿಸಿದರು.

ಪ್ರಸ್ತಾವಿತ ತಿದ್ದುಪಡಿ ವಿಧೇಯಕವು ತೆರಿಗೆ ನಿರ್ವಹಣೆಯನ್ನು ಕ್ರಮಬದ್ಧಗೊಳಿಸುವುದು, ಸ್ವಯಂ ಅನುಸರಣೆಯನ್ನು ಸುಧಾರಿಸುವುದು ಹಾಗೂ ಇಲಾಖೆಯ ಸಂಪನ್ಮೂಲಗಳನ್ನು ಸಮರ್ಥವಾಗಿ ಬಳಕೆಯನ್ನು ಸಾಧ್ಯಗೊಳಿಸುವುದನ್ನು ಉದ್ದೇಶಿಸಿದೆ ಎಂದು ವಿಧೇಯಕದ ಪ್ರಸ್ತಾವವನ್ನು ಸಚಿವರು ಮಂಡಿಸಿ, ವಿಧೇಯಕದ ಪ್ರಸ್ತಾವವನ್ನು ಸಚಿವರು ಸದನದಲ್ಲಿ ಮಂಡಿಸಿದರು.

ಸದರಿ ಪ್ರಸ್ತಾವವನ್ನು ವಿಧಾನಸಭೆಯಲ್ಲಿ ಅಂಗೀಕಾರವಾಯಿತು.

More articles

Latest article

Most read