ಆಸ್ಕರ್ 2026: ಬಿ. ಸರೋಜಾದೇವಿ ಮತ್ತು ಕೋಟ ಶ್ರೀನಿವಾಸ ರಾವ್ ಅವರಿಗೆ ಅಕಾಡೆಮಿಯಿಂದ ಗೌರವ

ವಿಶ್ವ ಚಿತ್ರರಂಗದ ಅತ್ಯುನ್ನತ ಗೌರವ ಎಂದೇ ಪರಿಗಣಿಸಲಾಗುವ 98ನೇ ಅಕಾಡೆಮಿ ಪ್ರಶಸ್ತಿ ಸಮಾರಂಭದಲ್ಲಿ (ಆಸ್ಕರ್ 2026), ಭಾರತೀಯ ಚಿತ್ರರಂಗದ ದ್ರುವತಾರೆಗಳಿಗೆ ಅಭಿನಂದನಾರ್ಹ ಗೌರವ ಸಂದಿದೆ. ಅಕಾಡೆಮಿಯ ಅಧಿಕೃತ ‘ಇನ್ ಮೆಮೋರಿಯಂ’ (In Memoriam) ಪಟ್ಟಿಯಲ್ಲಿ ಭಾರತೀಯ ಚಿತ್ರರಂಗದ ಹಿರಿಯ ನಟರಾದ ಬಿ. ಸರೋಜಾದೇವಿ ಮತ್ತು ಕೋಟ ಶ್ರೀನಿವಾಸ ರಾವ್ ಅವರ ಹೆಸರನ್ನು ಸೇರಿಸುವ ಮೂಲಕ ಅವರ ಸುದೀರ್ಘ ಸಾಧನೆಯನ್ನು ಜಾಗತಿಕ ಮಟ್ಟದಲ್ಲಿ ಸ್ಮರಿಸಲಾಗಿದೆ.

​ವಿಶೇಷವಾಗಿ, ಏಳು ದಶಕಗಳ ಕಾಲ ಭಾರತೀಯ ಸಿನಿಮಾದಲ್ಲಿ ಅಭಿನಯ ಶಾರದೆಯಾಗಿ ಮೆರೆದ ಬಿ. ಸರೋಜಾದೇವಿ ಅವರ ಸಾಧನೆಯನ್ನು ಆಸ್ಕರ್ ಗುರುತಿಸಿರುವುದು ನಮ್ಮ ಹೆಮ್ಮೆಯ ಕನ್ನಡ ಚಿತ್ರರಂಗಕ್ಕೆ ಸಂದ ಅತಿದೊಡ್ಡ ಗೌರವವಾಗಿದೆ. 1955ರಲ್ಲಿ ‘ಮಹಾಕವಿ ಕಾಳಿದಾಸ’ ಚಿತ್ರದ ಮೂಲಕ ಕನ್ನಡಿಗರ ಹೃದಯ ಗೆದ್ದ ಅವರು, 200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ಭಾರತೀಯ ಚಿತ್ರರಂಗದ ಆಸ್ತಿಯಾಗಿದ್ದರು. ಇವರೊಂದಿಗೆ ಬಾಲಿವುಡ್‌ನ ಧರ್ಮೇಂದ್ರ, ಮನೋಜ್ ಕುಮಾರ್ ಮತ್ತು ಸಾಕ್ಷ್ಯಚಿತ್ರ ನಿರ್ಮಾಪಕ ಎಸ್. ಕೃಷ್ಣಸ್ವಾಮಿ ಅವರ ಹೆಸರನ್ನೂ ಸ್ಮರಿಸಿರುವುದು ಭಾರತೀಯರಿಗೆ ಹೆಮ್ಮೆಯ ಸಂಗತಿ.

More articles

Latest article

Most read